ಚಳ್ಳಕೆರೆ : ನಿಮ್ಮ ಮನೆ ಬಳಿ ಅನುಮಾನಸ್ಪದವಾಗಿ ತಿರುಗಾಡುವ ವ್ಯಕ್ತಿಗಳ ಬಗ್ಗೆ ನಿಗಾವಹಿಸಿ ಮಾಹಿತಿ ನೀಡಿ, ನಿಮ್ಮ ಸಂಬAಧಿಕರ ಊರುಗಳಿಗೆ ಹೋಗುವಾಗ ಪೊಲೀಸ್‌ಠಾಣೆಗೆ ಮಾಹಿತಿ ನೀಡಿ ಎಂದು ಹೆಚ್.ಬಿ.ರಮೇಶ್ ಕುಮಾರ್ ಹೇಳಿದ್ದಾರೆ.


ಅವರು ನಗರದ ವಾಸವಿ ಕಲ್ಯಾಣ ಮಂಟಪದಲ್ಲಿ ನಗರದ ಕಿರಾಣಿ ಅಂಗಡಿ ಮಾಲೀಕರು, ಹಾಗೂ ಡಾಬಾ, ಮಾಲ್, ಕಲ್ಯಾಣ ಮಂಟಪ ಈಗೇ ಜನ ಸಂದಣಿ ಸೇರುವ ಅಂಗಡಿ ಮಾಲೀಕರನ್ನು ಒಳಗೊಂಡ ಸಭೆಯಲ್ಲಿ ಮಾತನಾಡಿದರು,


ನಗರದಲ್ಲಿ ಕಳ್ಳತನ ಪ್ರಕರಣಗಳು ನಡೆಯದೆ ರೀತಿಯಲ್ಲಿ ನೋಡಿಕೊಳ್ಳುವ ಜಾವಾಬ್ದಾರಿ ಸಾರ್ವಜನಿಕರ ಮೇಲೆಯೂ ಇದೆ, ಕೇವಲ ಪೊಲೀಸ್‌ರದು ಎಂದು ಕೈ ಕಟ್ಟಿ ಕೂರದೆ, ನಮಗೆ ಮಾಹಿತಿ ನೀಡಿ, ನಗರದಲ್ಲಿ ಸುಮಾರು ಒಂದು ಲಕ್ಷ ಜನ ಸಂಖ್ಯೆ ದಾಟಿದೆ ಆದರೆ ಪೊಲೀಸ್ ಸಿಬ್ಬಂದಿ ಕಡಿಮೆ ಇದೆ. ಆದ್ದರಿಂದ ಸಾರ್ವಜನಿಕರ ಪಾತ್ರ ತುಂಬಾ ಮುಖ್ಯವಾಗಿದೆ, ಪ್ರತಿಯೊಂದು ಅಂಗಡಿ ಮುಗ್ಗಟ್ಟುಗಳು ಹಾಗೂ ಕನಿಷ್ಠ ನೂರು ಜನ ಸಂಖ್ಯೆ ಸೇರುವ ಜನ ದಟ್ಟಣೆ ಇರುವ ಜಾಗದಲ್ಲಿ ಸಿಸಿ ಕ್ಯಾಮಾರ ಅಗತ್ಯವಾಗಿ ಅಳವಡಿಸಬೇಕು, ನೀವು ನಿಮ್ಮ ಅಂಗಡಿಗಳ ಮುಂದೆ ಅಳವಡಿಸಕೊಳ್ಳಿ ನಾವು ಪ್ರಮುಖ ರಸ್ತೆಗಳಲ್ಲಿ ಪೊಲೀಸ್ ಇಲಾಕೆಯಿಂದ ಅಳವಡಿಸುತ್ತೆವೆ ಇದರಿಂದ ಕಳ್ಳತನ ನಡೆಯದಂತೆ ನೋಡಿಕೊಳ್ಳಬಹುದು ಎಂದರು.


ಇನ್ಸ್ಪೆಕ್ಟೆರ್ ಜೆ.ಎಸ್.ತಿಪ್ಪೆಸ್ವಾಮಿ ಮಾತನಾಡಿ, ನಗರದಲ್ಲಿ ಹೊರ ರಾಜ್ಯದಿಂದ ಬಂದಿರುವ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಕ ಮಾಡಿಕೊಳ್ಳದೆ, ಮೊದಲಿಗೆ ಅವರ ಮಾಹಿತಿ ತಿಳಿಸಿ, ಪೊಲೀಸ್ ಠಾಣೆಗೆ ಅವರ ಸಂಪೂರ್ಣ ವಿವಿರ ನೀಡಿರಬೇಕು ಹೊರ ರಾಜ್ಯಗಳಿಂದ ಬಂದ ವ್ಯಕ್ತಿಗಳನ್ನು, ಹಾಗೂ ನಗರದಲ್ಲಿ ಗುರುತು ಪರಿಚಯ ವಿಲ್ಲದೆ ವ್ಯಕ್ತಿಗಳು ತಿರುಗಾಡುತ್ತಾ ಖಾಲಿ ಮನೆಗಳನ್ನು ಟಾರ್ಗೇಟ್ ಮಾಡಿರುತ್ತಾರೆ,

ಆದ್ದರಿಂದ ಬೇರೆ ಊರುಗಳಿಗೆ ಹೊಗುವಾಗ ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ನಿಮ್ಮ ಮನೆಯನ್ನು ನಾವು ಕಾಯುತ್ತೆವೆ, ನಗರದಲ್ಲಿ ಬಾಡಿಗೆ ನೀಡುವ ಮನೆ ಮಾಲೀಕರು ಬಾಡಿಗೆದಾರರ ಸಂಪೂರ್ಣ ಮಾಹಿತಿ ಪಡೆದುಕೊಳ್ಳಬೇಕು ಅವರು ವೃತ್ತಿ ಯಾವ ಕೆಲಸ ಎಂದು ವಿವಿರ ನಮೂದು ಹಾಗಿರಬೇಕು, ಆದ್ದರಿಂದ ಅಂಗಡಿ ಮಾಲೀಕರು ತಪ್ಪದೆ ಸಿಸಿ ಕ್ಯಾಮರಾ ಅಳವಡಿಸಿಕೊಳ್ಳಬೇಕು ಎಂದರು.


ಈದೇ ಸಂಧರ್ಭದಲ್ಲಿ ಪಿಎಸ್‌ಐ ತಿಮ್ಮಣ್ಣ, ವಾಸವಿ ಸಂಘದ ಪದಾಧಿಕಾರಿಗಳು, ಸಾರ್ವಜನಕರು ಪಾಲ್ಗೊಂಡಿದ್ದರು.

Namma Challakere Local News
error: Content is protected !!