ಚಳ್ಳಕೆರೆ : ಅಕ್ರಮ ಒತ್ತುವರಿದಾರರ ತೆರುವ ಕಾರ್ಯಕ್ಕೆ ಕೈ ಹಾಕಿದ ತಾಲೂಕಿನ ದಂಡಾಧಿಕಾರಿಗಳು ಪ್ರತಿನಿತ್ಯವೂ ಒಂದಿಲ್ಲೊಂದು ಅಕ್ರಮ ಒತ್ತುವರಿದಾರರ ತೆರುವು ಕಾರ್ಯ ಮಾಡುತ್ತಿದ್ದಾರೆ.
ಅದರಂತೆ ಇಂದು ಚಳ್ಳಕೆರೆ ತಾಲೂಕು ನಾಯಕನಹಟ್ಟಿ ಹೋಬಳಿ ವರವೂ ಗ್ರಾಮದ ಸರ್ವೇ ನಂಬರ್ 16ರಲ್ಲಿ ಒತ್ತುವರಿಯಾಗಿದ್ದ ನಾಲ್ಕು ಎಕರೆ ಜಮೀನನ್ನು ಇಂದು ತೆರುವುಗೊಳಿಸಿ ಸರ್ಕಾರದ ವಶಕ್ಕೆ ಪಡೆದಿದ್ದಾರೆ
ಖಾಸಗಿ ವ್ಯಕ್ತಿಯೊಬ್ಬರು ತನ್ನ ನಾಲ್ಕು ಎಕರೆ ಜಮೀನೊಂದಿಗೆ ಗೋಮಾಳದ ನಾಲ್ಕು ಎಕರೆ ಭೂಮಿಯನ್ನು ಒತ್ತುವರಿ ಮಾಡಿಕೊಂಡು ತಂರಿ ಬೆಲಿ ಹಾಕಿಕೊಂಡು ಹುಳುಮೆ ಮಾಡುತ್ತಿದ್ದ ಎನ್ನುವ ಆರೋಪದ ಮೇರೆಗೆ ದಾಳಿ ನಡೆಸಿದ ತಹಶೀಲ್ದಾರ್ ಎನ್.ರಘುಮೂರ್ತಿ ಬೆಳಂ ಬೆಳಿಗ್ಗೆ ಒತ್ತುವರಿದಾರರಿಂದ ಅಕ್ರಮವಾಗಿ ಭೂಮಿ ಕಬಳಿಸಿದ ಜಾಗವನು ಮರು ವಾಪಸ್ಸು ಪಡೆದು ಜೆಸಿಬಿಯಿಂದ ಟ್ರಂಚ್ ಒಡೆಸಿ ಸರಕಾರದ ಸುರ್ಪದಿಗೆ ಪಡೆದಿದ್ದಾರೆ
ಈ ಕಾರ್ಯಕ್ಕೆ ರಾಜ್ಯ ರೈತ ಸಂಘದ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿವೀರಣ್ಣ ಹಾಗೂ ಎನ್ ದೇವರಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಾ.ಕಾಟಮ್ ಲಿಂಗಯ್ಯ ಶ್ಲಾಘನೀಯ ವ್ಯಕ್ತಪಡಿಸಿದ್ದಾರೆ.
ಈ ಸಂದರ್ಭದಲ್ಲಿ ರಾಜಸ್ವ ನಿರೀಕ್ಷಕ ಚೇತನ್ ಕುಮಾರ್, ತಾಲೂಕ್ ಸರ್ವೇ ಅಧಿಕಾರಿ ಪ್ರಸನ್ನ ಕುಮಾರ್, ಗ್ರಾಮ ಪಂಚಾಯತಿಯ ಎಲ್ಲಾ ಸದಸ್ಯರು, ಸಾರ್ವಜನಿಕರು ಪಾಲ್ಗೊಂಡಿದ್ದರು.