ಲೋಕಾಯುಕ್ತ ಪೊಲೀಸ್ ನಿರೀಕ್ಷಕಿ ಬಿ.ಕೆ.ಲತಾ
ಅನಿರೀಕ್ಷತ ಭೇಟಿ
ಸಕಾಲಕ್ಕೆ ಕಡತ ವಿಲೇವಾರಿಯಾಗದಿದ್ದರೆ
ಶಿಸ್ತುಕ್ರಮ
ನಾಯಕನಹಟ್ಟಿ : ಪಟ್ಟಣ ಪಂಚಾಯಿತಿಯಲ್ಲಿ
ಸಾರ್ವಜನಿಕರಿಗೆ ಸಕಾಲಕ್ಕೆ ಸರ್ಕಾರಿ ಸೇವೆಗಳನ್ನು
ನೀಡದಿದ್ದರೆ ಕಡತಗಳನ್ನು ವಿಲೇವಾರಿ
ಮಾಡದಿದ್ದರೆ ಲೋಕಾಯುಕ್ತದಿಂದ ಪ್ರಕರಣ
ದಾಖಲಿಸಿಕೊಂಡು ಶಿಸ್ತುಕ್ರಮ
ಜರುಗಿಸಲಾಗುವುದು ಎಂದು ಚಿತ್ರದುರ್ಗ
ಲೋಕಾಯುಕ್ತ ಪೊಲೀಶ್ ನಿರೀಕ್ಷಕಿ ಬಿ.ಕೆ.ಲತಾ
ಎಚ್ಚರಿಕೆ ನೀಡಿದರು.
ಪಟ್ಟಣದ ಪಟ್ಟಣ ಪಂಚಾಯಿತಿ ಕಚೇರಿಗೆ
ಅನಿರೀಕ್ಷತವಾಗಿ ಭೇಟಿನೀಡಿ ಕಚೇರಿಯಲ್ಲಿ
ಕಡತಗಳ ಪರಿಶೀಲನೆ ನಡೆಸಿ ಅವರು
ಮಾತನಾಡಿದರು.
ಪಟ್ಟಣ ಪಂಚಾಯಿತಿಯಲ್ಲಿ ಕೆ.ಎಂ.ಎಫ್ ದಾಖಲೆ
ಪಡೆಯುವುದು, ಪೌತಿಖಾತೆ ಖಾತೆ ಬದಲಾವಣೆ,
ಖಾತೆ ವರ್ಗಾವಣೆ, ಆಸ್ತಿ ಮಾರಾಟ, ಮತ್ತು ಇ-ಆಸ್ತಿ
ದಾಖಲೆ ನೀಡುವ ಬಗ್ಗೆ ಹಲವು ಅರ್ಜಿಗಳು ಬಾಕಿ
ಉಳಿದಿವೆ.
ಅರ್ಜಿಗಳ ವಿಲೇವಾರಿಗೆ ಸಿಬ್ಬಂದಿ ಯಿಂದ
ಸೂಕ್ತವಾದ ಉತ್ತರವಿಲ್ಲ.
ಇದರಿಂದ ಸಾರ್ವಜನಿಕರು
ನಿತ್ಯವೂ ಕಚೇರಿಗೆ ಅಲೆಯುತ್ತಿರುವುದು
ಮೇಲ್ನೋಟಕ್ಕೆ ಕಂಡುಬಂದಿದೆ.
ಸರ್ಕಾರಿ
ಸೌಲಭ್ಯಗಳನ್ನು ಸಾರ್ವಜನಿಕರಿಗೆ ಪ್ರಾಮಾಣಿಕವಾಗಿ
ಪಾರದರ್ಶಕತೆಯಿಂದ ಮತ್ತು ತ್ವರಿತವಾಗಿ
ತಲುಪಿಸಬೇಕು.
ಸಾರ್ವಜನಿಕರ ಸೇವೆಯನ್ನು
ಅವದಿಯೊಳಗೆ ಮುಗಿಸಿಕೊಟ್ಟರೆ ಪಂಚಾಯಿತಿ
ಅಭಿವೃದ್ಧಿಯತ್ತ ಸಾಗುತ್ತದೆ.
ಕಡತ
ವಿಲೇವಾರಿಗೆ ಇಲ್ಲಸಲ್ಲದ ನೆಪಗಳನ್ನು
ಹೇಳಿಕೊಂಡು ವಿನಾಕಾರಣ ವಿಳಂಬನೀತಿ
ಅನುಸರಿಸುವುದು ಸರಿಯಲ್ಲ.
ನಾಯಕನಹಟ್ಟಿ
ಪಟ್ಟಣಪಂಚಾಯಿತಿ ವ್ಯಾಪ್ತಿಯ ಸಾರ್ವಜನಿಕರಿಂದ ಪದೇ
ಪದೇ ಕಚೇರಿಗೆ ಅಲೆದಾಡಿಸುಡುತ್ತಿರುವ ಬಗ್ಗೆ,
ಸಕಾಲಕ್ಕೆ ಸರ್ಕಾರಿ ಸೇವೆಗಳು ಸಿಗುತ್ತಿಲ್ಲ ಎಂಬ
ದೂರು ಬಂದಲ್ಲಿ ಶಿಸ್ತಿನ ಕ್ರಮಕ್ಕಾಗಿ ಬೆಂಗಳೂರಿನ
ಲೋಕಾಯುಕ್ತರ ಕಚೇರಿಗೆ ವರದಿಯನ್ನು
ಸಲ್ಲಿಸಲಾಗುವುದು ಎಂದು
ಮುಖ್ಯಾಧಿಕಾರಿಯವರಿಗೆ ಎಚ್ಚರಿಕೆ ನೀಡಿದರು.
ಜತೆಗೆ
ಕಚೇರಿಯಲ್ಲಿ ಉಳಿದಿರುವ ಎಲ್ಲ ಅರ್ಜಿಗಳನ್ನು
ಸಕಾಲದಲ್ಲಿ ವಿಲೇವಾರಿ ಮಾಡಲು ಸೂಚಿಸಿದರು.
ಇದೇವೇಳೆ ಪಟ್ಟಣಪಂಚಾಯಿತಿ ಮುಖ್ಯಾಧಿಕಾರಿ
ಎನ್.ಟಿ.ಕೋಡಿಭೀಮರಾಯ, ಸಿಬ್ಬಂದಿ ಶಿವಕುಮಾರ್,
ಸುರೇಶ್, ಟಿ,ತಿಪ್ಪೇಸ್ವಾಮಿ, ಸಂದೀಪ್, ಚಿತ್ರದುರ್ಗ
ಲೋಕಾಯುಕ್ತ ಕಚೇರಿಯ ಪೊಲೀಸ್
ಸಿಬ್ಬಂದಿಗಳಾದ ಜಿ.ಎನ್.ಸಂತೋಷ್ಕುಮಾರ್ ಮತ್ತು
ಆರ್.ಟಿ.ಚಂದ್ರಶೇಖರ ಉಪಸ್ಥಿತರಿದ್ದರು.