ನಗರದ ಹೊರವಲಯದಲ್ಲಿ ಹಾಸ್ಟೆಲ್ : ನಗರದೊಳಗೆ ಕಾಲೇಜ್
ವಿದ್ಯಾರ್ಥಿನಿಯಾರ ಗೋಳು ಕೇಳುವರ್ರಾರು
ಸಾರಿಗೆ ಸಚಿವರ ಮತದಾರರ ಕ್ಷೇತ್ರದಲ್ಲಿ ನಗರ ಸಾರಿಗೆಗಾಗಿ ವಿದ್ಯಾರ್ಥಿಗಳ ಪ್ರತಿಭಟನೆ
ಸಾರಿಗೆ ವ್ಯವಸ್ಥೆ ದುಸ್ಥಿತಿ : ವ್ಯಾಸಂಗ ಅರ್ಧಕ್ಕೆ ಮೊಟಕು
ಚಳ್ಳಕೆರೆ : ಗ್ರಾಮೀಣ ಪ್ರದೆಶದಿಂದ ಪಟ್ಟಣಕ್ಕೆ ವ್ಯಾಸಂಗ ಮಾಡಲು ದಾವಿಸದ ವಿದ್ಯಾರ್ಥಿಗಳಿಗೆ ಇನ್ನಿಲ್ಲದ ಸಂಕಷ್ಟ ಎದುರಾಗಿದೆ,
ಹೌದು ನಿಜಕ್ಕೂ ಬಯಲು ಸೀಮೆಯ ಮಕ್ಕಳು ವಿದ್ಯಾಭ್ಯಾಸ ಮಾಡುವುದು ಒಂದು ಸವಾಲೆ ಸರಿ ಆದರೆ ಇಂತಹ ಸಂದ್ಗಿದ ಪರಸ್ಥಿತಿಯಲ್ಲಿ ಸರಕಾರ ಮಾತ್ರ ಸರಿಯಾದ ರೀತಿಯಲ್ಲಿ ಸೌಲಭ್ಯ ನೀಡುವಲ್ಲಿ ಪ್ರತಿ ಬಾರಿಯೂ ಎಡವುತ್ತಿದೆ,.
ಕಳೆದ ಹಲವು ವರ್ಷಗಳಿಂದ ಸಾರಿಗೆ ವ್ಯವಸ್ಥೆಯಿಲ್ಲದೆ ವಿದ್ಯಾರ್ಥಿಗಳ ಗೋಳು ಕೇಳುವವರಿಲ್ಲವಾಗಿದೆ ನಿಜಕ್ಕೂ ಶೋಚನೀಯ ಪರಸ್ಥಿತಿ, ನಗರ ಪ್ರದೇಶದಿಂದ ಸುಮಾರು 5 ಕಿಲೋಮಿಟರ್ ದೂರದಲ್ಲಿ ನೂತನವಾಗಿ ನಿರ್ಮಾಣವಾದ ಬಿಸಿಎಂ ವಿದ್ಯಾರ್ಥಿನಿಯಾರ 3ಹಾಸ್ಟೆಲ್, ವಿದ್ಯಾರ್ಥಿಗಳ 2 ಹಾಸ್ಟೆಲ್, ಆದರ್ಶಶಾಲೆ, ಮೊರಾರ್ಜಿ ದೇಸಾಯಿ ಶಾಲೆ, ಕಿತ್ತೂರು ರಾಣಿ ಚೆನ್ನಮ್ಮ ಶಾಲೆ, ಸರಕಾರಿ ಐಟಿಐ ಕಾಲೇಜ್, ಸಾರಿಗೆ ಡೀಪೋ ಈಗೇ ನಗರದ ಹೊರ ಹೊಲಯದ ಸುಮಾರು ಎರಡು ಸಾವಿರಕ್ಕೂ ಹೆಚ್ಚಿನ ಮ್ಕಕಳು ವಿದ್ಯಾರ್ಜಾನೆಗೆ ಹಳ್ಳಿಯಿಂದ ನಗರ ಪ್ರದೇಶಕ್ಕೆ ಬಂದರೆ, ಸರಿಯಾದ ಮೂಲಭೂತ ಸೌಲಭ್ಯ ಕಲ್ಪಿಸುವಲ್ಲಿ ಅಧಿಕಾರಿಗಳು ಎಡವಿದ್ದಾರೆ.
