ಚಳ್ಳಕೆರೆ : ಮುಂಗಾರು ಹಂಗಾಮಿನ ಬೆಳೆಗಳ ಬೆಳೆ ವಿಮೆಯನ್ನು ಈ ತಿಂಗಳ ಅಂತ್ಯದೊಳಗೆ ಕಡ್ಡಾಯವಾಗಿ ಎಲ್ಲ ರೈತರು ಪಾವತಿಸುವಂತೆ ತಹಶೀಲ್ದಾರ್ ಎನ್.ರಘುಮೂರ್ತಿ ಹೇಳಿದರು


ಅವರು ಇಂದು ತಾಲೂಕ ಕಚೇರಿಯಲ್ಲಿ ರೈತ ಮುಖಂಡರು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಮತ್ತು ಬೆಳೆ ವಿಮೆ ಕಂಪನಿಗಳ ಸಭೆ ಆಯೋಜಿಸಿದ್ದು ಈ ಸಭೆಯಲ್ಲಿ ಮಾತನಾಡಿದರು ಮುಂಗಾರಿನ ಶೇಂಗಾ ಬೆಳೆಗೆ ಅಗತ್ಯವಿರುವಂತಹ ಮಳೆ ಪ್ರಮಾಣ ಇನ್ನೂ ಬಿದ್ದಿಲ್ಲ


ಈ ಮಾಸದ ಅಂತ್ಯದೊಳಗೆ ಮಳೆ ಬಂದಲ್ಲಿ ಶೇಂಗಾ ಬೆಳೆಗೆ ಪೂರಕವಾದ ವಾತಾವರಣವಿದೆ ಮಳೆ ಬಾರದೆ ಇದ್ದಲ್ಲಿ ಶೇಂಗಾ ಬೆಳೆಗೆ ಹಿನ್ನಡೆಯಾಗುವಂತ ಸಂಭವಿರುವುದರಿAದ ಶೇಂಗಾ ಬೆಳೆಯನ್ನು ಬಿತ್ತಿದ ಹಾಗೂ ಬಿತ್ತಲು ಉದ್ದೇಶಿಸಿರುವ ಎಲ್ಲ ರೈತರುಗಳು ಕಡ್ಡಾಯವಾಗಿ ಬೆಳೆ ವಿಮೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಸಂಬAಧಿಸಿದ ಬ್ಯಾಂಕಿಗೆ ಪಾವತಿ ಮಾಡಲು ಮತ್ತು ಬ್ಯಾಂಕ್ ಅಧಿಕಾರಿಗಳು ಕೂಡ ವಿಮೆ ಹಣವನ್ನು ಪಾವತಿ ಮಾಡುವ ಸಂದರ್ಭದಲ್ಲಿ ಎಲ್ಲಾ ಪರಿಪೂರ್ಣ ದಾಖಲೆಗಳನ್ನು ಪಡೆದು ಬೆಳೆ ವಿಮೆಯನ್ನು ಪಾವತಿ ಮಾಡಿಕೊಳ್ಳತಕ್ಕದ್ದು ಬೆಳೆ ವಿಮೆ ಹಣವನ್ನು ಪಾವತಿಸಿದ ನಂತರ ಬೆಳೆ ವಿಮೆ ಪರಿಹಾರ ನೀಡುವ ಸಂದರ್ಭದಲ್ಲಿ ರೈತರುಗಳನ್ನು ವೃತ ಅಲೆದಾಡಿಸುವುದು ತಪ್ಪಬೇಕು


