ಚಳ್ಳಕೆರೆ : ಕಾನೂನುಗಳನ್ನು ಸಾರ್ವನಿಕರಿಗೆ ಹೇಳಿ ಕಳಿಸಿದರೆ ಸಾರ್ಥಕವಾಗುವುದಿಲ್ಲ ಆದರೆ ಇರುವ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ಅನುಕೂಲ ಮಾಡಿದಾಗ ಮಾತ್ರ ಸರಕಾರದ ಯೋಜನೆಗಳು ಸಫಲ್ಯ ಹೊಂದುತ್ತದೆ ಎಂದು ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹೇಳಿದರು


ಅವರು ರಾಮಜೋಗಿಹಳ್ಳಿ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಎಂಬ ಗ್ರಾಮ ವಾಸ್ತವ್ಯ ಕಾರ್ಯಕ್ರಮದ ಉದ್ಘಾಟನೆ ಮಾಡಿ ಮಾತನಾಡಿ ರಾಮಜೋಗಿಹಳ್ಳಿ ಗ್ರಾಮ ಹಾಗೂ ಈ ಗ್ರಾಮ ಪಂಚಾಯಿತಿ ವ್ಯಾಪ್ತಿಯ 7ಗ್ರಾಮಗಳಲ್ಲಿ ರೈತ ಸಮಸ್ಯೆಗಳ ಆದಂತ ಪೌತಿಖಾತೆ, ಪೋಡಿ, ಪ್ರಕರಣಗಳು ಪಿಂಚಣಿಗಳ ದಾರಿ ಸಮಸ್ಯೆಗಳು ಸ್ಮಶಾನ ಪಹಣಿಯಲ್ಲಿರುವ ಲೋಪ ದೋಷಗಳು ಇನ್ನೂ ಹತ್ತು ಹಲವು ಕಂದಾಯ ಇಲಾಖೆ ಸಮಸ್ಯೆಗಳ ಜೊತೆಗೆ ಇನ್ನೂ ಇತರೆ ಸಮಸ್ಯೆಗಳು ನೂರಕ್ಕೆ ನೀರರಷ್ಟು ಪರಿಪೂರ್ಣವಾಗಿಸುವ ನಿಟ್ಟಿನಲ್ಲಿ ಕಾರ್ಯನಿರ್ವಾಹಿಸಬೇಕು, ಮತ್ತೋಮ್ಮೆ ಜನ ಸಂಪರ್ಕ ಸಭೆ ನಡೆಸಿ ಸಮಸ್ಯ ಮುಕ್ತ ಗ್ರಾಮ ಮಾಡಲಾಗುವುದು, ಈಗಾಗಲೇ ನಿಮ್ಮ ಮನವಿಗಳನ್ನು ಸ್ವೀಕರಿಸಿ ಸರಿಯಾದ ರೀತಿಯಲ್ಲಿ ಸೌಲಭ್ಯ ಹೊದಗಿಸಲಾಗುವುದು,


ರಾಜ್ಯದಲ್ಲಿ ಮೂರನೇ ಸ್ಥಾನ ಪಡೆದ ಚಳ್ಳಕೆರೆ ಕಂದಾಯ ಇಲಾಕೆ ಕಾರ್ಯ ಶ್ಲಾಘನೀಯ, ಕಂದಾಯ ಇಲಾಕೆಯ 150 ವಿಷಯಗಳಲ್ಲಿ ಗ್ರಾಮ ಒನ್ ಕಾರ್ಯ ಒಳಗೊಂಡAತೆ ಕಾರ್ಯನಿರ್ವಹಿಸುತ್ತದೆ ಎಂದರ.
ತಾಲೂಕಿನ 261 ಗ್ರಾಮಗಳಿಗೂ ಬೇಟಿ ನೀಡಿ ಉತ್ತಮ ಕಾರ್ಯ ಮಾಡಿದ್ದೆನೆ ಕೊವಿಡ್ ಬಂದ ಸಂಧರ್ಭದಲ್ಲಿ ಸಾರ್ವಜನಿಕರ ಸಮಸ್ಯೆ ಆಲಿಸಿದ್ದೆವೆ, ಸರಕಾರ ಯೋಜನೆಗಳನ್ನು ಹುಳ್ಳವರ ಪಾಲು ಹಾಗದಂತೆ ಇಲ್ಲದವರ ಕಷ್ಟಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.


