ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪಟ್ಟದ ಬಸವ ವಿಧಿವಶ
ನಾಯಕನಹಟ್ಟಿ ಪಟ್ಟಣ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಾಲಯದ ಸುಮಾರು 25 ವರ್ಷದ ಪಟ್ಟದ ಬಸವ ವಿಧಿವಶವಾಗಿದೆ.
ಈ ವೇಳೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನದ ಕಾರ್ಯನಿರ್ವಾಣ ಅಧಿಕಾರಿ ಎಚ್.ಗಂಗಾಧರಪ್ಪ ಮಾತನಾಡಿ ಶ್ರೀಗುರು ತಿಪ್ಪೇರುದ್ರಸ್ವಾಮಿ ಪಟ್ಟದ ಬಸವ ಗ್ರಾಮದ ಪ್ರತಿಯೊಂದು ಗೃಹಪ್ರವೇಶ ಶುಭಕಾರಿಗಳಿಗೆ ತೆರಳಿ ಭಕ್ತರಿಗೆ ಆಶಿರ್ವಾದ ಮಾಡಿ ಬರುತ್ತಿತ್ತು.
ಪಟ್ಟಣದಲ್ಲಿ ಪ್ರತಿದಿನವೂ ಮನೆಮನೆಯ ಸುತ್ತುತ್ತಾ ಅಕ್ಕಿ ಬೇಳೆ ಇತ್ಯಾದಿಗಳನ್ನ ತಿಂದು ಬರುತ್ತಿತ್ತು ಒಟ್ಟಾರೆಯಾಗಿ ಪಟ್ಟಣದ ಪ್ರತಿಯೊಬ್ಬರಿಗೂ ಜನ ಸ್ನೇಹಿಯಾಗಿ ಇರುತ್ತಿತ್ತು ಕೆಲವು ದಿನಗಳ ಹಿಂದೆ ಎಷ್ಟೇ ಅನಾರೋಗ್ಯದಿಂದ ಬಳಲುತ್ತಿದ್ದು ಗುರುವಾರ ಸಂಜೆ 4 ಗಂಟೆಗೆ ವಿಧಿವಶವಾಗಿದೆ ಪಟ್ಟಣ ಹಾಗೂ ಹೋಬಳಿಯ ಭಕ್ತರು ತುಂಬಾ ದುಃಖದಿಂದ ಇದ್ದಾರೆ ಎಂದು ವಿಷಾಧ ವ್ಯಕ್ತಪಡಿಸಿದರು
ಈ ಸಂದರ್ಭದಲ್ಲಿ ದೇವಾಲಯದ ಪೂಜಾರಿ ರವಿಕುಮಾರ್, ದೇವಸ್ಥಾನದ ಸಿಬ್ಬಂದಿಗಳು ನಾಯಕನಹಟ್ಟಿಯ ಸಮಸ್ತ ಗ್ರಾಮಸ್ಥರು ಉಪಸ್ಥಿತರಿದ್ದರು