ಈ ಬಗ್ಗೆ ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ರೈತರುಗಳಿಗೆ ಮತ್ತು ಬ್ಯಾಂಕ್ ಅಧಿಕಾರಿಗಳಿಗೆ ನಿರ್ದಿಷ್ಟವಾದ ಸೂಚನೆ ಮತ್ತು ಸಹಕಾರ ನೀಡಬೇಕೆಂದು ಸೂಚನೆ ನೀಡಿದರು.
ಸಭೆಯಲ್ಲಿ ಉಪಸ್ಥಿತರಿದ್ದಂತ ರೈತ ಸಂಘದ ಅಧ್ಯಕ್ಷÀ ಸೋಮದ್ದುರಂಗಸ್ವಾಮಿ, ರೆಡ್ಡಿಹಳ್ಳಿವೀರಣ್ಣ ಮತ್ತು ಭೂತಯ್ಯ ಇವರುಗಳು ಮಾತನಾಡಿ, ಕಡ್ಡಾಯವಾಗಿ ರೈತರ ಬೆಳೆದಂಥ ಬೆಳೆಗಳು ಪಹಣಿಯಲ್ಲಿ ನಮೂದಾಗಬೇಕು ತಾಲೂಕಿನ ಎಲ್ಲಾ ರೈತರಿಗೂ ಕೂಡ ಬೆಳೆ ವಿಮೆಯ ಹಣಪಾವತಿ ಆಗಬೇಕು 2019-20 ರಲ್ಲಿನ ಸಾಲಿನಲ್ಲಿ ತಾಲೂಕಿನ ಹಲವು ರೈತರಿಗೆ ಬೆಳೆ ವಿಮೆಹಣ ಬಂದಿಲ್ಲ ಇದು ಪರಿಪೂರ್ಣವಾಗಿ ಪಾವತಿ ಆಗಬೇಕು ಗ್ರಾಮದಲ್ಲಿ ಬೆಳೆ ಕಟಾವು ಉಪಯೋಗ ಮಾಡುವಂತ ಗ್ರಾಮ ಲೆಕ್ಕಾಧಿಕಾರಿಗಳು ಮತ್ತು ಸ್ಥಳೀಯವಾಗಿ ನೇಮಿಸಿರುವಂತ ಅಧಿಕಾರಿಗಳು ಯಾವುದೇ ವ್ಯತ್ಯಾಸವಾಗದಂತೆ ಪರಿಪೂರ್ಣವಾಗಿ ಕೆಲಸ ಮಾಡಬೇಕು ಎಂದು ಆಗ್ರಹಿಸಿದರು.

ಬೆಳೆ ವಿಮಾ ಕಂಪನಿಗಳು ವೈಜ್ಞಾನಿಕವಾಗಿ ತಮ್ಮ ಕೆಲಸವನ್ನು ನಿರ್ವಹಿಸದೆ ರೈತರಿಗೆ ಸದಾ ಮಾರಕವಾದಂತ ಕೆಲಸ ಮಾಡಿಕೊಂಡು ಬಂದಿವೆ ಕೇಂದ್ರ ಸರ್ಕಾರದ ಮಾನದಂಡದಡಿ ಬೆಳೆವಿಮೆ ಕಾರ್ಯ ನಿರ್ವಹಿಸಿದರೆ ರೈತರಿಗೆ ತುಂಬಾ ಅನ್ಯಾಯವಾಗುತ್ತದೆ ಇವತ್ತಿನ ಸಭೆಯ ಠರಾವುಗಳನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿ ಕೃಷಿ ಮಾಡಿದಂತಹ ಎಲ್ಲ ರೈತರಿಗೂ ಮತ್ತು ಬೆಳೆ ವಿಮೆ ಪಾವತಿಸಿದಂತ ಎಲ್ಲ ರೈತರಿಗೂ ವಿಮೆಯ ಪರಿಹಾರ ಮಂಜೂರು ಆಗಬೇಕೆಂದು ಆಗ್ರಹಿಸಿದರು.


ಕೃಷಿ ಇಲಾಖೆ ಸಹಾಯಕ ನಿರ್ದೇಶಕರಾದಂತಹ ಅಶೋಕ್ ಮಾತನಾಡಿ ಇಲಾಖೆಯಿಂದ ಯಾವುದೇ ರೈತರಿಗೆ ಅನಾನುಕೂಲವಾಗದ ರೀತಿಯಲ್ಲಿ ಬೆಳೆ ವಿಮೆಗೆ ಪೂರಕವಾದಂತ ಕಾರ್ಯನಿರ್ವಹಿಸುವುದಾಗಿ ಇದರ ಪ್ರಯೋಜನವನ್ನು ತಾಲೂಕಿನ ಎಲ್ಲಾ ರೈತ ಬಾಂಧವರು ಪಡೆಯಬೇಕಾಗಿ ವಿನಂತಿ ಮಾಡಿದರು.
ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ವಿರುಪಾಕ್ಷಪ,್ಪ ನಾಯಕನಹಟ್ಟಿ ಕೃಷಿ ಅಧಿಕಾರಿ ಹೇಮಂತ್ ನಾಯ್ಕ್, ಪರುಶುರಾಂಪುರ ಕೃಷಿ ಅಧಿಕಾರಿ ಹೇಮಂತ್ ಕುಮಾರ್, ಮಂಜುನಾಥ್, ವಿಮಾ ಕಂಪನಿಯ ಪ್ರತಿನಿಧಿ ಬೊಮ್ಮಣ್ಣ ಮತ್ತು ಕೃಷಿ ಮತ್ತು ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!