ಚಳ್ಳಕೆರೆ : ಗ್ರಾಮೀಣ ಪ್ರದೇಶಗಳಿಂದ ವ್ಯಾಸಂಗಕ್ಕೆ ಬಂದಂತಹ ವಿದ್ಯಾರ್ಥಿಗಳ ಮೌಲ್ಯಯುತ ಶಿಕ್ಷಣ ಕಲಿಯುವುದು ಬಿಟ್ಟು ಗುಟ್ಕ ಪಾನ್ ಪರಾಕ್ ದುಶ್ಚಟಗಳಿಗೆ ದಾಸರಾಗಿದ್ದಾರೆ, ವಿದ್ಯಾರ್ಥಿ ನಿಲಯಗಳ ಗೋಡೆಗಳಲ್ಲಿ ಹಾಕಿಕೊಂಡು ಉಗುಳಿರುವಂತಹ ಕಲೆಗಳು ನೋಡಿದರೆ ವಿದ್ಯಾರ್ಥಿಗಳಲ್ಲಿ ಶಿಸ್ತು ಹಾಗೂ ಬಿಸಿಎಂ ಅಧಿಕಾರಿಗಳ ಅವ್ಯವಸ್ಥೆ ಎದ್ದು ಕಾಣುತ್ತಿದೆ ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಎಚ್ ಶಶಿಧರ್ ವಿಷಾದ ವ್ಯಕ್ತಪಡಿಸಿದರು.
ಅವರು ಚಳ್ಳಕೆರೆ ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು,
ಇಂದಿನ ಕಾಲಘಟ್ಟದಲ್ಲಿ ಮಕ್ಕಳಿಗೆ ಶಿಸ್ತು ಬದ್ಧ, ಮೌಲ್ಯಯುತ ಶಿಕ್ಷಣ ನೀಡುವುದು ಸರ್ಕಾರದ ಆದ್ಯ ಕರ್ತವ್ಯ ಆದರೆ ಇಂದಿನ ಯುವ ಪೀಳಿಗೆ ದುಶ್ಚಟಗಳಿಗೆ ಬಲಿಯಾಗುತ್ತಿರುವುದು ಇದರಿಂದ ನಿಲಯ ಪಾಲಕರು ಹಾಗೂ ಬಿಸಿಎಂ ಅಧಿಕಾರಿಗಳೇ ನೇರ ಹೊಣೆಯಾಗುತ್ತಿರಿ, ಮುಂದಿನ ದಿನಗಳಲ್ಲಿ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಬಿಸಿಎಂ ಅಧಿಕಾರಿ ರಮೇಶ್ ಕುಮಾರ್ ಗೆ ಖಡಕ್ಕಾಗಿ ಸೂಚಿಸಿದರು.
ಇನ್ನು ಸಭೆಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್. ಸುರೇಶ್ ಮಾತನಾಡಿ ಪ್ರಸ್ತುತ ವರ್ಷದಲ್ಲಿ ಸರ್ಕಾರದಿಂದ ಎರಡು ಜೊತೆ ಸಮವಸ್ತ್ರ ವಿತರಿಸಲಾಗಿದೆ.
