ಚಳ್ಳಕೆರೆ :
ಸರ್ಕಾರ ವಿವಿಧ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು ರೈತರ ಹೊಟ್ಟೆ ಮೇಲೆ ಬರೆಎಳೆಯುತ್ತಿದೆ.
ರೈತರ ಬೆಳೆದ ಬೆಗಳಿಗೆ ಪರಿಹಾರದ ಬೆಲೆ ನೀಡದೆ, ಪ್ರಕೃತಿ ವಿಕೋಪದಲ್ಲಿ ಅನಿಯಾದ ಬೆಳೆಗಳಿಗೆ ಪರಿಹಾರ ನೀಡದೆ, ಸರ್ಕಾರ ಮೀನಾ ಮೇಷ ಮಾಡುತ್ತದೆ, ಆದ್ದರಿಂದ ರೈತ ಕುಟುಂಬ ಗ್ಯಾರಂಟಿ ಯೋಜನೆಯನ್ನು ಜಾರಿಗೆ ತಂದು ಕುಟುಂಬಕ್ಕೆ ತಲ ಹತ್ತು ಸಾವಿರ ರೂಪಾಯಿಗಳ ಪ್ರತಿ ತಿಂಗಳು ಹಣ ಬಿಡುಗಡೆ ಮಾಡುವಂತೆ ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಸಂಸ್ಥಾಪಕ ಅಧ್ಯಕ್ಷರಾದ ಸೋಮಗುದ್ದು ರಂಗಸ್ವಾಮಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.
ಅವರು ಚಳ್ಳಕೆರೆ ನಗರದ ಪ್ರವಾಸಿ ಮಂದಿರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು ಸರ್ಕಾರ ರೈತರಿಗೆ ಸೂಕ್ತವಾದ ಪರಿಹಾರ ನೀಡಿ ದೇಶಕ್ಕೆ ಬೆನ್ನೆಲುಬದಂತ ರೈತನಿಗೆ ಬೆನ್ನೆಲುಬಾಗಿ ನಿಲ್ಲಬೇಕು ಈಗಾಗಲೇ ರೈತರು ಲಕ್ಷಾನು’ಗಟ್ಟಲೆ ಖರ್ಚು ಮಾಡಿ ಬೆಳೆದ ಬೆಳೆಗಳು ಎಲೆ ಚುಕ್ಕೆ ರೋಗ, ಬೂದಿರೋಗ ಈಗೆ ರೈತ ಸಂಕಷ್ಟದಲ್ಲಿ ಮುಳುಗಿದ್ದಾನೆ.
ದಾಳಿಂಬೆ ಬೆಳೆ, ಈರುಳ್ಳಿ, ಶೇಂಗಾ ಹೀಗೆ ಹಲವಾರು ಬೆಳೆಗಳು ನಷ್ಟವಾಗಿ ರೈತಕಣ್ಣಿರಿನಲ್ಲಿ ಕೈತೊಳೆಯುತ್ತಿದ್ದಾನೆ.
ಆದ್ದರಿಂದ ಮುಖ್ಯಮಂತ್ರಿಗಳು ರೈತ ಕುಟುಂಬಕ್ಕೆ ಗ್ಯಾರಂಟಿ ಯೋಜನೆ ಜಾರಿಗೆ ತಂದು ತಲಾ ಹತ್ತು ಸಾವಿರ ರೂಪಾಯಿಗಳ ರೈತ ಕುಟುಂಬಕ್ಕೆ ಪರಿಹಾರ ನೀಡಬೇಕು ರೈತ ಮುಖಂಡ ನಾಗರಾಜ್ ಸರಕಾರವನ್ನು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ತಿಮ್ಮರಾಜ್, ರೈತ ಸಂಘದ ಅಧ್ಯಕ್ಷ,
ಜಿಲ್ಲಾ ಕಾರ್ಯಧ್ಯಕ್ಷ ವೆಂಕಟರಮಣಪ್ಪ, ರಮೇಶ್ ಸಂಘಧ ಉಪಾಧ್ಯಕ್ಷ, ಕೃಷ್ಣಪ್ಪ,ಇತರರು ಪಾಲ್ಗೊಂಡಿದ್ದರು.

