“ದೇವಿ ಉಪಾಸಕರಿಗೆ ಸಾಧನೆಯ ಪರ್ವಕಾಲ ನವರಾತ್ರಿ”:-ಶ್ರೀಮತಿ ಜಿ ಯಶೋಧಾ ಪ್ರಕಾಶ್ ಅಭಿಮತ.

ಚಳ್ಳಕೆರೆ:-ದೇವಿಯನ್ನು ಆರಾಧಿಸುವ ಉಪಾಸಕರಿಗೆ ನವರಾತ್ರಿ ಎನ್ನುವುದು ಸಾಧನೆಯ ಪರ್ವಕಾಲ ಎಂದು ಚಳ್ಳಕೆರೆಯ ಶಿವನಗರದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದ ಮುಖ್ಯಸ್ಥರಾದ ಶ್ರೀಮತಿ ಜಿ ಯಶೋಧಾ ಪ್ರಕಾಶ್ ತಿಳಿಸಿದರು.

ಶಿವನಗರದ ತಮ್ಮ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ “ನವರಾತ್ರಿ”ಯ ಪ್ರಯುಕ್ತ ಆಯೋಜಿಸಿದ್ದ ವಾರದ ವಿಶೇಷ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು “ನವರಾತ್ರಿಯ ಹಿರಿಮೆ”ಯ ಬಗ್ಗೆ ಮಾತನಾಡಿದರು. ನವರಾತ್ರಿಯಲ್ಲಿ ಪ್ರತಿ ದಿನವೂ ತಾಯಿಯನ್ನು ಒಂದೊಂದು ರೂಪದಲ್ಲಿ ಆರಾಧನೆ ಮಾಡಲಾಗುತ್ತದೆ. ನವರಾತ್ರಿಯಲ್ಲಿ ಸಾಮೂಹಿಕ ಶ್ರೀದೇವಿಸ್ತುತಿಯ ಪಾರಾಯಣದಿಂದ ಅನೇಕ ಸತ್ಫಲಗಳು ದೊರೆಯುತ್ತವೆ. ಮನ-ಮನೆಗಳಲ್ಲಿ ಸುಖ ಶಾಂತಿಗಳು ನೆಲೆಸುತ್ತವೆ ಎಂದರು. ನವರಾತ್ರಿಯ ಪ್ರಯುಕ್ತ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿಸ್ತುತಿ ಪಾರಾಯಣ ಮತ್ತು ವಿಶೇಷ ದೇವಿ ಭಜನೆಗಳು ಹಾಗೂ “ಶ್ರೀಶಾರದಾದೇವಿ ಜೀವನಗಂಗಾ” ಗ್ರಂಥ ಪಾರಾಯಣ ಕಾರ್ಯಕ್ರಮ ನಡೆಯಿತು. ವಿಶೇಷ ಸತ್ಸಂಗದಲ್ಲಿ ಶ್ರೀಮತಿ ಎಂ ಗೀತಾ ನಾಗರಾಜ್,ಈಶಾನ್ ಗೌತಮ್ ,ಸುಧಾಮಣಿ, ಸರಸ್ವತಿ, ಶಾಂತಮ್ಮ,ಕವಿತಾ ಗುರುಮೂರ್ತಿ, ವಿಜಯಲಕ್ಷ್ಮಿ, ಯತೀಶ್ ಎಂ ಸಿದ್ದಾಪುರ, ರಶ್ಮಿ ರಮೇಶ್,ಶೈಲಜ, ಕೃಷ್ಣವೇಣಿ, ಸಂಗೀತ, ಯುಕ್ತ, ಮಾನ್ಯ, ವೀರಮ್ಮ, ಜಯಮ್ಮ, ದ್ರಾಕ್ಷಾಯಣಿ, ನಾಗರತ್ನಮ್ಮ, ಶಾರದಾಮ್ಮ, ಸೌಮ್ಯ ಪ್ರಸಾದ್, ಪಿ.ಎಸ್,ಮಾಣಿಕ್ಯ ಸತ್ಯನಾರಾಯಣ, ಭ್ರಮರಂಭಾ ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!