ನಾಯಕನಹಟ್ಟಿ:: ಚಳ್ಳಕೆರೆ ತಾಲೂಕಿನಲ್ಲಿ ಎರಡನೇ ಸ್ಥಾನದಲ್ಲಿ ಅತ್ಯುತ್ತಮ ಶಾಲೆಯೆಂದು ಶ್ರೀ ವೀರಭದ್ರೇಶ್ವರ ಪ್ರೌಢಶಾಲೆ ಇಂದು ತಾಲೂಕು ಜಿಲ್ಲೆಯ ಅತ್ಯಂತ ಹೆಸರನ್ನು ಪಡೆದಿದೆ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಓದಿದ ಇಂದು ದೇಶವಿದೇಶಗಳಲ್ಲಿ ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ ಎಂದು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಬಿ ಶಂಕರ್ ಸ್ವಾಮಿ ಹೇಳಿದ್ದಾರೆ.

ಅವರು ಹೋಬಳಿಯ ಮುಸ್ಟಲಗುಮಿ ಗ್ರಾಮದ ಶ್ರೀ ವೀರಭದ್ರೇಶ್ವರ ಪ್ರೌಢಶಾಲೆಯ ಗುರು ಸ್ಮಾರಣಾ ವಂದನೆ ಹಾಗೂ ಸ್ನೇಹ ಸಂಗಮ ಕಾರ್ಯಕ್ರಮವನ್ನು ಜ್ಯೋತಿ ಬೆಳಗುವುದರ ಮುಖಾಂತರ ಉದ್ಘಾಟಿಸಿ ಚಾಲನೆ ನೀಡಿ ನಂತರ ಮಾತನಾಡಿ ನಾನು ಇದೇ ಪ್ರೌಢಶಾಲೆಯಲ್ಲಿ ವಿದ್ಯಾಭ್ಯಾಸ ಕಲಿತಿದ್ದು ಆಗಿನ ಕ್ರೀಡಾ ಆಟಗಳು ಆ ತುಂಟತನ ನಮ್ಮ ಗುರುಗಳು ಕಲಿಸಿದ ವಿದ್ಯೆ ಇಂದು ನನ್ನ ಜೀವನದಲ್ಲಿ ಅತ್ಯಂತ ಅಮೂಲ್ಯವಾದದ್ದು ಹಿಂದಿನ ವಿದ್ಯಾರ್ಥಿಗಳು ಸರ್ಕಾರದ ಸೌಲಭ್ಯಗಳು ನೀಡುತ್ತಿದೆ ಸೌಲಭ್ಯಗಳನ್ನು ಪಡೆದುಕೊಂಡು ವಿದ್ಯಾರ್ಥಿಗಳು ಚೆನ್ನಾಗಿ ವಿದ್ಯಾಭ್ಯಾಸವನ್ನು ಕಲಿತು ತಮ್ಮ ತಂದೆ ತಾಯಿಗೆ ಒಳ್ಳೆಯ ಹೆಸರನ್ನು ತರಬೇಕು ಎಂದು ಗ್ರಾಮ ಪಂಚಾಯತಿ ಅಧ್ಯಕ್ಷರಾದ ಬಿ ಶಂಕರ್ ಸ್ವಾಮಿ ತಿಳಿಸಿದ್ದಾರೆ.

ಈ ವೇಳೆ ಹಳೆಯ ವಿದ್ಯಾರ್ಥಿಗಳು ತಮ್ಮ ನೆನಪುಗಳನ್ನ ಮೆಲುಕು ಹಾಕಿದ ವಿದ್ಯಾರ್ಥಿಗಳಾದ ಬಿ ನಾಗರಾಜ್, ಕರಿಬಸಮ್ಮ, ಕೆ ಎಂ ಕೆಂಚಲಿಂಗಪ್ಪ, ಬಿ ಎಂ ನಾಗರಾಜ್, ಪಿ ವಿ ವಿಶ್ವನಾಥ್, ಕಾಕಸೂರಯ್ಯ, ಮಾತನಾಡಿದ್ದಾರೆ.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿಗಳಾದ ಎ ಎನ್ ಸತೀಶ್, ಶ್ರೀಮತಿ ಶಶಿಕಲಾ ನಾಗರಾಜ್ ಹಾಗೂ ಆಡಳಿತ ಮಂಡಳಿಯ ಸದಸ್ಯರುಗಳಾದ ಶ್ರೀಯುತ ಕೊಟ್ರೇಶ್, ತಿಪ್ಪಣ್ಣ, ಮಂಜುನಾಥ್, ತಿಪ್ಪೇಸ್ವಾಮಿ, ಜಯಣ್ಣ, ಶಾಂತಮ್ಮ, ಕಾರ್ಯಕ್ರಮದ ಕೇಂದ್ರ ಬಿಂದುಗಳಾದ ಶ್ರೀಯುತ ಮಲ್ಲಪ್ಪ ನಿವೃತ್ತ ಶಿಕ್ಷಕರು ಗಣಿತ ಮುತ್ತುಗಾರನಹಳ್ಳಿ, ಗಿರಿಯಪ್ಪ ನಿವೃತ್ತ ಕನ್ನಡ ಶಿಕ್ಷಕರು ಕೋವೆರಹಟ್ಟಿ, ಬಿ ಎಂ ತಿಪ್ಪೇರುದ್ರಸ್ವಾಮಿ ನಿವೃತ್ತ ಹಿಂದಿ ಶಿಕ್ಷಕರು ನಾಯಕನಹಟ್ಟಿ, ಕೆ ಚಂದ್ರಪ್ಪ ನಿವೃತ್ತ ವಿಜ್ಞಾನ ಶಿಕ್ಷಕರು ಹೂಡೇಂ, ಎಚ್ ಎಮ್ ವಿಶ್ವನಾಥ ನಿವೃತ್ತ ಕನ್ನಡ ಶಿಕ್ಷಕರು ಹುಲಿಕುಂಟೆ, ಜಿ ಬಸವರಾಜಪ್ಪ ನಿವೃತ್ತ ಶಿಕ್ಷಕರು ಹೂಡೇಂ,
ಬೋಧೇತರಾದ ಕೆ ಎಸ್ ಜಯಣ್ಣ, ಶಂಕ್ರಪ್ಪ, ಶಿವಮೂರ್ತಿಪ್ಪ, ಜಯದೇವಪ್ಪ, ಪಿ ತಿಪ್ಪೇಸ್ವಾಮಿ,

ಶಾಲೆಯ ಮುಖ್ಯೋಪಾಧ್ಯಾಯರಾದ ಕಾಂತರಾಜ್, ಶಿಕ್ಷಕರಾದ ಸಿದ್ದಯ್ಯ,ನಲಗೇತನಹಟ್ಟಿ ಜಿ ವೈ ತಿಪ್ಪೇಸ್ವಾಮಿ ,ಚಿತ್ರಲಿಂಗಪ್ಪ, ಶ್ರೀನಿವಾಸ್ ಉಮೇಶ್ ಮನೋಜ್ ಸೇರಿದಂತೆ ಹಳೆಯ ವಿದ್ಯಾರ್ಥಿಗಳು ಶಾಲೆಯ ವಿದ್ಯಾರ್ಥಿಗಳು ಗ್ರಾಮಸ್ಥರು ಉಪಸ್ಥಿತರಿದ್ದರು

Namma Challakere Local News
error: Content is protected !!