ಚಳ್ಳಕೆರೆ : ರಾತ್ರೋ ರಾತ್ರಿ ಕಿಡಿಗೇಡಿಗಳಿಂದ ಟಾಟಾ ಸುಮೋಗೆ ಬೆಂಕಿ
ಮಧ್ಯ ರಾತ್ರಿ ಹೊತ್ತಿ ಉರಿದ ಟಾಟಾ ಸುಮಾ.
ಗ್ಯಾರೇಜ್‌ನಲ್ಲಿ ರೀಪೇರಿಗೆಂದು ಬಂದ ವಾಹನಕ್ಕೆ ಯಾರೋ ಕಿಡಿಗೆಡಿಗಳು ಮಧ್ಯ ರಾತ್ರಿ ಬೆಂಕಿ ಹಚ್ಚಿದ್ದಾರೆ ಆದರೆ ಪಕ್ಕದಲಿ ಇದ್ದ ಯಾವ ವಾಹನಗಳಿಗೂ ಹಾನಿಯಾಗದೆ ಪಾರಾಗಿದ್ದಾವೆ.
ಈ ಅಗ್ನಿ ಅವಘಡ ನಗರದ ಬಳ್ಳಾರಿ ಮುಖ್ಯ ರಸ್ತೆಯ ಸಮೀಪ ಮಂಜುನಾಥ್ ಎನ್ನುವವರ ಗ್ಯಾರೆಜ್‌ನಲ್ಲಿ ಘಟನೆ ನಡೆದಿದೆ.
ಗ್ಯಾರೇಜ್‌ನಲ್ಲಿ ರೀಪೇರಿ ಹಂತದಲ್ಲಿ ಇದ್ದ ವಾಹನವನ್ನು ರಾತ್ರಿ ಸಮಯದಲ್ಲಿ ಅಂಗಡಿಯಲ್ಲಿ ಬಿಟ್ಟು ಮನೆಗೆ ತೆರಳಿದ ಮಾಲೀಕರು ಮುಂಜಾನೇ ಬಂದು ನೋಡಿದರೆ ಸುಟ್ಟು ಕರಕಲಾಗಿದೆ. ಆದರೆ ಮಧ್ಯ ರಾತ್ರಿಯಲ್ಲಿ ಯಾರೋ ಕಿಡಿಗೇಡಿಗಳಿಂದ ಬೆಂಕಿ ಹಚ್ಚಿದ್ದಾರೆ ಎಂದು ಮಾಲೀಕರು ಸಂಶಯಾ ವ್ಯಕ್ತಪಡಿಸಿದ್ದಾರೆ