ಚಳ್ಳಕೆರೆ : ಕುವೈತ್ ಕನ್ನಡ ಕ್ಷಮಾಭಿವೃದ್ಧಿ ಸಂಘವು ಹಿಂದುಳಿದ ಜಿಲ್ಲೆ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕನ್ನು 9 ಗ್ರಾಮಗಳನ್ನು ದತ್ತು ತೆಗೆದುಕೊಂಡು ಈ ಗ್ರಾಮಗಳಿಗೆ ಸ್ಮಾಟ್‌ಕ್ಲಾಸ್, ಶೌಚಾಲಯ ಮತ್ತಿತರ ಶೈಕ್ಷಣಿಕ ಚಟುವಟಿಕೆಗಳಿಗೆ ಸಂಬAಧಿಸಿದ ಮೂಲಭೂತ ಸೌಕರ್ಯಗಳನ್ನು ಕಲ್ಪಿಸಿರುವುದು ತುಂಬಾ ಅವಿಸ್ಮರಣೀಯ ರಾಜ್ಯದ ಪ್ರತಿಯೊಂದು ಹಿಂದುಳಿದ ತಾಲೂಕುಗಳಲ್ಲಿ ಅನಿವಾಸಿ ಭಾರತೀಯರು ಇಂತಹ ಸತ್ಕಾರ್ಯಗಳನ್ನು ಮಾಡುವ ಮೂಲಕ ರಾಜ್ಯದಲ್ಲಿ ಶೈಕ್ಷಣಿಕ ನೆಲೆಗಟ್ಟನ್ನು ಭದ್ರಗೊಳಿಸುವಲ್ಲಿ ನೆರವಾಗಬೇಕೆಂದು ಕರ್ನಾಟಕ ರಾಜ್ಯದ ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು


ಕುವೈತ್ ಕನ್ನಡ ಕ್ಷೇಮಾಭಿವೃದ್ಧಿ ಸಂಘದವರು ಚಳ್ಳಕೆರೆ ತಾಲೂಕಿನ 9 ಸರ್ಕಾರಿ ಪ್ರಾಥಮಿಕ ಪಾಠ ಶಾಲೆಗಳ ಮಕ್ಕಳಿಗೆ ವಿಜ್ಞಾನ ವಸ್ತು ಪ್ರದರ್ಶನ ಶೈಕ್ಷಣಿಕ ಪ್ರವಾಸ ಮತ್ತು ಕುವೈತ್ ಕನ್ನಡ ಕ್ಷೇಮಾಭಿವೃದ್ಧಿ ಸಂಘದ ಐದನೇ ವರ್ಷದ ಆಚರಣೆಯ ಸಂಬAಧ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದಂತಹ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿಎಸ್.ನಾಗಾಭರಣ ಮಾತನಾಡಿ ಗಡಿ ಭಾಗದ 19 ತಾಲ್ಲೂಕುಗಳಲ್ಲಿ 38 ಶಾಲೆಗಳನ್ನು ಕನ್ನಡ ಸಂಶೋಧನಾ ಕೇಂದ್ರಗಳಿಗೆ ಆಯ್ಕೆ ಮಾಡಲಾಗುವುದು ಈ ಶಾಲೆಗಳಲ್ಲಿ ಸಮಗ್ರವಾಗಿ ಕನ್ನಡ ಕಲಿಕೆಯ ಜಾಗೃತಿ ಸಂಶೋಧನೆ ಅಂತ ಕಾರ್ಯಗಳನ್ನು ಕೈಗೆತ್ತಿಕೊಳ್ಳುವುದು ಸಂತಸ ಎಂದು ಹೇಳಿದರು


