ಚಳ್ಳಕೆರೆ : ಗುತ್ತಿಗೆದಾರರಿಗೆ ಪಾವತಿಸಬೇಕಾದಂತಹ ಹಣವನ್ನು ಪಾವತಿಸದೆ ಸುಖ ಸುಮ್ಮನೆ ಆರೋಪ ಮಾಡಿ ಮಾನಹರಾಜು ಹಾಕುವುದು ಗ್ರಾಪಂ.ಅಧ್ಯಕ್ಷರಿಗೆ ಹಾಗೂ ಸದಸ್ಯರಿಗೆ ಶೋಭೆಯಲ್ಲ, ಚಳ್ಳಕೆರೆ ತಾಲೂಕಿನ ಬೇಡರಹಳ್ಳಿ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಸದಸ್ಯರ ವಿರುದ್ಧ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರೈತ ಸಂಘ ಆಕ್ರೋಶ ವ್ಯಕ್ತಪಡಿಸಿದೆ.
ಹೌದು ಬೀದಿ ದೀಪ, ಕುಡಿಯುವ ನೀರಿನ ಪೈಪ್ ಈಗೇ ಹಲವು ಸಲಕರಣೆಗಳನ್ನು ಎಲೆಕ್ಟ್ರಿಕಲ್ ಅಂಗಡಿಯಿಂದ ತಂದು ಬಿಲ್ ಪಾವತಿಸಬೇಕಾದಂತಹ ಗ್ರಾಮ ಪಂಚಾಯತಿ ಹಣವನ್ನು ಪಾವತಿಸಿದೆ ಸುಖ ಸುಮ್ಮನೆ ಆರೋಪ ಮಾಡುತ್ತಾ ಮಾನ ಆರಾಜು ಹಾಕುತ್ತಿದೆ,
ಇದರಿಂದ ಹಲವು ಬಾರಿ ಪ್ರತಿಭಟನೆಗಳು ಹಾಗೂ ಸಂಬಂಧಿಸಿದ ಇಓ ಹಾಗೂ ಪಿಡಿಓ ಗಳಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ ಆದ್ದರಿಂದ ಬೇಡರೆಡ್ಡಿಹಳ್ಳಿ ಗ್ರಾಮ ಪಂಚಾಯತಿಯನ್ನು ತನಿಖೆಗೆ ಒಳಪಡಿಸಬೇಕು ಇಲ್ಲಿ ಅವ್ಯವಾರದ ಬಗ್ಗೆ ಸಂಬಂಧಿಸಿದ ಇಲಾಖೆ ಸಂಪೂರ್ಣವಾಗಿ ವಿಚಾರಣೆ ಕೈಗೊಳ್ಳಬೇಕು ಎಂದು ಮನವಿ ಮಾಡಿದೆ.
ಇನ್ನು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ಬೇಡ ರೆಡ್ಡಿಹಳ್ಳಿ ಬಸವರೆಡ್ಡಿ ಮಾತನಾಡಿ, ಗ್ರಾಮ ಪಂಚಾಯಿತಿಗೆ ಸರಬರಾಜು ಮಾಡಿದ ಎಲೆಕ್ಟ್ರಾನಿಕ್ ವಸ್ತುಗಳಿಗೆ ಪಾವತಿಸಬೇಕಾದಂತ ಬಿಲ್ ಮೊತ್ತ 7 46915ಗಳನ್ನು ವಿವಿಧ ಸಲಕರಣೆಗಳನ್ನು ಪಂಚಾಯಿತಿಗೆ ಸರಬರಾಜು ಮಾಡಿರುವ ಬಾಕಿ ಕೊಡಬೇಕೆಂದು ಒತ್ತಾಯಿಸಿ ಮಾಲೀಕರು ಧರಣಿ ನಡೆಸಿದ್ದಾರೆ.
ಇನ್ನು ರಾಜ್ಯ ರೈತ ಸಂಘದ ಹಾಗೂ ಹಸಿರು ಸೇನೆ ರಾಜ್ಯ ಉಪಾಧ್ಯಕ್ಷರಾದ ಬೇಡ ರೆಡ್ಡಿಹಳ್ಳಿ ಬಸವ ರೆಡ್ಡಿ, ಎಂ ಬಿ ಪ್ರಶಾಂತ್ ರೆಡ್ಡಿ, ಜಿಲ್ಲಾ ಅಧ್ಯಕ್ಷರು ಜಿಲ್ಲಾ ಸೇನೆ ಮರ್ಲಹಳ್ಳಿ ರವಿಕುಮಾರ್, ಡಿಎಸ್ಎಸ್ ಜಿಲ್ಲಾ ಸಂಚಾಲಕ ಎಸ್ ರಾಜಣ್ಣ, ಆರ್ . ರುದ್ರಮುನಿ, ದಾಸಪ್ಪ, ತಿಪ್ಪೇಸ್ವಾಮಿ ಗಂಗಾಧರ್, ಚಂದ್ರಶೇಖರ್ ಮಹೇಶ್ ಇನ್ನಿತರರು ಧರಣಿಯಲ್ಲಿ ಪಾಲ್ಗೊಂಡಿದ್ದರು


