ಚಳ್ಳಕೆರೆ:
ನಗರದಲ್ಲಿ ಬೆಳ್ಳಂ ಬೆಳಿಗ್ಗೆ ರಸ್ತೆಗೆ ಇಳಿದ ಪೊಲೀಸ್ ಅಧಿಕಾರಿಗಳು ರಸ್ತೆಗಳನ್ನು ಅಕ್ರಮಿಸಿಕೊಂಡು ವ್ಯಾಪಾರ-ವಹಿವಾಟುಗಳು ನಡೆಸುತ್ತಿದ್ದ ಬೀದಿಬದಿ ವ್ಯಾಪಾರಿಗಳಿಗೆ ಚಳಿಬಿಡಿಸಿದರು.
ನಗರದ ಪಾವಗಡರಸ್ತೆಯಲ್ಲಿ ರಸ್ತೆ ಪಕ್ಕದಲ್ಲಿ ರಸ್ತೆಯನ್ನು ಅಕ್ರಮಿಸಿಕೊಂಡು ಚಿಲ್ಲರೆ ಶೇಂಗಾ ವ್ಯಾಪಾರಸ್ಥರನ್ನು, ತರಕಾರಿ ವ್ಯಾಪಾರಸ್ಥರನ್ನು ತರಾಟೆಗೆ ತೆಗೆದುಕೊಂಡ ಇನ್ಸ್ ಪೆಕ್ಟರ್ ಜೆ.ಎಸ್. ತಿಪ್ಪೇಸ್ವಾಮಿ ನಾಳೆಯಿಂದ ರಸ್ತೆಯನ್ನು ಅಕ್ರಮಿಸಿಕೊಂಡು, ವ್ಯಾಪಾರವಹಿವಾಟುಗಳು ನಡೆಸಿ, ವಾಹನಗಳ ಸಂಚಾರಕ್ಕೆ ಅಡಚಣೆ ಮಾಡುವುದು ಕಂಡು ಬಂದಲ್ಲಿ ಕಾನೂನು ಕ್ರಮ ಜರುಗಿಸಲಾಗುದು ಎಂದು ಎಚ್ಚರಿಕೆ ನೀಡಿದರು.
ನಗರದ ಪ್ರಮುಖ ರಸ್ತೆಗಳ ಪಕ್ಕದಲ್ಲಿ ಪಾದಚಾರಿಗಳ ಸಂಚಾರದ ರಸ್ತೆಗೆ ಬಸ್, ಆಟೋಗಳು, ದ್ವಿಚಕ್ರವಾಹನಗಳನ್ನು ಅಡ್ಡದಿಡ್ಡಿಯಾಗಿ ನಿಲುಗಡೆ ಮಾಡಿ ಸಂಚಾರ ನಿಯಮಗಳನ್ನು ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುವುದು.
ಖಾಸಗಿ ಬಸ್ ನಿಲ್ದಾಣಕ್ಕೆ ವಿವಿಧ ಕಡೆಯಿಂದ ಬಸ್‍ಗಳಲ್ಲಿ ಬರುವ ಸಾರ್ವಜನಿಕರು ನಿಲ್ದಾಣದಲ್ಲಿ ಬಸ್ ಇಳಿಯುವಾಗ ಬಸ್‍ಗಳ ಸುತ್ತ ಆಟೋಗಳು ಜಮಾಯಿಸಿ ಪ್ರಯಾಣಿಕರಿಗೆ, ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟು ಮಾಡುತ್ತಾರೆ ಎನ್ನುವ ದೂರುಗಳ ಕೇಳಿ ಬರುತ್ತಿವೆ.
ಪ್ರಮುಖ ರಸ್ತೆಗಳ ಪಕ್ಕದಲ್ಲಿಯೇ ಬಸ್, ಆಟೋಗಳನ್ನು ನಿಲುಗಡೆ ಮಾಡುವಂತಿಲ್ಲ.
ವಾಹನಗಳ ನಿಲುಗಡೆ ಸ್ಥಳ ನಿಗಧಿಪಡಿಸಿಲಾಗುವುದು ಎಂದು ತಿಳಿಸಿದರು.
ಈ ವೇಳೆ ಪಿಎಸ್‍ಐಗಳಾದ ರುದ್ರೇಶ್ ನಾಯ್ಕ್, ಬಸವರಾಜು, ತಿಮ್ಮಣ್ಣ, ಎಎಸ್‍ಐ ಮಂಜುನಾಥ, ಸಿಬ್ಬಂದಿಗಳಾದ ಮಂಜುನಾಥ, ಮಂಗಳಮ್ಮ ಸೇರಿದಂತೆ ಮುಂತಾದವರು ಇದ್ದರು.