ಚಳ್ಳಕೆರೆ ತಹಶೀಲ್ದಾರ್ ಎನ್.ರಘುಮೂರ್ತಿ ಮಾತನಾಡಿ ಪಂಪ ಮಹಾಕವಿಯ ಆದರ್ಶದ ಮಾತುಗಳು ಜಾಗದ ಭೋಗದಕ್ಕರೆಯ ಗೇಯದ ಗೊತ್ತಿಲನಿಂಪು ಪುಗಲ್ಗರ ಮಾದ ಮಾನಿಸರೆ ಮಾನಿಸ ರಂತಗಿಯೂ ತೀರ್ದೊಪ್ದೆ ತೀರದೊಡಂ ಮರಿದುಂಬಿಯಾಗಿ ಮೇಣಕೋಗಿಲೆಯಾಗಿ ಪುಟ್ಟುವುದು ಆರ್ ಅಂಕುಶ ಮಿತ್ತೋಡಂ ನೆನೆಯುವುದೆನ್ನ ಮನಂ ಬನವಾಸಿ ದೇಶಮ್ ಎಂದು ಹೇಳಿರುವಂತಹ ಮಾತಿದೆ ಇದಕ್ಕನುಗುಣವಾಗಿ ಇಂತಹ ಕೈಂಕರ್ಯವನ್ನು ಈ ಸಂಘದವರು ಮಾಡಿದ್ದಾರೆ ಬಸವಾದಿ ಶರಣರು ಹೇಳಿದ ಹಾಗೆ ತಮ್ಮ ಶ್ರಮದಿಂದ ಬಂದ ಸ್ವಲ್ಪ ಹಣವನ್ನು ಸಮಾಜದ ಉದ್ಧಾರಕ್ಕೆ ಬಳಸಿ ಸಾರ್ಥಕತೆಯನ್ನು ಮೆರೆದಿದ್ದಾರೆ ಚಳ್ಳಕೆರೆ ತಾಲೂಕಿನ ಜನತೆಯ ಪರವಾಗಿ ಈ ಸಂಘದವರನ್ನು ಆತ್ಮೀಯವಾಗಿ ಅಭಿನಂದಿಸುತ್ತೇನೆ ಎಂದು ಹೇಳಿದರು.


ಚಳ್ಳಕೆರೆ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್ ಮಾತನಾಡಿ 9ಶಾಲೆಗಳ ಮಕ್ಕಳಿಗೆ ಉನ್ನತ ಶಿಕ್ಷಣದ ಕಲಿಕೆಯ ಸ್ಪರ್ಶವನ್ನು ಈ ಸಂಘದವರು ನೀಡಿದ್ದು ಮುಂದೆಯೂ ಕೂಡ ಅಗತ್ಯವಿರುವ ಮೂಲ ಸೌಲಭ್ಯಗಳನ್ನು ಆಯ್ದ ಶಾಲೆಗೆ ಒದಗಿಸಬೇಕೆಂದು ತಮ್ಮ ಸಲಹೆ ನೀಡಿದರು


ಕುವೈತ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷÀ ವಾಸಕಿ ಮಾತನಾಡಿ ಈ ಸಂಘದ ರಚನೆಯ ಪರಿಕಲ್ಪನೆ ಬಂದಿದ್ದು ಹಿಂದುಳಿದ ತಾಲೂಕು ಚಳ್ಳಕೆರೆಯಿಂದ ನಮ್ಮ ಕಾರ್ಯಗಳನ್ನು ಈ ತಾಲೂಕಿನಿಂದಲೇ ಪ್ರಾರಂಭ ಮಾಡಿದ್ದೇವೆ ಉದಯ ಕೂಡ ಇನ್ನೂ ಹೆಚ್ಚು ಹೆಚ್ಚು ಶಾಲೆಗಳನ್ನು ಆಯ್ಕೆ ಮಾಡಿಕೊಂಡು ಬಡವರು ಮತ್ತು ದೀನ ದಲಿತರ ಅಬ್ಯುದಯಕ್ಕಾಗಿ ಶ್ರಮಿಸುತ್ತೇವೆಂದು ಹೇಳಿದರು


ಈ ಸಮಾರಂಭದಲ್ಲಿ ಮಾಜಿ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮುದ್ದುಕೃಷ್ಣ, ಶೈಕ್ಷಣಿಕ ಜಿಲ್ಲಾ ಉಪ ನಿರ್ದೇಶಕ ತಹಶೀಲ್ದಾರ್ ಎನ್.ರಘುಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ ಸುರೇಶ್, ಕುವೈತ್ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ವಾಸಕಿ ಮತ್ತು ಸಂಘದ ಎಲ್ಲ ಪದಾಧಿಕಾರಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!