ಚಳ್ಳಕೆರೆ : ಕಳೆದ ಹತ್ತು ವರ್ಷಗಳಿಂದ ನಿರಂತರವಾಗಿ ಶಿಕ್ಷಣ ಕ್ಷೇತ್ರಕ್ಕೆ ಒತ್ತು ನೀಡಿದ ಶಾಸಕ ಟಿ.ರಘುಮೂರ್ತಿ ಈಡೀ ಕ್ಷೇತ್ರದಲ್ಲಿ ಶಿಕ್ಷಣದ ಕ್ರಾಂತಿ ನಡೆಸಿದ್ದಾರೆ.
ಹೌದು ನಿಜಕ್ಕೂ ಬಯಲು ಸೀಮೆಗೆ ವರದಾನವಾದ ಗಡಿ ಗ್ರಾಮಗಳ ಶೈಕ್ಷಣಿಕ ಅಭಿವೃದ್ದಿಗೆ ನಾಂದಿ ಹಾಡಿದ ಸ್ಥಳೀಯ ಕ್ಷೇತ್ರದ ಶಾಸಕರು ಈಡೀ ಕ್ಷೇತ್ರದಲ್ಲಿ ಶಾಲಾ ಕಾಲೇಜ್‌ಗಳ ಅಭಿವೃದ್ದಿಗೆ ಶ್ರಮಿಸುವ ಮೂಲಕ ಹೆಚ್ಚಿನ ಪ್ರಶಸ್ತö್ಯ ನೀಡಿದಾರೆ.
ಅದರಂತೆ ಇಂದು ಶಾಲಾ ಕಾಲೇಜ್ ವಿದ್ಯಾರ್ಥಿಗಳ ಸಾರಿಗೆಗಾಗಿ ಪರದಾಡುವ ಸ್ಥಿತಿಯನ್ನು ನಮ್ಮ ಚಳ್ಳಕೆರೆ ನ್ಯೂಸ್ ವರದಿ ಬಿತ್ತರಿಸಿದ ಹಿನ್ನಲೆಯಲ್ಲಿ ಎಚ್ಚೆತ್ತುಕೊಂಡು ಕ್ಷೇತ್ರದ ಶಾಸಕರು ವರದಿ ಬಿತ್ತರಿಸಿದ ಮರು ದಿನವೇ ಸಾರಿಗೆ ಅಧಿಕಾರಿಗಳ ಮೂಲಕ ಚರ್ಚೆ ನಡೆಸಿ ಪ್ರತಿ ದಿನವೂ ನಗರ ಸಾರಿಗೆಯಂತೆ ಕಾರ್ಯನಿರ್ವಾಹಿಸುವ ಎರಡು ಕೆಸ್‌ಆರ್‌ಟಿಸಿ ಬಸ್‌ಗಳನ್ನು ವಿದ್ಯಾರ್ಥಿಗಳ ಕರೆದೊಯ್ಯುವುದಕ್ಕೆ ಸೀಮಿತ ಗೊಳಿಸುವಂತೆ ಸೂಚನೆ ನೀಡಿ ಇಂದು ಚಾಲನೆ ನೀಡಿದ್ದಾರೆ.
ನಂತರ ಮಾತನಾಡಿದ ಶಾಸಕ ಟಿ.ರಘುಮೂರ್ತಿ, ನಗರದ ತುಂಬಾ ವಿಶಾಲವಾಗಿ ಬೆಳೆದಿದೆ ಅದಕ್ಕೆ ತಕ್ಕಂತೆ ಮೂಲಭೂತ ಸೌಲಭ್ಯ ಕಲ್ಪಿಸುವುದು ನಮ್ಮ ಕರ್ತವ್ಯ ಆದ್ದರಿಂದ ಪ್ರತಿದಿನವೂ ಮಕ್ಕಳ ಇತ ದೃಷ್ಠಿಯಿಂದ ಸಾರಿಗೆ ವಾಹನ ಆದರ್ಶ ಶಾಲೆಯಿಂದ ಸುಮಾರು 6ಕಿಲೋ, ವ್ಯಾಪ್ತಿಯ ಕೆ.ಇ.ಬಿ. ಹಾಗೂ ವಾಸವಿ ಕಾಲೇಜ್, ಸರಕಾರಿ ಪದವಿ ಪೂರ್ವ ಕಾಲೇಜ್, ಇಂಜಿನಿಯಾರ್ ಕಾಲೇಜ್, ಜಿಟಿಟಿಸಿ ತರಬೇತಿ ಕೇಂದ್ರ ಈಗೇ ನಗರದಲ್ಲಿ ವ್ಯಾಸಂಗ ಮಾಡುವ ಮಕ್ಕಳ ಇತ ದೃಷ್ಠಿಯಿಂದ ಸರಿಯಾದ ಸಮಯ ನಿಗಧಿ ಮಾಡಿ ಜುಲೈ 16 ರಿಂದ ಪ್ರಾರಂಭ ಗೊಳ್ಳುವಂತೆ ಸೂಚನೆ ನೀಡಿದರು.
ಈದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷ ಸುಮಕ್ಕ, ರಮೇಶ್, ಕೆ.ಎಸ್.ಆರ್.ಟಿ ವ್ಯವಸ್ಥಾಕ ವೆಂಕಟೇಶ್, ಇತರರು ಪಾಲ್ಗೊಂಡಿದ್ದರು.