ಅಕ್ರಮ ಜಮೀನು ಆಸೆಗೆ ರಾತ್ರೋ ರಾತ್ರಿ ಒತ್ತುವರಿ : ಬೆಳಂ ಬೆಳಿಗ್ಗೆ ತಹಶೀಲ್ದಾರ್ ರಿಂದ ತೆರವು ಕಾರ್ಯ..! 8 ಜನರ ಮೇಲೆ ಪ್ರಕರಣ ದಾಖಲು
ಚಳ್ಳಕೆರೆ : ಮೊದೂರು ಗ್ರಾಮದ ಸರ್ವೆ ನಂಬರ್ 15 ಮತ್ತು 18ರಲ್ಲಿ 72 ಎಕರೆ ಸರ್ಕಾರಿ ಗೋಮಾಳದ ಜಮೀನನ್ನು ರಾತ್ರೋರಾತ್ರಿ ಒತ್ತುವರಿ ಮಾಡಿದ್ದಾರೆ ಎಂಬ ಮಾಹಿತಿ ಪಡೆದ ಚಳ್ಳಕೆರೆ ತಹಶಿಲ್ದಾರ ಎನ್.ರಘುಮೂರ್ತಿ ಇಂದು ಬೆಳ್ಳಂ ಬೆಳಿಗ್ಗೆ ರಾಜಸ್ಥನಿರೀ ಕ್ಷಕರು ಮತ್ತು ಸರ್ವೇ ರೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸಂಪೂರ್ಣ ಭೂಮಿಯನ್ನು ಅಳತೆ ಮಾಡಿಸಿ ಹಿಂಪಡೆದಿದ್ದಾರೆ.
ಗ್ರಾಮದ 8 ಜನರು ಒತ್ತುವರಿ ಮಾಡಿರುವುದನ್ನು ಖಚಿತಪಡಿಸಿಕೊಂಡ ನಂತರ ಈ ಎಂಟು ಜನಗಳ ಮೇಲೆ ಭೂ ಕಂದಾಯ ಕಾಯ್ದೆಯ ಸೆಕ್ಷನ್ 192 ಎ ರಡಿ ಪ್ರಕರಣ ದಾಖಲೆ ಮಾಡಿ ಒತ್ತುವರಿಯಾಗಿದ್ದು ಅಂತಹ ಪೂರ್ಣ ಜಮೀನನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ನಂತರ ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿದ ಅವರು ಸರ್ಕಾರಿ ಸುತ್ತುಗಳು ನಿಮ್ಮ ಕಣ್ಣ ಮುಂದೆಯೇ ದುರುಪಯೋಗವಾಗುತ್ತಿದ್ದರು ಗ್ರಾಮಸ್ಥರುಗಳು ಮೌನವಾಗಿರುವುದು ಆತಂಕಕಾರಿ ವಿಚಾರ ಸರ್ಕಾರಿ ಸ್ವತ್ತುಗಳು ಗ್ರಾಮದ ಸ್ವತ್ತುಗಳು ಎಂಬ ಪರಿಕಲ್ಪನೆ ಬರುವವರೆಗೆ ಸರ್ಕಾರಿ ಸ್ವತ್ತುಗಳನ್ನು ಸಂರಕ್ಷಣೆ ಮಾಡುವುದು ಇಲಾಖೆಗಳಿಂದ ಕಷ್ಟಸಾಧ್ಯ.
ಇಂತಹ ಪ್ರಕರಣಗಳಲ್ಲಿ ಭಾಗಿಯಾಗುವ ವ್ಯಕ್ತಿಗಳ ವಿರುದ್ಧ ಸೂಕ್ತ ಕಾಯ್ದೆ ಬಳಸಿ ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದೆಂದು ಹೇಳಿದರು.
ಈ ಸಂದರ್ಭದಲ್ಲಿ ತಾಲೂಕು ಸರ್ವೆ ಪ್ರಸನ್ನ ಕುಮಾರ್, ರಾಜಸ್ವ ನಿರೀಕ್ಷಕ ಮೋಹನ್ ಕುಮಾರ್ ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು