ಚಳ್ಳಕೆರೆ : ತಮ್ಮ ವಚನಗಳ ಮೂಲಕ ಸಮಾಜ ಸುಧಾರಣೆಗೆ ಶ್ರಮಿಸಿದ ಶಿವಶರಣ ಹಡಪದ ಅಪ್ಪಣ್ಣ ನವರು ಮಹಾನ್ ದಾರ್ಶನಿಕರೆಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.


ಅವರು ನಗರದ ತಾಲೂಕು ಕಛೇರಿಯಲ್ಲಿ ಆಯೋಜಿಸಿದ್ದ 888ನೇ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮಕ್ಕೆ ಭಾಗವಹಿಸಿ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮಾತನಾಡಿದ ಅವರು. ಬಸವಣ್ಣ, ಹಪ್ಪಣ್ಣ ಸೇರಿದಂತೆ ಶರಣರೆಲ್ಲ ಕಲ್ಯಾಣದಲ್ಲಿ ಸೇರಿ ಸರ್ವರ ಹಿತಕಾಯುವ ಧರ್ಮ ಸ್ಥಾಪಿಸಿ ತಮ್ಮ ಬಸವ, ವಚನ ತತ್ವವನ್ನು ಸಾರಿದ್ದಾರೆ, ಆದ್ದರಿಂದ ನಾವೇಲ್ಲಾರೂ ಅರಿತು, ಅನುಸರಿಸುವ ಅವಶ್ಯಕತೆ ಕೂಡ ಇದೆ ಎಂದು ಹೇಳಿದರು.


ಪ್ರಾಸ್ತವಿಕವಾಗಿ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕಿಗೂ ಕೂಡ ಕಾಯಕದ ಮೂಲಕ ತಮ್ಮ ಭಕ್ತಿನಿಷ್ಠೆ ಕಾಯಬೇಕು ಎಂದು ತೊರಿಸಿಕೊಟ್ಟ ಮಹಾನ್ ವ್ಯಕ್ತಿಗಳು ಇವರು, ಸಮಾಜಿಕ ವ್ಯವಸ್ಥೆ ಬದಲಾಯಿಸುವ ನಿಟ್ಟಿನಲ್ಲಿ ಸಮಾಜದ ಕ್ರಾಂತಿ ನಡೆಸಬೇಕು 12 ಶತಮಾನದ ಬಸವಣ್ಣನವರ ಮಹಾ ಮನೆಯಲ್ಲಿ ಅನಿಷ್ಠ ಪದ್ದತಿಗೆ 215 ವಚನಗಳನ್ನು ಅಡಪದ ಅಪ್ಪಣ್ಣನವರು ರಚಿಸಿ ಸಮಾಜದ ಏಳಿಗೆಗೆ ಶ್ರಮಿಸಿದ್ದಾರೆ ಎಂದರು.


ಶ್ರೀ ಹಡಪದ ಅಪ್ಪಣ್ಣ ಮಠದ ಶ್ರೀ ಗುರುಸ್ವಾಮಿ ಸ್ವಾಮೀಜಿ ಆರ್ಶಿವಚಿಸಿ, ಮುಂದಿನ ಯುವ ಪೀಳಿಗೆಗೆ ಹಡಪದ ಅಪ್ಪಣನರ ಜೀವನ ಮಾದರಿ ಮೂಲಕ ಇಂತಹ ದಾರ್ಶನಿಕರ ಹಾದಿಯಲ್ಲಿ ಸಾಗೋಣ. ಜಗತ್ತಿನ ಅತ್ಯಂತ ಪಾರ್ಲಿಮೆಂಟಿನ ಅನುಭವ ಮಂಟಪ ಬಸಣ್ಣನವ ಕಟ್ಟಿದರು, ಬಸವಾದಿ ಶರಣರು ಯಾವುದೇ ಜಾತಿಗೆ ಸೀಮಿತರಲ್ಲ. ನಿಜ ಜೀವನದಲ್ಲಿ ಎಷ್ಟು ವಚನಗಳನ್ನು ಹೇಳುತ್ತೆವೆ ಎಂಬುದು ಮುಖ್ಯವಲ್ಲ ಅದರ ಬದಲಾಗಿ ಎಷ್ಟು ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಂಡಿದ್ದೆವೆ ಎಂಬುದು ಮುಖ್ಯವಾಗಿದೆ ಎಂದರು.


ಈ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಸುಮಕ್ಕ, ತಹಶೀಲ್ದಾರ್ ಎನ್ ರಘುಮೂರ್ತಿ, ನಾಗರಾಜ್, ಪ್ರಕಾಶ್, ತಳಕು ಶ್ರೀಮಾರುತಿ, ದಿನೇಶ್, ಟಿಎಸ್.ತಿಮ್ಮಪ್ಪ, ತಿಪ್ಪೆರುದ್ರಪ್ಪ, ಸುರೇಶ್‌ಓಬಳಾಪುರ, ಚೌಳೂರು ಪ್ರಕಾಶ್, ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ಎಸ್‌ಬಿಐ ಬ್ಯಾಂಕ್ ವ್ಯವಸ್ಥಾಪಕ ಸುನಿಲ್ ಪ್ರದಾನ್, ರೆಷ್ಮೆ ಇಲಾಕೆ ಕೆಂಚಾಜಿರಾವ್, ಕೃಷಿ ತಾಂತ್ರಿಕ ಅಧಿಕಾರಿ ರವಿ, ಇನ್ನು ಇತರರು ಪಾಲ್ಗೊಂಡಿದ್ದರು.


ಬಾಕ್ಸ್ ಮಾಡಿ :
ಕ್ಷೌರಿಕ ವೃತ್ತಿಗೆ ಮಹತ್ವದ ಜೊತೆಗೆ ಗೌರವವೂ ಇದೆ. ಈ ವೃತ್ತಿಯ ಬಗ್ಗೆ ಅಸಡ್ಡೆ ಮನೋಭಾವನೆ ಹೊಂದದೆ. ಈ ವೃತ್ತಿಯಲ್ಲಿರುವವರನ್ನು ಅವಮಾನಿಸದೆ ಗೌರವಿಸಬೇಕು. ಆ ಸಮುದಾಯದ ಜನರಿಗೆ ಸೂಕ್ತ ಸ್ಥಾನಮಾನದ ವ್ಯವಸ್ಥೆಯನ್ನು ಬಸವಾದಿ ಶರಣರು ಕಲ್ಪಿಸಿದ್ದಾರೆ.
—ತಹಶೀಲ್ದಾರ್ ಎನ್.ರಘುಮೂರ್ತಿ

ವರದಿ : ರಾಮಾಂಜನೇಯ

Namma Challakere Local News
error: Content is protected !!