ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿಯವರ ಕುಟುಂಬ ಸಂಸ್ಕಾರವುಳ್ಳ ಕುಟುಂಬ ಪರಮಪೂಜ್ಯ ಮಾದಾರ ಚೆನ್ನಯ್ಯ ಸ್ವಾಮೀಜಿ ಅಭಿಪ್ರಾಯ
ನಾಯಕನಹಟ್ಟಿ :: ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ಸಂಸ್ಕಾರವುಳ್ಳಂತಹ ಕುಟುಂಬ ಹುಟ್ಟಿ ಬಂದಂತವರು ಅವರು ಶಾಸಕರಾದ ಸಂದರ್ಭದಲ್ಲಿ ಇಡೀ ಕ್ಷೇತ್ರವನ್ನ ಅಣ್ಣ ತಮ್ಮ ಎಂಬ ಮನೋಭಾವವನ್ನು ಬೆಳೆಸಿಕೊಂಡು ಕ್ಷೇತ್ರದ ಪ್ರತಿಯೊಬ್ಬರಿಗೂ ಜನಸ್ನೇಹಿಯಾಗಿ ಜನನಾಯಕರಾಗಿ ಸೇವೆ ಸಲ್ಲಿಸಿದಂತವರು ಎಂದು ಪರಮಪೂಜ್ಯ ಮಾದರ ಚೆನ್ನಯ್ಯ ಸ್ವಾಮೀಜಿ ಹೇಳಿದ್ದಾರೆ.
ಹೋಬಳಿಯ ನೇರಲಗುಂಟೆ ಗ್ರಾಮದ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ರವರ ನಿವಾಸದಲ್ಲಿ ಹಮ್ಮಿಕೊಂಡಿದ್ದ ಪುತ್ರ ದಿವಂಗತ ಜಿ ಟಿ ಶಿವಕುಮಾರ್ ಅವರ ಕೈಲಾಸ ಸಮರಾಧನೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಪೂಜ್ಯರು ಜಾತಿಭೇದ ಎನ್ನದೆ ಉತ್ತಮ ಜನ ನಾಯಕರಾಗಿ ಜನಸೇವೆ ಮಾಡುತ್ತಾ ಬಂದಂತವರು ಮಾಜಿ ಶಾಸಕ ತಿಪ್ಪೇಸ್ವಾಮಿಯವರು ಕ್ಷೇತ್ರದಲ್ಲಿ ಅತಿ ಹೆಚ್ಚು ಎಸ್ಸಿ ಎಸ್ಟಿ ಹಿಂದುಳಿದ ಸಮುದಾಯದವರು ಇದ್ದು ಒಳ್ಳೆಯ ಅಣ್ಣ ತಮ್ಮಂದಿರ ರೀತಿ ಬಾಂಧವ ಹೊಂದಿದಂತವರು ಮಾಜಿ ಶಾಸಕ ಎಸ್
ತಿಪ್ಪೆಸ್ವಾಮಿಯವರು ಅವರ ಸೇವೆ ಶ್ಲಾಘನೀಯ
ಅವರ ಪುತ್ರ ಜಿ ಟಿ ಶಿವಕುಮಾರ್ ಅವರು ಒಳ್ಳೆಯ ತಂದೆಗೆ ತಕ್ಕ ಮಗನಾಗಿ ಬೆಳೆದವರು ವಿಧಿ ಆದಷ್ಟು ಬೇಗ ಕರೆದುಕೊಂಡಿದೆ ಮಾಜಿ ಶಾಸಕ ತಿಪ್ಪೇಸ್ವಾಮಿಯವರ ಕುಟುಂಬಕ್ಕೆ ಆ ನೋವನ್ನ ಬರಿಸುವ ಶಕ್ತಿ ಭಗವಂತ ಮತ್ತು ಕ್ಷೇತ್ರದ ಜನತೆ ಕರುಣಿಸಲಿ ತಿಳಿಸಿದರು.
ವಿಜಯಮಾಂತೇಶ್ವರ ಮಠದ ಬಸವಲಿಂಗ ಮಹಾಸ್ವಾಮಿಗಳು ಮಾತನಾಡಿ ಮಾಜಿ ಶಾಸಕ ತಿಪ್ಪೇಸ್ವಾಮಿ ಶಿಕ್ಷಕರಾಗಿ ಕಲಾವಿದರಾಗಿ ಶಾಸಕರಾಗಿ ಒಳ್ಳೆಯ ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಾ ಬಂದಂತವರು ದೇವರು ಅವರ ಪುತ್ರರ ನಿಧನ ತುಂಬಾ ನೋವನ್ನ ತಂದಿದೆ ನೋವನ್ನ ಮರೆಸುವ ಶಕ್ತಿ ಭಗವಂತ ಕರುಣಿಸಲಿ ಎಂದು ಹೇಳಿದ್ದಾರೆ.
