ಚಳ್ಳಕೆರೆ : ಶಾಲೆಯಲ್ಲಿ ಕಲಿಕೆಗೆ ಪೂರಕದ ವಾತವರಣ ಹಾಗೂ ಎಸ್ ಎಸ್ ಎಲ್ ಸಿ ಯಲ್ಲಿ ಉತ್ತಮ ಫಲಿತಾಂಶ
ಶಾಲೆಯಲ್ಲಿ ಉತ್ತಮ ಕೊಠಡಿ ಇದ್ದು ಕಲಿಕೆಗೆ ಬೇಕಾಗುವಂತಹ ಎಲ್ಲಾ ವಾತವರಣವು ಇಲ್ಲಿದೆ ಹಾಗೆಯೇ ಎಸ್ ಎಸ್ ಎಲ್ ಸಿ ಪರೀಕ್ಷೆ ಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಎಸ್.ಸುರೇಶ ಹೇಳಿದರು.
ತಾಲ್ಲೂಕಿನ ಕಲಮರಹಳ್ಳಿ ಸರ್ಕಾರಿ ಪ್ರೌಡ ಶಾಲೆಗೆ ಬೇಡಿ ನೀಡಿ ಶಾಲೆ ಕೊಠಡಿಯಲ್ಲಿ ಶಾಲಾ ಮಕ್ಕಳ ನ್ನು ಕುರಿತು ಮಾತನಾಡಿದರು
.ಶಾಲೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ ಬರುವ ದಿನಗಳಲ್ಲಿಯೂ ಸಹ ಉತ್ತಮ ಫಲಿತಾಂಶ ತರಬೇಕು,ಇಲ್ಲಿ ಕಲಿಕೆಗೆ ಬೇಕಾಗುವಂತಹ ಉತ್ತಮವಾದ ಕೊಠಡಿ ,ನುರಿತ ಶಿಕ್ಷಕರು ಇದ್ದಾರೆ.
ಸಮಯವನ್ನು ವ್ಯಾರ್ಥಮಾಡದೆ ಪಾಠದ ಸಮಯದಲ್ಲಿ ಶಾಲಾ ಮಕ್ಕಳಿಗೆ ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ಆನಂದ ಮಾತನಾಡಿ ಕ್ಷೇತ್ರ ಶಿಕ್ಷಣಾಧಿಕಾರಿ ಮಾರ್ಗ ದಲ್ಲಿ ಈ ಶಾಲೆಯಲ್ಲಿ ಕಳೆದಬಾರಿ ಎಸ್ ಎಸ್ ಎಲ್ ಸಿ ಪರೀಕ್ಷೆಯಲ್ಲಿ ಉತ್ತಮ ಫಲಿತಾಂಶ ಲಭಿಸಿದೆ, ಬರುವ ವರ್ಷದಲ್ಲೂ ಸಹ ಶಾಲೆಗೆ ನೂರಕ್ಕೆ ನೂರರಷ್ಟು ಫಲಿತಾಂಶ ಪಡೆಯುವಂತೆ ಎಲ್ಲಾ ಶಾಲಾ ಶಿಕ್ಷಕರು ಶ್ರಮ ವಹಿಸಲಾಗುವುದು ಎಂದರು
ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಶಾಲಾ ವಿದ್ಯಾರ್ಥಿಗಳು ಇದ್ದರು