ಚಳ್ಳಕೆರೆ : ಗುರುಪೂರ್ಣಿಮೆ ಕಾರ್ಯಕ್ರಮವನ್ನು ಕಳೆದ ಎರಡು ವರ್ಷಗಳಲ್ಲಿ ಸರಳವಾಗಿ ಆಚರಣೆ ಮಾಡಿದ್ದೆವೆ ಆದರೆ ಈ ಭಾರಿ ಭಕ್ತರ ನೀರಿಕ್ಷೆಯಂತೆ ಅದ್ದೂರಿಯಾಗಿ ಆಚರಣೆ ನಡೆಯಲಿದೆ ಎಂದು ಶ್ರೀ ವೆಂಕಟಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಬಿಸಿ.ಸಂಜೀವಮೂರ್ತಿ ಹೇಳಿದ್ದಾರೆ.
ನಗರದ ಪಾವಗಡ ರಸ್ತೆಯ ಶ್ರೀ ಸಾಯಿ ಮಂದಿರದಲ್ಲಿ ಆಯೋಜಿಸಿದ್ದ ಪತ್ರಿಕಾ ಗೊಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದರು. ಭಕ್ತರ ಭಕ್ತಿ ಪೂರ್ವಕ ಸಹಕಾರದಿಂದ ಗುರುಗಳ ಇಷ್ಟಚಾರದಂತೆ ನಡೆಯುವ ಧಾರ್ಮಿಕ ಕಾರ್ಯಕ್ರಮಗಳನ್ನು ಗುರುಪೂರ್ಣಿಮೆ ಕಾರ್ಯಕ್ರಮ ಎಂದು ಕರೆಯುತ್ತಾರೆ. ಜುಲೈ13 ರಂದು ನಡೆಯಲಿರುವ ಗುರುಪೂರ್ಣಿಮೆ ಕಾರ್ಯಕ್ರಮಕ್ಕೆ ಭಿಕ್ಷಾಟನೆಯ ಮೂಲಕ ಸಮಸ್ತ ಸಾಯಿ ಭಕ್ತರನ್ನು ಆಹ್ವಾನಿಸಲಾಗಿದೆ.
ಈ ಕಾರ್ಯಕ್ರಮಗಳ ದಿವ್ಯ ಸಾನಿಧ್ಯವನ್ನು ಮಧ್ಯಾಹ್ನ12 ಗಂಟೆಗೆ ಶ್ರೀ ಸತ್ಕ ಉಪಾಸಿ ಶ್ರೀ ಶ್ರೀ ಶ್ರೀ ದತ್ತಾವಧೂತ ಮಲ್ಲಿಕಾರ್ಜುನ ಸ್ವಾಮೀಜಿಯವರು ವಹಿಸಿ ನಡೆಸಿಕೊಡಲಿದ್ದಾರೆ. ಸಂಜೆ 4:30 ಗಂಟೆಗೆ ಪರಮಪೂಜ್ಯ ಮಾತಾಜೀ ತ್ಯಾಗಮಯಿ ಇವರ ಸಮ್ಮುಖದಲ್ಲಿ ಮಹಿಳಾ ಭಜನಾ ಮಂಡಳಿಗಳ ಒಕ್ಕೂಟದಿಂದ ಶ್ರೀ ಲಲಿತಾ ಸಹಸ್ರನಾಮ ಪಠನೆ, ಹಾಗೂ ರಾತ್ರಿ 8:15 ರಿಂದ 8:30 ರವರೆಗೆ ಶ್ರೀ ಡಾ|| ವೈ.ರಾಜರಾಮ್ ಸ್ವಾಮೀಜಿ, ಪೀಠಾಧ್ಯಕ್ಷರು, ಶ್ರೀ ನರಹರಿ ಸದ್ಗುರು ಪೀಠ ಇವರಿಂದ ಗುರುಪೂರ್ಣಿಮೆ ಬಗ್ಗೆ ವಿಶೇಷ ಪ್ರವಚನ. ಇದರೊಂದಿಗೆ ಬೆಳಗ್ಗೆ 10 ಗಂಟೆಯಿAದ ರಾತ್ರಿ 10 ಗಂಟೆವರೆಗೂ ನಿರಂತರ ನಾಮ ಕೀರ್ತನೆ ಜರುಗಲಿದೆ. ಮೇಲ್ಕಂಡ ಕಾರ್ಯಕ್ರಮಕ್ಕೆ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದು, ಭಾಗವಹಿಸಿದ ಎಲ್ಲ ಭಕ್ತರಿಗೂ ಬೆಳಗ್ಗೆ 9 ಗಂಟೆಯಿAದ ರಾತ್ರಿ 10 ಗಂಟೆವರೆಗೂ ನಿರಂತರ ಅನ್ನ ಪ್ರಸಾದ ಸೇವೆಯ ವ್ಯವಸ್ಥೆ ಮಾಡಲಾಗಿದೆ.
ಮತ್ತು ಭಕ್ತರು ಸಾಯಿಮಂದಿರಕ್ಕೆ ಬಂದು ಬಾಬಾರವರನ್ನು ದರ್ಶನ ಮಾಡಿಕೊಳ್ಳುವುದಕ್ಕಾಗಿ ಚಳ್ಳಕೆರೆ ನೆಹರು ಸರ್ಕಲ್‌ನಿಂದ ಉಚಿತವಾಗಿ ಬಸ್ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ ಎಂದರು.
ಈದೇ ಸಂಧರ್ಭದಲ್ಲಿ ಟ್ರಸ್ಟಿ ಕೆ.ಎಂ.ಜಗದೀಶ್, ಬಿಸಿ.ಸತೀಶ್, ಹೂವಿನ ಜಗದೀಶ್, ಎಂ.ಆರ್.ರವಿಪ್ರಸಾದ್, ಟ್ರಸ್ಟಿ ಬಿಸಿ.ವೆಂಕಟೇಶ್, ಸಿ.ಆರ್.ಶ್ರೀನಿವಾಸ್, ದೇವರಾಜ್ ಇತರರು ಇದ್ದರು.