ಚಳ್ಳಕೆರೆ : ತಾಲೂಕಿನ ಚೌಳೂರು ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವಿ ಲಿಂಗಣ್ಣನವರ ಹಾಗೂ ಸೂರನಹಳ್ಳಿ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ಎಸ್ ವಿ. ಮಂಜುನಾಥ್ ಮತ್ತು ಜುಂಜರು ಗುಂಟೆ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರಾದ ವೀರಭದ್ರಪ್ಪ ರವರುಗಳ ಘನಅಧ್ಯಕ್ಷತೆಯಲ್ಲಿ 2024 25 ನೇ ಸಾಲಿನ ವಾರ್ಷಿಕ ಸಾಮಾನ್ಯಸಭೆಯನ್ನು ಆ ಗ್ರಾಮಗಳ ಸಂಘದ ಆವರಣದಲಿ ಏರ್ಪಡಿಸಲಾಗಿತ್ತು.

ಈ ಸಭೆಗೆ ಮುಖ್ಯ ಅತಿಥಿಗಳಾಗಿ ಶಿಮುಲ್ ನಿರ್ದೇಶಕರಾದ ಬಿ.ಸಿ. ಸಂಜೀವ ಮೂರ್ತಿ ರವರು ಪಾಲ್ಗೊಂಡಿದ್ದರು. ಹಾಗೂ ಸಹಾಯಕ ವ್ಯವಸ್ಥಾಪಕರಾದ ಎಂ. ಪುಟ್ಟರಾಜು ರವರು ಹಾಗೂ ಮಾರ್ಗ ವಿಸ್ತರಣಾಧಿಕಾರಿಗಳಾದ ಎಸ್. ನಯಾಜ್ ಬೇಗ್ ರವರು ವಾರ್ಷಿಕ ವರದಿಯ ಸಮಗ್ರ ಮಾಹಿತಿಯನ್ನು ಸಭೆಗೆ ನೀಡಿದರು ಈ ಸಂದರ್ಭದಲ್ಲಿ ಸಂಘದ ಮುಖ್ಯ ಕಾರ್ಯನಿರ್ವಾಹಕರು . ಸಂಘದ ನಿರ್ದೇಶಕರುಗಳು ಹಾಗೂ ಹಾಲು ಉತ್ಪಾದಕರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!