ಚಳ್ಳಕೆರೆ : ಪ್ಲಾಸ್ಟಿಕ್ ಮುಕ್ತ ನಗರವನ್ನಾಗಿಸಲು ಸರಕಾರ ಹಲವಾರು ಕಸರತ್ತು ಮಾಡಿದರೂ ಕಿರಾಣಿ ಅಂಗಡಿಗಳಲ್ಲಿ ಪ್ಲಾಸ್ಟಿಕ್‌ಕವರ್, ಬ್ಯಾಗ್, ಮಾರುವವರ ಸಂಖ್ಯೆ ಹೆಚ್ಚಾಗಿದೆ ಆದ್ದರಿಂದ ಪ್ರತಿದಿನ ನಗರದ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕವರ್‌ಗಳನ್ನು ವಶಪಡಿಸಿಕೊಂಡು ದಂಡ ವಿಧಿಸಲಾಗುತ್ತದೆ ಎಂದು ನಗರಸಭೆ ಪೌರಾಯುಕ್ತೆ ಪಿ.ಲೀಲಾವತಿ ಹೇಳಿದ್ದಾರೆ.
ಅವರು ನಗರದ ಮಹಾದೇವಿ ರಸ್ತೆ, ಅಜ್ಜನಗುಡಿ ರಸ್ತೆ, ಬೆಂಗಳೂರು ರಸ್ತೆ, ಬಳ್ಳಾರಿ ರಸ್ತೆ ಈಗೇ ವಿವಿಧ ಕಡೆಗಳಲ್ಲಿ ಕಿರಾಣಿ ಅಂಗಡಿ ಸೇರಿದಂತೆ ಹಲವಾರು ಕಡೆ ಅಂಗಡಿಗಳಲ್ಲಿ ಶೇಖರಿಸಿದ್ದ ಪೆಪರ್‌ಕವರ್‌ಗಳನ್ನು ವಶಪಡಿಸಿಕೊಂಡು ಮಾಲೀಕರಿಗೆ ದಂಡದ ಅಸ್ತçವನ್ನು ಬೀಸಿದ್ದಾರೆ, ಪ್ರತಿ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಕ್ಯಾರಿ ಬಾಗ್‌ಗಳನ್ನು ಮಾರುವುದು ನಿಷೇದ ವಿದ್ಧರೂ ಕಾನೂನು ಉಲ್ಲಂಘಿಸಿ ಮಾರಾಟ ಮಾಡುವವರು ವಿರುಧ್ದ ದಂಡ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಕೇವಲ ಅಂಗಡಿ ಮಾಲಿಕರಲ್ಲದೆ ಸಾರ್ವಜನಿಕರು ಪ್ಲಾಸ್ಟಿಕ್ ಬಳಸುವುದನ್ನು ನಿಷೇಧಿಸಬೇಕು ಆಗಮಾತ್ರ ಸಂಪೂರ್ಣವಾಗಿ ಪ್ಲಾಸ್ಟಿಕ್ ನಿಷೆಧವಾಗುತ್ತಾದೆ ಎಂದು ಸಾರ್ವಜನಿಕರಿಗೆ ಅರಿವು ಮೂಡಿದರು.

ಬಾಕ್ಸ್ ಮಾಡಿ.
ನಗರದಲ್ಲಿ ಮೊದಲು ಸಾರ್ವಜನಿಕರು ಪಕ್ವವಾದರೆ ತಾನಾಗಿಯೇ ಪ್ಲಾಸ್ಟಿಕ್ ನಿಷೇಧವಾಗುತ್ತದೆ ಆದರೆ ಅಂಗಡಿಗೆ ಹೋಗುವಾಗ ಬಟ್ಟೆಚೀಲಗಳನ್ನು ತೆಗೆದುಕೊಂಡು ಹೋದರೆ ಒಳ್ಳೆಯದು, ಇಲ್ಲವಾದರೆ ಅಂಗಡಿ ಮಾಲೀಕರನ್ನು ಬಟ್ಟೆ ಚೀಲವನ್ನು ಕೊಡಿ ಎಂದು ಕೇಳಿದಾಗ ಮಾತ್ರ ಸಂಪೂರ್ಣವಾಗಿ ಸರಕಾರದ ಕನಸು ನನಸಾಗುತ್ತದೆ, ಅಧಿಕಾರಿಗಳ ಶ್ರಮ ಕಡಿಮೆಯಾಗುತ್ತದೆ.

—ಪಿ.ಲೀಲಾವತಿ,. ನಗರಸಭೆ
ಪೌರಾಯುಕ್ತರು

About The Author

Namma Challakere Local News
error: Content is protected !!