ಹಾಸ್ಟೆಲ್‌ನಿಂದ ವಿದ್ಯಾರ್ಥಿಗಳು ಪ್ರತಿನಿತ್ಯವೂ ನಡೆದುಕೊಂಡೆ ಬರುವ ಅನಿವಾರ್ಯವಿದೆ ಎದುರಾಗಿದೆ, ಆದರೆ ಪಕ್ಕದಲಿ ಸಾರಿಗೆ ಡಿಪೋ ವ್ಯವಸ್ಥೆ ಇದ್ದರು ಕೂಡ ಸೌಲಭ್ಯದಿಂದ ವಂಚಿತರಾಗಿದ್ದಾರೆ
ಆದರೆ ಇತ್ತೀಚಿಗೆ ರಾಜ್ಯ ಸರಕಾರ ನೋಡಿದರೆ ಶಾಸಕರ ಕ್ಷೇತ್ರ ಅಭಿವೃದ್ದಿ ಅನುದಾನದಲ್ಲಿ ಸಾರಿಗೆ ಬಸ್ ಖರೀದಿಸಿ ಗ್ರಾಮೀಣ ಪ್ರದೇಶದ ಶಾಲಾ ಮಕ್ಕಳಿಗೆ ನೆರವಾಗುವ ರೀತಿಯಲ್ಲಿ ಸರಕಾರಿ ಶಾಲೆ ಉಳಿಸಿ ಎಂದು ಬಿಂಬಿಸಿಕೊಳ್ಳುತ್ತದೆ ಆದರೆ ಇಲ್ಲಿ ನೋಡಿದರೆ ಕಾಲೇಜ್ ವಿದ್ಯಾರ್ಥಿಗಳ ವ್ಯಾಸಂಗ ಮಾಡುವ ಆಸೆಯೇ ಕಮರಿಹೊಗುತ್ತದೆ.
ಕ್ಷೇತ್ರದ ಮತದಾರ ಮತ ಗಿಟ್ಟಿಸಿಕೊಂಡ ಸಾರಿಗೆ ಸಚಿವರು, ಹಾಗೂ ಕ್ಷೇತ್ರದ ಶಾಸಕರು ಇದರ ಬಗ್ಗೆ ಗಮನ ಹರಿಸಿ ಬಯಲು ಸೀಮೆಯ ಮಕ್ಕಳ ವ್ಯಾಸಂಗ ಅರ್ಧಕ್ಕೆ ಮೊಟಕುಗೊಳ್ಳುವ ಮುನ್ನೆವೇ ಸರಿಯಾದ ಸಾರಿಗೆ ವ್ಯವಸ್ಥೆ ಕಲ್ಪಿಸಿದರೆ ಅನುಕೂಲವಾದಿತು.
ನಗರದ ಹೊರವಲಯದ ಪಾವಗಡ ರಸ್ತೆಯ ದೇವರಾಜ್ ಅರಸು ಹಿಂದುಳಿದ ಅಭಿವೃದ್ಧಿ ವಿದ್ಯಾರ್ಥಿನಿಲಯದಲ್ಲಿ ವಿವಿಧ ಕಾಲೇಜಿಗಳಲ್ಲಿ ಸುಮಾರು 800 ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು. ಗ್ರಾಮೀಣ ಭಾಗದಿಂದ ಬರುವ ವಿದ್ಯಾರ್ಥಿಗಳು ಪಾವಗಡ ರಸ್ತೆಯಲ್ಲಿರುವ 5 ವಿದ್ಯಾರ್ಥಿ ನಿಯಗಳಲ್ಲಿದ್ದು ಕೊಂಡು ವ್ಯಾಸಂಗ ಮಾಡಲು ದಿನಲೂ ಸುಮಾರು ಐದು ಕಿ.ಮೀ ದೂರದ ಕಾಲೇಜು ಹಾಗೂ ಪ್ರೌಢಶಾಲೆಗಳಿಗೆ ಹೋಗಬೇಕಿದೆ.
ವಿದ್ಯಾರ್ಥಿನಿಯಲಕ್ಕೆ ಹೊಂದಿಕೊAಡು ಸುಸ್ಸಜಿತ ಸಾರಿಗೆ ಘಟಕವಿದ್ದರೂ ಬಸ್‌ಗಳ ಕೊರತೆಯಿಂದ ವಿದ್ಯಾರ್ಥಿಗಳಿಗೆ ಕಾಲೇಜಿಗೆ ಹೋಗಿ ಬರಲು ಸಾರಿಗೆ ಬಸ್ ಬಿಡಲು ಮುಂದಾಗುತ್ತಿಲ್ಲ ಕೂಡಲೆ ಬಸ್ ವ್ಯವಸ್ಥೆ ಕಲ್ಪಿಸದಿದ್ದರೆ ಕಾಲೇಜುಗಳಿಗೆ ಗೈರಾಜರಾಗಿ ಪ್ರತಿಭಟನೆ ಮಾಡುವುದಾಗಿ ವಿದ್ಯಾರ್ಥಿಗಳು ಎಚ್ಚರಿಕೆ ನೀಡಿದ್ದಾರೆ.
