ಬಿಪಿಎಲ್ ಕಾರ್ಡ್ ಹೊಂದಿರುವ ಸಮುದಾಯದವರಿಗೆ ಸಿಹಿಸುದ್ದಿ : ಮಾಸಿಕ 75 ಯೂನಿಟ್ ಉಚಿತ ವಿದ್ಯುತ್
ಚಳ್ಳಕೆರೆ : ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ವ್ಯಾಪ್ತಿಯ ಎಲ್ಲಾ ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿನ ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್ ಪಡಿತರ ಚೀಟಿ ಹೊಂದಿರುವ) ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಕುಟುಂಬಗಳ ಗೃಹ ವಿದ್ಯುತ್ ಬಳಕೆದಾರರಿಗೆ (ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಭಾಗ್ಯಜ್ಯೋತಿ/ಕುಟೀರಜ್ಯೋತಿ ಬಳಕೆದಾರರನ್ನು ಒಳಗೊಂಡAತೆ) ಮಾಸಿಕ 75 ಯೂನಿಟ್‌ಗಳವರೆಗೆ ಉಚಿತ ವಿದ್ಯುತ್ ಪೂರೈಕೆ ಮಾಡಲಾಗುತ್ತದೆ ಎಂದು ಸಹಾಯಕ ಕಾರ್ಯಪಾಲಕ ಇಂಜಿನಿಯಾರ್ ಎನ್.ಎಸ್.ರಾಜು ಹೇಳಿದ್ದಾರೆ.
ಅವರು ಮಾಧ್ಯಮದೊಂದಿಗೆ ಮಾತ್ರನಾಡಿದ ಅವರು ಗ್ರಾಹಕರು, ಈ ಸೌಲಭ್ಯವನ್ನು ಪಡೆಯಲು, ವಿದ್ಯುತ್ ಬಿಲ್ ಪ್ರತಿ, ಬಿಪಿಎಲ್ ರೇಷನ್ ಕಾರ್ಡ್ ಪ್ರತಿ (ಆರ್.ಸಿ ಸಂಖ್ಯೆ ಸಹಿತ), ಆಧಾರ್ ಕಾರ್ಡ್ ಪ್ರತಿ, ಜಾತಿ ಪ್ರಮಾಣಪತ್ರದ ಪ್ರತಿ, (ಆರ್.ಡಿ. ಸಂಖ್ಯೆ ಸಹಿತ) ಬ್ಯಾಂಕ್ ಖಾತೆ ಸಂಖ್ಯೆ ಹಾಗೂ ಸಂಬAಧಿಸಿದ ಇತರೆ ಮಾಹಿತಿಗಳನ್ನು ಒದಗಿಸಬೇಕು.
ಸೌಲಭ್ಯವನ್ನು ಪಡೆಯಲು, ಅರ್ಹ ಫಲಾನುಭವಿ ಗ್ರಾಹಕರು ಮಾಸಿಕ ವಿದ್ಯುತ್ ಬಿಲ್ಲನ್ನು ಸಂಪೂರ್ಣವಾಗಿ ನಿಗಧಿತ ಅವಧಿಯೊಳಗೆ ಪಾವತಿಸಬೇಕು. ತದನಂತರ ನೇರವಾಗಿ ಸದರಿ ಗ್ರಾಹಕರ ಬ್ಯಾಂಕ್ ಖಾತೆಗೆ ಈ ಯೋಜನೆಯ ವ್ಯವಸ್ಥೆಯಡಿಯಲ್ಲಿ ಸರ್ಕಾರದಿಂದ ಸಹಾಯಧನ ಮರುಪಾವತಿಸಲಾಗುವುದು.
ಸೌಲಭ್ಯವನ್ನು ಪಡೆಯಲು ಗ್ರಾಹಕರು 2022ರ ಏಪ್ರಿಲ್ 30ರ ಅಂತ್ಯಕ್ಕೆ ಇರುವ ವಿದ್ಯುತ್ ಬಾಕಿಯನ್ನು ಸಂಪೂರ್ಣವಾಗಿ ಪಾವತಿಸಿದಲ್ಲಿ ಮಾತ್ರ ಸೌಲಭ್ಯವನ್ನು ಪಡೆಯಲು ಅರ್ಹರಿರುತ್ತಾರೆ.
ಅರ್ಹ ಫಲಾನುಭವಿಗಳು, ಭರ್ತಿ ಮಾಡಿದ ಅರ್ಜಿಗಳನ್ನು ಉಪವಿಭಾಗದ ಕಂದಾಯ ಶಾಖೆಯಲ್ಲಿ ಸಲ್ಲಿಸಬೇಕು ಎಂದು ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿಯ ಮೂಲಕ ಪ್ರಕಟಣೆ ತಿಳಿಸಿದೆ ಎನ್ನಲಾಗಿದೆ.