ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ಮುಸ್ಲಿಂ ಭಾಂದವರು.
ಚಳ್ಳಕೆರೆ : ಈದ್ಗಾ ಮೈದಾದಲ್ಲಿ ಮುಸ್ಲೀಂ ಸಮುದಾಯ ಸೇರಿ ಸಾಮೂಹಿಕವಾಗಿ ಪ್ರಾರ್ಥನೆ ಸಲ್ಲಿಸಿದರು,
ನಗರದ ವಿವಿಧ ಮಸೀದಿಗಳಲ್ಲಿ ಬೆಳಿಗ್ಗೆಯಿಂದಲೆ ಪ್ರಾರ್ಥನೆ ಸಲ್ಲಿಸಿ ನಂತರ ಪ್ರಮುಖ ರಸ್ತೆಯ ಮೂಲಕ ಸಾಗಿತು, ತ್ಯಾಗ ಬಲಿದಾನ, ಶಾಂತಿ ಸೌಹಾರ್ದತೆಗಳ ಹಬ್ಬವಾದ ಬಕ್ರೀದ್ ಹಬ್ಬವನ್ನು ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕವಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಿದರು.


ಈದ್ಗಾ ಮೈದಾನದಲ್ಲಿ ಮುಸ್ಲಿಂ ಸಮುದಾಯ ಪ್ರಾರ್ಥನೆಗೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಭಾಗವಹಿಸಿ ಶಾಂತಿ ಸಂಕೇತವಾದ ಬಕ್ರೀದ್ ಹಬ್ಬವನ್ನು ಆಚರಿಸುತ್ತಿರುವುದು ಸಂತಸ ತಂದಿದೆ, ಈದೇ ರೀತಿಯಲ್ಲಿ ಸ್ನೇಹಮಹಿ ಜೀವನ ನಡೆಸಲು ಹಿಂದೂ ಮುಸ್ಲಿಂ ಸಹಬಾಳ್ವೆ ಅತೀ ಮುಖ್ಯವಾಗಿದೆ ಎಂದರು.

ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಮುಖಂಡ ಎಂ.ರವೀಶ್ ಕುಮಾರ್ ಮಾತನಾಡಿದರು, ಎಸ್.ಮಹಮ್ಮದ್‌ಸಾಬ್, ಸೈಯಾದ್ ಆಶ್ರಫ್, ವಿ.ಇರ್ಷಾದ್ ಆಹಮ್ಮದ್, ಹಾಜಿಅತೀಕ್‌ರೆಹಮಾನ್, ತೌಸಿಫ್, ದಾದಾಪೀರ್, ರಷೀದ್ ಸಾಬ್,ಕೆ.ರಿಜ್ವಾನ್, ಸಾಧಿಖುಲಾ, ಮುಜೀಬ್, ಸುರಕ್ಷಾ ಪಾಲಿ ಕ್ಲಿನಿಕ್ ಪರೀದ್‌ಖಾನ್, ಸೈಯದ್ ನಬಿ, ಜಬಿವುಲ್ಲಾ, ನಯಾಜ್, ಸೈಪುಲ್ಲಾ, ಸೈಯದ್, ಇತರರಿದ್ದರು.


ಬಕ್ರೀದ್ ಹಬ್ಬದ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಬಿಗಿ ಭದ್ರತೆ ಮಾಡಲಾಗಿತ್ತು ಡಿವೈಎಸ್‌ಪಿ ರಮೆಶ್ ಕುಮಾರ್, ಇನ್ಸೆಪೆಕ್ಟೆರ್ ಜೆ.ತಿಪ್ಪೆಸ್ವಾಮಿ, ಪಿಎಸ್‌ಐ ಬಸವರಾಜ್, ಪಿಎಸ್‌ಐ ಸತೀಶ್‌ನಾಯ್ಕ ಸಿಬ್ಬಂದಿ ಇತರರಿದ್ದರು.
ಫೋಟೊ, ಚಳ್ಳಕೆರೆ ನಗರದ ಈದ್ಗಾ ಮೈದಾನದಲ್ಲಿ ಬಕ್ರೀದ್ ಹಬ್ಬದ ಪ್ರಯುಕ್ತ ಮುಸ್ಲೀಂ ಬಾಂದವರು ಸಾಮೂಹಿಕ ವಿಶೇಷ ಪ್ರಾರ್ಥನೆಯಲ್ಲಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಎಂ.ರವೀಶ್ ಕುಮಾರ್ ಭಾಗವಹಿಸಿದ್ದರು.

About The Author

Namma Challakere Local News
error: Content is protected !!