ಚಳ್ಳಕೆರೆ : ಕೊವಿಡ್19 ಸಂಧರ್ಭದಲ್ಲಿ ಬಹಳಷ್ಟು ಸಾವು ನೋವಾಗಿವೆ ಇದರಿಂದ ಕಳೆದ ಎರಡು ವರ್ಷಗಳಿಂದ ಸರಿಯಾದ ಶಿಕ್ಷಣವೇ ಸಿಗಲಿಲ್ಲ ಆದರೆ ಈಗ ಸುಧಾರಿಸಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.


ಅವರು ನಗರದ ಹೆಚ್‌ಪಿಪಿಸಿ ಪ್ರಥಮ ದರ್ಜೆ ಕಾಲೇಜ್‌ನಲ್ಲಿ ಆಯೋಜಿಸಿದ್ದ ಬೂಸ್ಟರ್ ಡೋಸ್ ಲಸಿಕಾ ಕಾರ್ಯಕ್ರಮ ಹಾಗೂ ಜನ ಸಂಖ್ಯಾ ದಿನಾಚರಣೆ ಕಾರ್ಯಕ್ರಕ್ಕೆ ಚಾಲನೆ ನೀಡಿ ಮಾತನಾಡಿದರು,

ಸರಕಾರ ಕೂಡ ಎರಡು ಬಾರಿ ಲಸಿಕೆ ನೀಡಿದೆ ಅದರಂತೆ ಇಂದು ಮೂರನೇ ಬಾರಿಗೆ ಬೂಸ್ಟರ್ ಡೋಸ್ ನೀಡುವ ಮೂಲಕ ಸಂಪೂರ್ಣ ನಿಯಂತ್ರಿಣಕ್ಕೆ ಕ್ರಮವಹಿಸಲಾಗುತ್ತಿದೆ ಕೊವಿಡ್ 19 ಸಂಧರ್ಭದಲ್ಲಿ ತಹಶೀಲ್ದಾರ್ ತುಂಬಾ ಕಾಳಜಿಯಿಂದ ಚಳ್ಳಕೆರೆ ನಗರದಲ್ಲಿ ಶೇಕಡ ನೂರಕ್ಕೆ ನೂರರಷ್ಟು ಲಸಿಕೆ ಹಾಕಿಸಲು ಶ್ರಮವಹಿಸಿದ್ದಾರೆ ಎಂದರು.


ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಆರೋಗ್ಯವೇ ಭಾಗ್ಯ ಆದ್ದರಿಂದ 18 ತುಂಬಿದ ಎಲ್ಲಾ ಜನರು ಬೂಸ್ಟರ್ ಡೋಸ್ ಪಡೆದು ಲಸಿಕೆ ಮುಕ್ತ ತಾಲೂಕನ್ನಾಗಿ ಮಾಡಬೇಕು ಆದ್ದರಿಂದ ಮುಂದಿನ ಮೂವತ್ತು ವರ್ಷದ ಗುರಿ ಇಟ್ಟುಕೊಂಡು ನಗರದಲ್ಲಿ ಸುಸಜ್ಜಿತ ಆಸ್ವತ್ರೆ ಕಟ್ಟುವುದರ ಮೂಲಕ ಜನರ ಹಿತ ಕಾಯುವ ಶಾಸಕರಲ್ಲಿ ಕ್ಷೇತ್ರದ ಶಾಸಕರು ಮೊದಲಿಗರು ಎಂದರು.


ಭಾರತ ಜನ ಸಂಖ್ಯೆ ಚೀನಾವನ್ನು ಹಿಮ್ಮೆಟ್ಟಿಸುವ ಮೂಲಕ ಮುಂದೆ ಸಾಗುತ್ತಿದೆ ಆದ್ದರಿಂದ ಜನಸಂಖ್ಯೆ ನಿಯಂತ್ರಣಕ್ಕೆ ಯುವ ಜನತೆ ಪ್ರಮುಖ ಪಾತ್ರ ವಹಿಸಬೇಕು ನಿಮ್ಮಿಂದ ಜಾಗೃತಿ ಮೂಡಿಸಬೇಕು ಎಂದರು.


ತಾಲೂಕು ಆರೋಗ್ಯ ಅಧಿಕಾರಿ ಡಾ.ಎನ್.ಕಾಶಿ ಮಾತನಾಡಿ, ಈಗಾಗಲೇ ತಾಲೂಕಿನ ಸುಮಾರು 405100 ಜನರಿಗೆ ಸುಮಾರು 18 ತುಂಬಿದ ವಯೋಮಾನದವರಿಗೆ ಬೂಸ್ಟರ್ ಡೋಸ್ ನೀಡುವ ಮೂಲಕ ಶೇಕಡ ನೂರಕ್ಕೆ ನೂರರಷ್ಟು ಪ್ರಗತಿ ಸಾಧಿಸುತ್ತೆವೆ ಎಂದರು,


ಕೊವಿಡ್ ಮೊದಲ ಲಸಿಕೆ ಗುರಿ ಶೇ.300352 ನಿಗಧಿ ಮಾಡಿದರೆ ಪ್ರಗತಿ ಸಾಧಿಸಿರುವುದು ಶೇ.103ರಷ್ಟು ಸಾಧಿಸಿದೆ, ಅದರಂತೆ ಎರಡನೆ ಲಸಿಕೆ ಗುರಿ ಶೇ.308016 ನಿಗಧಿಯಾದರೆ ಶೇ.99 ರಷ್ಟು ಪ್ರಗತಿ ಸಾಧಿಸಿದೆ ಎಂದರು


ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ತಹಶೀಲ್ದಾರ್ ಎನ್.ರಘುಮೂರ್ತಿ, ಆರೋಗ್ಯ ಅಧಿಕಾರಿ ಡಾ.ಕಾಶಿ, ಆರೋಗ್ಯ ಸಹಾಯಕ ಅಧಿಕಾರಿ ತಿಪ್ಪೇಸ್ವಾಮಿ, ಹೆಚ್.ಪಿಪಿಸಿ ಪ್ರಥಮ ದರ್ಜೆ ಕಾಲೇಜಿನ ಪ್ರಾಶುಂಪಾಲ ನರಸಿಂಹಮೂರ್ತಿ, ಉಪನ್ಯಾಸಕ ತಿಪ್ಪೇಸ್ವಾಮಿ, ವೀರಣ್ಣ, ಬಿ.ಪರಮೇಶ್, ಚಿತ್ತಯ್ಯ, ರಾಜಣ್ಣ, ತಿಪ್ಪೇಸ್ವಾಮಿ, ವಿಶ್ವಕರ್ಮ ಸಮಾಜದ ರಾಜ್ಯಾದ್ಯಕ್ಷ ಪ್ರಸನ್ನಕುಮಾರ್, ಹಾಗೂ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವರದಿ : ರಾಮಾಂಜನೇಯ

About The Author

Namma Challakere Local News
error: Content is protected !!