ತಳಕು:: ಹೋಬಳಿ ವ್ಯಾಪ್ತಿಯ ವಲಸೆ ಗ್ರಾಮದ ಶ್ರೀ ವೀರಭದ್ರೇಶ್ವರ ರಥೋತ್ಸವಕ್ಕೆ ಸಚಿವ ಬಿ ಶ್ರೀರಾಮನವರು ವೈಯಕ್ತಿಕವಾಗಿ 2 ಲಕ್ಷ ರೂಪಾಯಿ ಧನ ಸಹಾಯ ಮಾಡಿದ್ದಾರೆ ಎಂದು ಸಚಿವರ ಆಪ್ತ ಸಹಾಯಕ ಹಾಗೂ ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ರವರು ಹೇಳಿದ್ದಾರೆ.
ಅವರು ವಲಸೆ ಗ್ರಾಮದ ಗ್ರಾಮಸ್ಥರಿಗೆ ಸಚಿವ ಬಿ ಶ್ರೀರಾಮುಲು ರವರು ನೀಡಿದ 2 ಲಕ್ಷ ರೂಪಾಯಿ ಗ್ರಾಮಸ್ಥರಿಗೆ ಹಸ್ತಾಂತರಿಸಿ ಮಾತನಾಡಿ
ಈ ಹಿಂದೆ ವಲಸೆ ಗ್ರಾಮದ ಅಂಗನವಾಡಿ ಕಟ್ಟಡದ ಉದ್ಘಾಟನೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ಗ್ರಾಮಸ್ಥರು ಸಚಿವ ಶ್ರೀರಾಮುಲು ರವರಿಗೆ ಶ್ರೀ ವೀರಭದ್ರೇಶ್ವರ ರಥೋತ್ಸವಕ್ಕೆ ವೈಯಕ್ತಿಕವಾಗಿ ಧನಸಹಾಯ ಮಾಡುವಂತೆ ಬೇಡಿಕೆಯನ್ನು ಇಡಲಾಗಿತ್ತು.
ಆದರಂತೆ ಇಂದು ಕೊಟ್ಟ ಮಾತಿನಂತೆ ತಪ್ಪಿ ನಡೆಯದ ಸಚಿವ ಶ್ರೀರಾಮುಲು ರವರು ವಲಸೆ ಗ್ರಾಮದ ಆರಾಧ್ಯ ದೈವ ಶ್ರೀ ವೀರಭದ್ರೇಶ್ವರ ದೇವಸ್ಥಾನದ ರಥೋತ್ಸವಕ್ಕೆ ವೈಯಕ್ತಿಕವಾಗಿ 2 ಲಕ್ಷ ರೂಪಾಯಿಗಳನ್ನು ನೀಡುವಂತೆ ಆದೇಶಿಸಿದ್ದರು.
ಸಚಿವ ಶ್ರೀರಾಮುಲು ರವರು ಮೊಳಕಾಲ್ಮೂರು ವಿಧಾನಸಭಾ
ಕ್ಷೇತ್ರದಲ್ಲಿ ಸಮಾಜದ ಕಟ್ಟೆ ಕಡೆಯ ವ್ಯಕ್ತಿಗೂ ಪ್ರತಿನಿತ್ಯ ಒಂದಲ್ಲ ಒಂದು ರೀತಿ ಸಹಾಯ ಮಾಡುತ್ತಾ ಬಂದಿದ್ದಾರೆ ಅಪಘಾತವಾದ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವವರಿಗೆ ದೇವಸ್ಥಾನಗಳ ಜೀರ್ಣೋದ್ಧಾರಕ್ಕೆ ಹೀಗೆ ಸಾಕಷ್ಟು ಬಾರಿ ವೈಯಕ್ತಿಕವಾಗಿ ಧನಸಹಾಯವನ್ನು ಮಾಡಿದ್ದಾರೆ.
ಅವರು ನಮ್ಮ ಕ್ಷೇತ್ರದ ಒಂದು ದೊಡ್ಡ ಶಕ್ತಿ ದೇವರು ಅವರಿಗೆ ಆರೋಗ್ಯ ಸಂಪತ್ತು ಕರುಣಿಸಲಿ ವಲಸೆ ಗ್ರಾಮದ ಅಭಿವೃದ್ಧಿ ಕಾರ್ಯಗಳಿಗೆ ಸ್ಪಂದಿಸಲಾಗುವುದು ಎಂದು ಎಸ್ ಟಿ ಮೋರ್ಚಾ ರಾಜ್ಯ ಕಾರ್ಯಕಾರಣಿ ಸದಸ್ಯ ಪಾಪೇಶ್ ನಾಯಕ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ನಾಯಕನಹಟ್ಟಿ ಮಂಡಲ ಅಧ್ಯಕ್ಷ ಈ ರಾಮರೆಡ್ಡಿ ಮಂಡಲ ಪ್ರಧಾನ ಕಾರ್ಯದರ್ಶಿ, ಚನ್ನಗಾನಹಳ್ಳಿ ಮಲ್ಲೇಶ್, ಮಂಡಲ ಕಾರ್ಯದರ್ಶಿ ಎಚ್ ವಿ ಪ್ರಕಾಶ್ ರೆಡ್ಡಿ, ಜಿಲ್ಲಾ ಓಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ತಿಮ್ಮಣ್ಣ, ಆ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಶ್ರೀಮತಿ ಉಮಾದೇವಿ ತಿಮ್ಮರೆಡ್ಡಿ, ಘಟಪರ್ತಿ ಗ್ರಾಮ ಪಂಚಾಯಿತಿ ಸದಸ್ಯರಾದ ನಿರಂಜನ್ ಗೌಡ, ಹಿರೇಹಳ್ಳಿ ಎಸ್ ನಾಗರಾಜ್, ಗ್ರಾಮಸ್ಥರಾದ ಶಂಕರ್ ನಾಯ್ಕ, ಅಜ್ಜಯ್ಯ, ಲಸಮಪ್ಪ, ತಿಪ್ಪೇಸ್ವಾಮಿರೆಡ್ಡಿ, ಗ್ರಾಮ ಪಂಚಾಯತಿ ಸದಸ್ಯ ರುದ್ರೇಶ್ ಗ್ರಾಮದ ಮುಖಂಡರು ಮುಂತಾದವರು ಉಪಸ್ಥಿತರಿದ್ದರು