ಚಳ್ಳಕೆರೆ : ಆಗಸ್ಟ್15 ರಂದು ನಗರದ ಬಿಸಿನೀರು ಮುದ್ದಪ್ಪ ಪ್ರೌಢಶಾಲಾ ಮೈದಾನದಲ್ಲಿ ನಡೆದ
79 ನೇ ಸ್ವಾತಂತ್ರ್ಯ ದಿನಾಚರಣೆಯ ವೇದಿಕೆ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯಕ್ಕಾಗಿ ಹೆಚ್ಚಿನ ಸೇವೆ ಸಲ್ಲಿಸಿದ ಹೋರಾಟಗಾರರ ಸಂಖ್ಯೆ ಹೇಳಬಾರದು ಹಾಗಿತ್ತು, ಇದರಿಂದ ಕೆಲವರು, ಚರ್ಚೆ, ವಿವಾದ ಮಾಡಬಾರದು ಹೇಳಿಕೆ ಹಿಂಪಡೆಯುತ್ತೆನೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದ್ದಾರೆ.

ಕರ್ನಾಟಕ ರಾಜ್ಯದ ಸಣ್ಣ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷರು, ಹಾಗೂ ಶಾಸಕ ಟಿ.ರಘುಮೂರ್ತಿ ಭಾಷಣ ಮಾಡುವ ಸಂಧರ್ಭದಲ್ಲಿ ಸ್ವಾತಂತ್ರ್ಯಕ್ಕಾಗಿ ಹೆಚ್ಚಿಗೆ ಸೇವೆ ಸಲ್ಲಿಸಿದ, ಹೋರಾಟ‌ ಮಾಡಿದ ದೇಶದ ಎಲ್ಲಾ ಜಾತಿ ಜನಾಂಗದವರು ಪಟ್ಟಿಯನ್ನು ದೆಹಲಿಯ ಕೆಂಪು ಕೋಟೆಯಲ್ಲಿ ಹಾಕಿದ್ದಾರೆ, ಅದರಂತೆ ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ ಸುಮಾರು 95 ಸಾವಿರದ 300 ಹೋರಾಟಗಾರರನ್ನು ಸ್ಮರಿಸಬಹುದು,

ಅದರಂತೆ
ಹಲವು ಧರ್ಮ, ಜಾತಿಗಳ ಹೋರಾಟಗಾರರ ಜನಸಂಖ್ಯೆ ನೋಡುವುದಾದರೆ 61 ಸಾವಿರ 395 ಮುಸ್ಲಿಂ ಧರ್ಮದವರು, ಇನ್ನೂ ಸಿಕ್ ರು 8050, ಹಿಂದೂ ಬ್ಯಾಕ್ ವರ್ಡ್ 14480, ದಲಿತರು 10777,, ಇನ್ನೂ ಮೇಲು ವರ್ಗದ ಜನರು 598 , ಹೋರಾಟಗರರ ಒಳಗೊಂಡಿದ್ದಾರೆ.

ಒಟ್ಟಾರೆ 95300 ಜನ
ಹೋರಾಟಗಾರರು ಸ್ವಾತಂತ್ರ್ಯ ಕ್ಕಾಗಿ ಹೋರಾಟ ಮಾಡಿದ್ದಾರೆ ಇನ್ನೂ13-4- 1919 ರಲ್ಲಿ ಜಲಿಯನ್ ವಾಲ ಬಾಗ್ ಬ್ರಿಟಿಷ್ ಹತ್ಯೆಕಾಂಡ ನಡೆದ ಘಟನೆಯಲ್ಲಿ ಉದಯ್ ಸಿಂಗ್ ರವರು 21 ವರ್ಷಗಳ ಸ್ವಾತಂತ್ರ್ಯ ಬಂದ ನಂತರ
ರಾಮ್ ಮಹಮ್ಮದ್ ಸಿಂಗ್ ಹಜಾದ್ ಎಂಬ ವಿಶೇಷ ಉಲ್ಲೇಖ ಮಾಡಲಾಗಿತ್ತು , ಆದರೆ ಈ ಭಾಷಣ ಕೆಲವು ಚರ್ಚೆಗಳಿಗೆ ವಿವಾಧಗಳಿಗೆ ಕಾರಣವಾಗಿದೆ,

ಆದ್ದರಿಂದ ಆ ಹೇಳಿಕೆಯನ್ನು‌ ಹಿಂಪಡೆಯುತ್ತೆನೆ, ಇದರಿಂದ ಯಾರು ಕೂಡ ವಿವಾದಗಳಿಗೆ ಆಸ್ವಾಧ ನೀಡಬಾರದು, ನಾನು ಹೇಳಿಕೆ ಹಿಂಪಡೆದಿದ್ದೆನೆ , ನನಗೆ ಆ ಕ್ಷಣದಲ್ಲಿ ಹಿರಿಯರು, ಅನುಭವಿಗಳು ಮಾಹಿತಿ ಸಂಗ್ರಹಿಸುವಂತವರು ಮಾಹಿತಿ ನೀಡಿದ್ದರು, ಆದರಂತೆ ಭಾಷಣದಲ್ಲಿ ಉಲ್ಲೇಖ ಮಾಡಿದ್ದೆ ಆದ್ದರಿಂದ ಆ ಹೇಳಿಕೆಗೆ ಯಾರು ಕೂಡ ಚರ್ಚೆ, ವಿವಾದ ಮಾಡುವುದು ಬೇಡ, ಹೇಳಿಕೆ ಹಿಂಪಡೆದಿದ್ದೆನೆ ಎಂದು ಶಾಸಕ ಟಿ.ರಘುಮೂರ್ತಿ ತಾಲೂಕು ಕಛೇರಿಯಲ್ಲಿ ನಡೆದ ಶ್ರೀ ಕೃಷ್ಣಾ ಜನ್ಮಷ್ಠಾಮಿಯಲ್ಲಿ ಮಾಧ್ಯಮದೊಟ್ಟಿಗೆ ಹೇಳಿಕೆ ಹಿಂಪಡೆದಿದ್ದಾರೆ.

About The Author

Namma Challakere Local News
error: Content is protected !!