ಇದೇ ಸಂದರ್ಭದಲ್ಲಿ
ಮುಸ್ಟೂರೇಶ್ವರ ಶಾಖ ಮಠದ ರುದ್ರಮುನಿ ಸ್ವಾಮೀಜಿ ಮಾತನಾಡಿ ತಿಪ್ಪೇಸ್ವಾಮಿ ಒಳ್ಳೆಯ ಸರಳ ಸಜ್ಜನ ಹೃದಯವಂತ ಅವರು ಮೊಳಕಾಲ್ಮೂರು ಕ್ಷೇತ್ರದ ಒಂದು ಶಕ್ತಿ ಜನಾನುರಾಗಿ ಕ್ಷೇತ್ರದ ಜನತೆ ಇವರ ಬೆಂಬಲಕ್ಕೆ ನಿಲ್ಲಿ ಎಂದು ಕರೆ ನೀಡಿದರು.
ವಿವಿಧ ಮಠಾಧೀಶರಾದ ಮುರುಘರಾಜೇಂದ್ರ ಮಠದ ಡಾ ಶಿವಕುಮಾರ ಸ್ವಾಮೀಜಿ ಮಾದಾರ ಚೆನ್ನಯ್ಯ ಸ್ವಾಮೀಜಿ ಮುಸ್ಟೂರೇಶ್ವರ ರುದ್ರಮುನಿ ಸ್ವಾಮೀಜಿ ವಿಜಯಮಾಂತೇಶ್ವರ ಮಠದ ಬಸವಲಿಂಗ ಸ್ವಾಮೀಜಿ ಕಾರ್ಯಕ್ರಮಕ್ಕೆ ಬಂದು ಜಿ ಟಿ ಶಿವಕುಮಾರ್ ರವರ ಭಾವಚಿತ್ರಕ್ಕೆ ಭಾವಚಿತ್ರಕ್ಕೆ ಪುಷ್ಪಾರ್ಚನೆ ಆಶೀರ್ವದಿಸಿ ಭಾಗವಹಿಸಿದ್ದರು
ಈ ಸಂದರ್ಭದಲ್ಲಿ ಮಾಜಿ ಶಾಸಕ ಎಸ್ ತಿಪ್ಪೇಸ್ವಾಮಿ ರವರ ಕುಟುಂಬಸ್ಥರಾದ ಮೃತರ ಧರ್ಮಪತ್ನಿ ಅಶ್ವಿನಿ ಬಿ ಕೆ ಮಗ ಧ್ರುವ ಸೂರ್ಯ ಗೌಡ, ಐಎಸ್ಎಫ್ ನಿವೃತ್ತ ಎಸ್ ಮುತ್ತಯ್ಯ, ಶ್ರೀಮತಿ ಎಚ್ ಪಿ ಶಶಿರೇಖಾ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ಶ್ರೀ ಎಸ್ ದಡ್ಡಯ್ಯ, ಶ್ರೀ ಎಸ್ ಚಂದ್ರಣ್ಣ, ಶ್ರೀ ಬಿ ಎಸ್ ಮಂಜುನಾಥ್ ,ಉಪನ್ಯಾಸಕರು ಎಚ್ಪಿಸಿ ಕಾಲೇಜ್ ಚಳ್ಳಕೆರೆ, ಶ್ರೀಮತಿ ಶಾಂತಮ್ಮ ಶ್ರೀ ಬಿ ಕುಮಾರ್ ಚಿತ್ರದುರ್ಗ,
ಮತ್ತು ಸ್ಥಳೀಯ ಮೊಳಕಾಲ್ಮೂರು ಹಿರಿಯ ಕಾಂಗ್ರೆಸ್ ಮುಖಂಡ ಪಟೇಲ್
ಪಾಪನಾಯಕ, ಎಂ ವೈ ಟಿ ಸ್ವಾಮಿ, ಗುರುಲಿಂಗಪ್ಪ, ಸೇರಿದಂತೆ ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ಎಲ್ಲಾ ಜನಪ್ರತಿನಿಧಿಗಳು ಕಲಾವಿದರು ಕಾರ್ಯಕರ್ತರು ಊರಿನ ಸಮಸ್ತ ಗ್ರಾಮಸ್ಥರು ಸೇರಿದಂತೆ ಉಪಸ್ಥಿತರಿದ್ದರು