ಹೊಸ ಬಾರ್‌ಗೆ ಅವಕಾಶ ನೀಡಿಲ್ಲ :
ಈ ಸರಕಾರದಲ್ಲಿ ಪ್ರತಿ ಗ್ರಾಮ ಪಂಚಾಯಿಯಲ್ಲಿ ಎಂಎಸ್‌ಐಎಲ್ ಬಾರ್ ತೆರೆಯಲು ಅವಕಾಶ ನೀಡಿದ್ದಾರೆ ಆದರೆ ನನ್ನ ಕ್ಷೇತ್ರ ವ್ಯಾಪ್ತಿಯ ಯಾವುದೇ ಗ್ರಾಮದಲ್ಲಿ ಹೊಸ ಬಾರ್ ತೆರೆಯಲು ಬಿಟ್ಟಿಲ್ಲ ಆದರೆ ಈಗೀರುವ ಬಾರ್ ತೆರವುಗೊಳಿಸಲು ನನ್ನ ಅಧಿಕಾರ ವ್ಯಾಪ್ತಿಗೆ ಬರುವುದಿಲ್ಲ ಆದ್ದರಿಂದ ಈ ಗ್ರಾಮದಲ್ಲಿ ಅನಿವಾರ್ಯವಾಗಿದೆ,


7 ಎಕರೆ ಭೂಮಿ ಇರುವ ಕುಟುಂಬಕ್ಕೆ ಎಪಿಎಲ್ ಕಾರ್ಡ್ ಹೊಂದಿದ್ದ ಸಂಧರ್ಭದಲ್ಲಿ 2013ರಲ್ಲಿ ಜನ ಸಂಪರ್ಕ ಸಭೆಯಲ್ಲಿ 5 ಎಕರೆ ಪಹಣಿ ಇರುವ 16 ಸಾವಿರ ಕುಟುಂಬಗಳಿಗೆ ಬಿಪಿಎಲ್ ಕಾರ್ಡ್ ಮಾಡಿಸಿದ್ದೆ, ಆದರೆ ಈಗ ಅನಿವಾರ್ಯಗಿ ರದ್ದಾಗಿವೆ ಇವುಗಳನ್ನೆಲ್ಲ ಸರಿಪಡಿಸುವ ಮೂಲಕ ಸರಕಾರ ಸೌಲಭ್ಯ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೆನೆ,
ಗ್ರಾಮದ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಿ ಸಾರ್ವಜನಿಕರಿಗೆ ಮುಕ್ತಿ ಕಲ್ಪಿಸಿ ಗ್ರಾಮಗಳನ್ನು ಕಂದಾಯ ಇಲಾಖೆಯ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಿರುವುದು ನಿಜಕ್ಕೂ ಕೂಡ ಅಧಿಕಾರಿಗಳ ಹೊಣೆಗಾರಿಕೆ ಹಾಗೂ ಸಾರ್ವಜನಿಕರಿಗೆ ಇರುವ ಕಾಳಜಿಯನ್ನು ತೋರಿಸುತ್ತದೆ.


ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ದಾರ್ ಎನ್.ರಘುಮೂರ್ತಿ ಚಳ್ಳಕೆರೆ ತಾಲ್ಲೂಕು ರಾಜ್ಯದಲ್ಲೇ ಅತಿ ದೊಡ್ಡ ಎರಡನೇ ತಾಲೂಕು, ಸಾಂಸ್ಕೃತಿಕವಾಗಿ ಅತಿ ಶ್ರೀಮಂತ ತಾಲೂಕು ಅತಿ ಕಡಿಮೆ ಮಳೆ ಬೀಳುವ ಪ್ರದೇಶವಾಗಿರುವುದರಿಂದ ಸ್ವಲ್ಪ ಬಡತನವಿದೆ ಇದನ್ನು ಮೀರಿ ತಾಲ್ಲೂಕಿನ ಜನ ಸಂಸ್ಕಾರವುಳ್ಳ ಅಂತವರು ಇಂಥ ಜನಗಳ ಕೆಲಸ ಕಾರ್ಯಗಳನ್ನು ಪ್ರಾಮಾಣಿಕವಾಗಿ ಮತ್ತು ನಿಷ್ಕಳಂಕವಾಗಿ ಮಾಡುವಂತೆ ಈ ಭಾಗದ ಸಚಿವರು ಮತ್ತು ಶಾಸಕರು, ಜಿಲ್ಲಾಧಿಕಾರಿಗಳು ಸೂಚನೆ ನೀಡಿದ್ದಾರೆ ಅದರಂತೆ ಈಗಾಗಲೇ ಸುಮಾರು ಗ್ರಾಮಗಳನ್ನು ಕಂದಾಯ ಇಲಾಖೆ ಎಲ್ಲ ಸಮಸ್ಯೆಗಳನ್ನು ಬಗೆಹರಿಸಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡಲಾಗಿದೆ.


