ಚಳ್ಳಕೆರೆ : ಸಮಾಜದಲ್ಲಿರುವಂತಹ ಸೌಲಭ್ಯ ವಂಚಿತರ ಹಿತವನ್ನು ಕಾಯುವ ಕೆಲಸವನ್ನು ಅಧಿಕಾರಿಗಳು ಮತ್ತು ನೌಕರರು ಹಾಗೂ ಚುನಾಯಿತ ಪ್ರತಿನಿಧಿಗಳು ಮಾಡಿದಾಗ ಮಾತ್ರ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಸರ್ಕಾರದ ಕಾರ್ಯಕ್ರಮದ ಆಶಯ ಸಫಲ್ಯವಾಗುತ್ತದೆ ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.
ಅವರು ಚಳ್ಳಕೆರೆ ತಾಲೂಕಿನ ರಾಮಜೋಗಿಹಳ್ಳಿ ಗ್ರಾಮದಲ್ಲಿ ಜಿಲ್ಲಾ ಅಧಿಕಾರಿಗಳ ಗ್ರಾಮ ವಾಸ್ತವ್ಯದ ಪೂರ್ವ ಭಾವಿಯಾಗಿ ಗ್ರಾಮ ವಿಕ್ಷಣೆ ಮಾಡಿ ಮಾತನಾಡಿದರು.
ಸರ್ಕಾರಿ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಪರಿಣಾಮಕಾರಿಯಾಗಿ ಒದಗಿಸುವ ಜವಾಬ್ದಾರಿ ಸ್ಥಳೀಯ ಪಂಚಾಯಿತಿ ಚುನಾಯಿತ ಪ್ರತಿನಿಧಿಗಳಿರಬೇಕು ಸಮಾಜದಲ್ಲಿರುವಂತಹ ಸೌಲಭ್ಯ ವಂಚಿತರ ಹಿತವನ್ನು ಕಾಯುವ ಕೆಲಸವನ್ನು ಅಧಿಕಾರಿಗಳು ಮತ್ತು ನೌಕರರು ಹಾಗೂ ಚುನಾಯಿತ ಪ್ರತಿನಿಧಿಗಳು ಮಾಡಬೇಕಿದೆ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಸರ್ಕಾರದ ಕಾರ್ಯಕ್ರಮ ಸೌಲಭ್ಯ ವಂಚಿತರಿಗೆ ಸಂಜೀವಿನಿ ಅಂತ ವರದಾನವಾಗಿದ್ದು ಇದನ್ನು ಉಪಯೋಗಿಸಿಕೊಂಡು ಗ್ರಾಮದಲ್ಲಿರುವಂತಹ ಎಲ್ಲಾ ಸೌಲಭ್ಯ ವಂಚಿತರಿಗೆ ಸರ್ಕಾರದ ಸೌಲಭ್ಯವನ್ನು ಒದಗಿಸಲು ಮುಂದಾಗಬೇಕೆಂದು ಕರೆ ನೀಡಿದರು
ಕಾರ್ಯಕ್ರಮದ ಅಧ್ಯಕ್ಷತೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ವಹಿಸಲಿದ್ದು, ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಒಳಗೊಂಡ ಸಾರ್ವಜನಿಕರು ಭಾಗವಹಿಸಲಿದ್ದಾರೆ.
ಅಂದಿನ ಕಾರ್ಯಕ್ರಮದಲ್ಲಿ ಶಾಸಕರನ್ನು ಜಾನಪದ ಶೈಲಿಯ ಜೋಡಿ ಎತ್ತಿನ ಗಾಡಿಯಲ್ಲಿ ವಿವಿಧ ಕಲಾತಂಡದಗಳೊಂದಿಗೆ ಬರಮಾಡಿಕೊಂಡು ಹಿಂದುಳಿದ ಒಂದು ಕಾಲೋನಿಯಲ್ಲಿ ಮನೆಮನೆಯನ್ನು ವೀಕ್ಷಣೆ ಮಾಡಿ ಅವರ ಕುಂದು ಕೊರತೆಯನ್ನು ವಿಚಾರಿಸಲಿದ್ದಾರೆ
ತದನಂತರ ಇಡೀ ಗ್ರಾಮದಲ್ಲಿ ಪೌತಿಕಾತೆ ಪೋಡಿ ದಾರಿ ವಿವಾದ ಮುಂತಾದ ಇನ್ನಿತರ ಕಂದಾಯ ಇಲಾಖೆಗೆ ಸಂಬಂಧಿಸಿದ ಉಳಿದ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳಿದ್ದಲ್ಲಿ ಅಂದಿನ ದಿನ ನಮ್ಮ ಗಮನಕ್ಕೆ ತಂದಲ್ಲಿ ಬೇರೆ ಇಲಾಖೆಯ ವತಿಯಿಂದ ಪರಿಹರಿಸಲಾಗುವುದು ರಾಮಜೋಗಿಹಳ್ಳಿ ಪಂಚಾಯತಿ ವ್ಯಾಪ್ತಿಯಲ್ಲಿ ಬರುವಂತ ಐದು ಗ್ರಾಮಗಳನ್ನು ಕೂಡ ಸಮಸ್ಯೆಗಳಿಂದ ಮುಕ್ತಗೊಳಿಸಲಾಗಿದೆ
ಸಾರ್ವಜನಿಕರು ಅದರ ಪ್ರಯೋಜನವನ್ನು ಪಡೆದುಕೊಳ್ಳ ಕೊಡಬೇಕೆಂದು ಸಲಹೆ ನೀಡಿದರು
ಇದೇ ಸಂದರ್ಭದಲ್ಲಿ ರಾಮಜೊಗಿ ಹಳ್ಳಿ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಎಲ್ಲಾ ಸದಸ್ಯರು ಉಪಸ್ಥಿತರಿದ್ದರು