1.ನಗರದಲ್ಲಿ ಎಲ್ಲಾ ವಸತಿ ನಿಲಯಗಳನ್ನು ನಗರದ ಹೊರಗೆ ಸ್ಥಳಾಂತರಿಸಿದ್ದು ಅದಕ್ಕೆ ತಕ್ಕಂತೆ ವಿದ್ಯಾರ್ಥಿಗಳಿಗೆ ಸಾರಿಗೆ ವ್ಯವಸ್ಥೆ ಕಲ್ಪಿಸದೆ ವಿದ್ಯಾರ್ಥಿಗಳ ಜತೆಗೆ ಅಧಿಕಾರಿಗಳು ಚೆಲ್ಲಾಟವಾಡುತ್ತಿದ್ದರೆ ಇದರಿಂದ ವಿದ್ಯಾರ್ಥಿಗಳ ಕಲಿಕೆಯ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ.—
ಬಾಲು, ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್
2.ಕಾಲೇಜಿನಿಂದ ವಿದ್ಯಾರ್ಥಿನಿಲಯಕ್ಕೆ ಪತ್ರಿನಿತ್ಯ ಕಾಲೇಜಿಗೆ ನಡೆದುಕೊಂಡು ಹೋಗಲು ಸಾಧ್ಯವಾಗುವುದಿಲ್ಲ ದಿನಕ್ಕೆ ಮೂರು ಬಾರಿ ಓಡಾಡಬೇಕಿದೆ ಆದ್ದರಿಂದ ವಸತಿ ನಿಲಯದಿಂದ ವಿದ್ಯಾರ್ಥಿಗಳಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಸಾಕಷ್ಟು ಬಾರಿ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
–ಉಪಾ, ಪದವಿ ವಿದ್ಯಾರ್ಥಿನಿ
3.ಹೆಚ್ಚಿನ ವ್ಯಾಸಂಗ ಮಾಡುವ ಮಹಾದಾಸೆಯಿಂದ ಹಳ್ಳಿಯಿಂದ ನಗರಕ್ಕೆ ಕಾಲೇಜ್‌ಗೆ ಸೇರಿದೆ ಆದರೆ ಈಗ ಪ್ರತಿನಿತ್ಯವೂ ಬಸ್ ಚಾರ್ಜ್ ಕೊಡುವಷ್ಟು ನಮ್ಮ ಪೋಷಕರು ಇಲ್ಲ, ನಿನ್ನ ವ್ಯಾಸಂಗ ಅರ್ಧಕ್ಕೆ ಮೊಟಕು ಗೊಳಿಸುವ ಅನಿವಾರ್ಯತೆ ಇದೆ.–
ಅಭಿಷೇಕ್ ವಿದ್ಯಾರ್ಥಿ
4.ಸರ್ ನಮ್ಮ ಅಪ್ಪ ಅಮ್ಮ ಬಡವರು ಅವರಿಗೆ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹಣ ಕೊಟ್ಟು ಓದಿಸುವ ಶಕ್ತಿ ಇಲ್ಲ ಆದ್ದರಿಂದ ನಾನು ಪೋಷಕರಿಗೆ ಹೊರೆಯಾಗಬಾರದು ಎಂದು ನಾನು ಹಾಸ್ಟೆಲ್‌ನಲ್ಲಿ ಇದ್ದುಕೊಂಡು ವ್ಯಾಸಂಗ ಮಾಡಿ ಉನ್ನತ ಶಿಕ್ಷಣ ಕಲಿಯುವ ಆಸೆಯಿದೆ, ಆದರೆ ಇಲ್ಲಿ ಹಾಸ್ಟ್ಲ್‌ನಿಂದ ಪ್ರತಿನಿತ್ಯವೂ ಕಾಲೇಜ್‌ಗೆ ಹಾಗೂ ಲ್ಯಾಬ್‌ಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲದೆ ದುಸ್ಥಿತಿಯಾಗಿದೆ.
—ರಾಧಿಕಾ ಹೆಚ್.ಪಿಪಿಸಿ ಕಾಲೇಜ್ ವಿದ್ಯಾರ್ಥಿನಿ
5.ನಗರ ಸಾರಿಗೆ ಪ್ರಸ್ತಾವನೆ ಇನ್ನೂ ಇಲ್ಲ, ವಿದ್ಯಾರ್ಥಿಗಳ ಪಾಸ್ ವಿತರಣೆ ನೀಡುತ್ತಿದ್ದೆವೆ, ಆದರೆ ಉಚಿತವಾಗಿ ಸಾರಿಗೆ ಬಿಡಲು ಸರಕಾದ ಮೂಲಕ ಆದೇಶ ಆಗಬೇಕು, ಜುಲೈ15 ಕ್ಷೇತ್ರದ ಶಾಸಕರ ಇತ ದೃಷ್ಠಿಯಿಂದ ವಿದ್ಯಾರ್ಥಿಗಳಿಗೆ ಅನುಕೂಲ ವಾಗುವ ನಿಟ್ಟಿನಲ್ಲಿ ಬೆಳ್ಳಿಗ್ಗೆ ಕಾಲೇಜ್ ಗೆ ತೆರಳಲು ಎರಡು ಟ್ರೀಪ್ ಹಾಗೂ ಸಂಜೆ ಎರಟು ಟ್ರಿಪ್ ಸಾರಿಗೆ ವ್ಯವಸ್ಥೆಗೆ ಚಾಲನೆ ನೀಡಲಿದ್ದಾರೆ.
—ವೆಂಕಟೇಶ್ ಸಾರಿಗೆ ವ್ಯವಸ್ಥಾಪಕ
ವರದಿ : ರಾಮಾಂಜನೇಯ ಕೆ.ಚನ್ನಗಾನಹಳ್ಳಿ