ಅದರಂತೆ ಇಂದು ಕೂಡ ರಾಮಜೋಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಏಳು ಹಳ್ಳಿಗಳನ್ನು ಸಮಸ್ಯೆ ಮುಕ್ತ ಗ್ರಾಮವನ್ನಾಗಿ ಮಾಡಲಾಗಿದೆ ಕಂದಾಯ ಇಲಾಖೆ ಯಾವುದೇ ಸಮಸ್ಯೆಗಳಿದ್ದಲ್ಲಿ ತಕ್ಷಣ ನನ್ನ ಗಮನಕ್ಕೆ ತಂದಲ್ಲಿ ಬಗೆಹರಿಸಲಾಗುವುದು ಯಾವುದೇ ಕಾರಣಕ್ಕೂ ರೈತರುಗಳು ಮತ್ತು ಸಾರ್ವಜನಿಕರು ಕಚೇರಿಗಳನ್ನು ಅರಸಿ ತಾಲೂಕು ಕೇಂದ್ರವನ್ನು ಸುತ್ತುವುದು ಬೇಡ ಕಂದಾಯ ಇಲಾಖೆಯ ಅಧಿಕಾರಿ ನೌಕರರೇ ನಿಮ್ಮ ಮನೆ ಬಾಗಿಲಿಗೆ ಬಂದು ನಿಮ್ಮ ಕೆಲಸ ಮಾಡಿ ಕೊಡಲಿದ್ದಾರೆ ತಾಲೂಕಿನಲ್ಲಿ ಇರುವಂತಹ ಎಲ್ಲ ಗ್ರಾಮಗಳನ್ನು ಇದೇ ರೀತಿ ಸಮಸ್ಯೆ ಮುಕ್ತ ಗ್ರಾಮಗಳನ್ನಾಗಿ ಮಾಡುವ ಕೈಂಕರ್ಯವನ್ನು ತಾಲೂಕಾಡಳಿತ ಕೈಗೊಂಡಿದೆ ತಾಲೂಕು ಮಟ್ಟದ ಎಲ್ಲ ಅಧಿಕಾರಿಗಳು ಮತ್ತು ನೌಕರರು ಈ ಒಂದು ಆಂದೋಲನದಲ್ಲಿ ಪೂರ್ಣಪ್ರಮಾಣದಲ್ಲಿ ಸಹಕರಿಸುತ್ತಿದ್ದು ಮನೆ ಜಿಲ್ಲಾಧಿಕಾರಿಗಳ ಹಾಗೂ ಶಾಸಕರ ಆಶಯದಂತೆ ಸಾರ್ವಜನಿಕರ ಒಳಿತನ್ನು ಅರಿತು ತಾಲೂಕಿನಲ್ಲಿ ಕೆಲಸ ನಿರ್ವಹಿಸಲಾಗುವುದು ಎಂದು ಹೇಳಿದರು


ಜಿಲ್ಲಾ ಉಪವಿಭಾಗಧಿಕಾರಿ ಚಂದ್ರಯ್ಯ, ಗ್ರಾಮ ಪಂಚಾಯಿತಿ ಅಧ್ಯಕ್ಷ ತಿಪ್ಪೆಸ್ವಾಮಿ, ತಾಪಂ.ಮಾಜಿ ಅಧ್ಯಕ್ಷ ತಿಪ್ಪೆಸ್ವಾಮಿ, ಗ್ರಾಪಂ.ಸದಸ್ಯ, ತಾಲೂಕು ಮಟ್ಟದ ಅಧಿಕಾರಿಗಳು, ಪಿಡಿಓ ಶ್ರೀದೇವಿ, ಶಾಲಾ ಶಿಕ್ಷಕರು, ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!