ಚಳ್ಳಕೆರೆ :

ಪ್ರಸ್ತುತ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆ ಸೆಪ್ಟಂಬರ್(2025) 22 ರಿಂದ ಅಕ್ಟೋಬರ್ 7 ರ ವರೆಗೆ ನಡೆಯಲಿದ್ದು, ಕುರುಬ ಸಮಾಜದ ಜನರು ನಿಮ್ಮ ಮನೆಗೆ ಬರುವ ಸಾಮಾಜಿಕ ಹಾಗೂ ಶೈಕ್ಷಣಿಕ ಗಣತಿ ಮಾಡುವವರಿಗೆ ಕಾಲಂ ನಂ 8 ಧರ್ಮ(Religion) “ಹಿಂದೂ” ಕಾಲಂ ನ0 9, ಕಾಲಂ ನ0 10,
ಕಾಲಂ ನ0 11,ಈ ಮೂರೂ ಕಾಲಂಗಳಲ್ಲಿ “ಕುರುಬ” ಎಂದು ಬರೆಯಿಸಬೇಕು ಎಂದು ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದ ಉಪಾದ್ಯಕ್ಷರಾದ ಕಂದಿಕೆರೆ ಸುರೇಶಬಾಬು ಹೇಳಿದರು.

ಅವರು ಚಳ್ಳಕೆರೆ ತಾಲೂಕಿನ ನೇರಲಗುಂಟೆ ಗ್ರಾಮದಲ್ಲಿ ಶ್ರೀ ರೇವಣಸಿದ್ದೇಶ್ವರ ವಿದ್ಯಾವರ್ಧಕ ಸಂಘದಿಂದ ಸಮಾಜದ ಬಂಧುಗಳಿಗೆ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದರು,

ಇದೇ ಸಂಧರ್ಭದಲ್ಲಿ ಅದ್ಯಕ್ಷರಾದ ಶಿವಲಿಂಗಪ್ಪ ಮಾತನಾಡಿ, ಧರ್ಮದ ಕಾಲಂ ರಲ್ಲಿ ” ಹಿಂದೂ” ಹಾಗೂ ಕಾಲಂ 9,10,11 ರಲ್ಲಿ ಕುರುಬ ಎಂದಷ್ಟೇ ನಮೂದಿಸಬೇಕು.ಆಗಷ್ಟೇ ನಮ್ಮ ಸಮಾಜದ ಜನಸಂಖ್ಯೆ ಲೆಕ್ಕಕ್ಕೆ ಸೇರ್ಪಡೆ ಆಗುತ್ತದೆ ಹಾಗೂ ಸರ್ಕಾರದ ಎಲ್ಲಾ ಸೌಲಭ್ಯಗಳನ್ನು ಪಡೆಯಬಹುದು ಎಂದು ಸಮಾಜದ ಬಂಧುಗಳಿಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಶಿವಶಂಕರ , ಹೇಮಂತರಾಜ, ಚನ್ನಪ್ಪ ತಿಪ್ಪೇಸ್ವಾಮಿ, ರಂಗನಾಥ ಉಪಸ್ಥಿತರಿದ್ದರು

About The Author

Namma Challakere Local News
error: Content is protected !!