ಚಳ್ಳಕೆರೆ : ರೈತರು ಪೋಡ್ ಮಾಡಿಸುವುದು ಅನಿವಾರ್ಯ ಆದರೆ ರೈತರು ಕೃಷಿಗೆ ಬಳಸುವ ಸಲಕರಣೆಗಳು ಮತ್ತು ಬೀಜ, ಗೊಬ್ಬರ ಔಷಧಿಗಳ ಬೆಲೆ ಗಗನಕ್ಕೆ ಏರಿದ್ದು ರೈತರು ಕಂಗಾಲಾಗಿದ್ದಾರೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಆಕ್ರೋಶ ವ್ಯಕ್ತಪಡಿಸಿದರು
ನಗರದ ತಾಲೂಕು ಕಛೇರಿಯಲ್ಲಿ ತಹಶೀಲ್ದಾರ್ ಎನ್.ರಘುಮೂರ್ತಿಗೆ ಮನವಿ ನೀಡಿ ಆಕ್ರೋಶ ವ್ಯಕ್ತಪಡಿಸಿದರು ಸರ್ಕಾರ ರೈತರ ಆದಾಯ ದ್ವಿಗುಣ ಮಾಡದೆ, ರೈತ ವಿರೋಧಿ ಕಾನೂನುಗಳನ್ನು ಸೃಷ್ಟಿ ಮಾಡಿ ರೈತರು ಪೋಡ್ ಮಾಡಿಸುವ ಸುಂಕವನ್ನು ಎಕರೆವಾರು ಅಂದರೆ ಒಂದು ಎಕರೆಗೆ 300 ರಿಂದ 400ರೂ. ಗಳನ್ನು ಹೆಚ್ಚು ಮಾಡಿ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ.
ರೈತರು ಸ್ವಾಭಿಮಾನಿಗಳು, ಕೃಷಿ ಈ ದೇಶದ ಅಭಿವೃದ್ಧಿಯ ಸಂಕೇತ ಇಂತಹ ಕೃಷಿ ಮಾಡುವ ರೈತರನ್ನು ಒಕ್ಕಲೆಬ್ಬಿಸಿದರೆ ಈ ದೇಶಕ್ಕೆ ಬಡತನ ನಿರುದ್ಯೋಗ ಕಟ್ಟಿಟ್ಟ ಬುತ್ತಿ. ಇಂತಹ ಕೆಟ್ಟ ಕಾನೂನುಗಳನ್ನು ರದ್ದು ಮಾಡಿ ರೈತರ ಜಮೀನುಗಳಿಗೆ ನೀರು ಬೆಳೆದಂತ ಬೆಳೆಗಳಿಗೆ ಯೋಗ್ಯವಾದ ಬೆಲೆ ಕೊದಲು ಸರ್ಕಾರಕ್ಕೆ ಇದುವರೆಗೂ ಸಾಧ್ಯವಾಗಿಲ್ಲ ರೈತರು ಸುಮಾರು ವರ್ಷಗಳಿಂದ ಪ್ರಕೃತಿಯ ವೈಪಲ್ಯಗಳಿಂದ ಬೆಳೆ ನಷ್ಟವನ್ನು ಅನುಭವಿಸುತ್ತಾ ಬಂದಿದ್ದಾರೆ.
ಇಂತಹ ಕಷ್ಟದ ಪರಿಸ್ಥಿತಿಯಲ್ಲಿ ರೈತರ ಪೋಡ್ ಖರ್ಚನ್ನು ಹೆಚ್ಚ ಮಾಡಿರುವುದು ಖಂಡನೀಯ ಈಗ ಮಾಡಿರುವ ಪೋಡ್ ಸುಂಕ ಒಂದು ಎಕರೆಗೆ 300 ರಿಂದ 400 ರೂ. ಗಳನ್ನು ಹೆಚ್ಚು ಮಾಡಿರುವುದನ್ನು ರದ್ದು ಮಾಡಿ, ಹಿಂದಿನ ಶುಲ್ಕವನ್ನೇ ಅಂದರೆ ಒಂದು ಪೋಡ್‌ಗೆ 1200/- ರೂ.ಗಳನ್ನು ಮುಂದುವರಿಸಬೇಕೆAದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಚಳ್ಳಕೆರೆ ಶಾಖೆಯ ರೈತ ಸಂಘ ಒತ್ತಾಯಿಸುತ್ತದೆ.

Namma Challakere Local News
error: Content is protected !!