ಜೂನ್ ಅಂತ್ಯದೊಳಗೆ ದಾಖಲಾತಿ ಸಂಪೂರ್ಣಗೊಳಲಿದೆ, ಈಗಾಗಲೇ ಶೈಕ್ಷಣಿಕ ವರ್ಷಕ್ಕೆ ಬೇಕಾದಂತ ಪಠ್ಯಪುಸ್ತಕ ಸಮವಸ್ತ್ರ ಹಾಗೂ ಅತಿಥಿ ಶಿಕ್ಷಕರ ನೇಮಕ ಗೊಳಿಸಲಾಗಿದೆ ಎಂದು ಸಭೆಯ ಗಮನಕ್ಕೆ ತಂದಾಗ ಕಾರ್ಯನಿರ್ವಹಣಾಧಿಕಾರಿ ಹೆಚ್.ಶಶಿಧರ್, ಖಾಸಗಿ ಶಾಲೆಯಲ್ಲಿ ಒಂದರಿಂದ ಒಂಬತ್ತನೇ ತರಗತಿವರೆಗೂ ಶುಲ್ಕ ಪಡೆದು ದಾಖಲಾತಿ ಮಾಡಿಕೊಂಡು ವಿದ್ಯಾರ್ಥಿ ವ್ಯಾಸಂಗದಲ್ಲಿ ಹಿಂದೂಳಿದಿದ್ದಾನೆ ಎಂದು ಸಂಸ್ಥೆಯ ಫಲಿತಾಂಶ ಕಡಿಮೆಯಾಗುತ್ತದೆ ಎಂಬ ಮನೋಬದಿಂದ ಹತ್ತನೆ ತರಗತಿಗೆ ಸರ್ಕಾರಿ ಶಾಲೆಗೆ ಸೇರಿಸಿ ಎಂದು ಕಳಿಸುವುದರಿಂದ ಸರ್ಕಾರಿ ಶಾಲೆ, ಫಲಿತಾ ಫಲಿತಾಂಶ ಕುಂಠಿತವಾಗುವುದಿಲ್ಲವೇ ಆದ್ದರಿಂದ ಇಂತಹ ಖಾಸಗಿ ಶಾಲೆಗಳ ನಡವಳಿಗೆ ಶಿಕ್ಷಣ ಇಲಾಖೆ ಕಠಿಣ ಕ್ರಮ ಸೂಚಿಸಬೇಕು ಯುಕೆಜಿಯಿಂದ ಎಸ್ ಎಲ್ ಸಿ ತನಕ ಕಡ್ಡಾಯವಾಗಿ ಅದೇ ಶಾಲೆಯಲ್ಲಿ ಕಲಿತರೆ ಅವರದ್ದೆ ಹೊಣೆ ಮಗು ವ್ಯಾಸಂಗದಲ್ಲಿ ಹಿಂದುಳಿದಂತೆ ಆ ಶಾಲೆ ಸಂಸ್ಥೆ ನಿಗಾ ವಹಿಸಬೇಕು ಪೋಷಕರಿಂದ ಶುಲ್ಕ ಪಾವತಿಸಿಕೊಂಡ ಖಾಸಗಿ ಸಂಸ್ಥೆಗಳು ಹತನೆ ತರಗತಿ ವೇಳೆಗೆ ಸರ್ಕಾರಿ ಶಾಲೆಗೆ ಸೇರಿಸಿ ಎಂಬ ಮನೋದಾರಣೆ ಕೈಬಿಡಬೇಕು ಆದ್ದರಿಂದ ಕ್ಷೇತ್ರ ಶಿಕ್ಷಣಾಧಿಕಾರಿಗಳು ಹಾಗೂ ಜಿಲ್ಲಾ ಉಪ ನಿರ್ದೇಶಕರು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.
ಕಳೆದ ಬಾರಿಗಿಂತ ಈ ಬಾರಿ ಎಸ್ ಎಸ್ ಎಲ್ ಸಿ ಫಲಿತಾಂಶ ಕುಂಠಿತಗೊಂಡಿರುವುದು ತಾಲೂಕಿಗೆ ಬೇಸರ ತಂದಿದೆ ಆದ್ದರಿಂದ ಪ್ರಸ್ತುತ ವರ್ಷದಲ್ಲಿ ಎಸ್ ಎಸ್ ಎಲ್ ಸಿ ಫಲಿತಾಂಶಕ್ಕೆ ಅಗತ್ಯ ಕ್ರಮ ಕೈಗೊಂಡು ವಿಶೇಷ ಸಂಕಲ್ಪ ಯೋಜನೆ ಯೊಂದಿಗೆ ಶಿಕ್ಷಕರಿಗೆ ವಿಶೇಷ ತರಬೇತಿಗಳ ನೀಡುವುದರ ಜೊತೆಗೆ ಈ ಬಾರಿಯ ಪಲಿತಾಂಶ ಹೆಚ್ಚಾಗುವಂತೆ ಮಾಡಬೇಕು ಎಂದರು.
ಹೇಳಿಕೆ :
ಇನ್ನು ಖಾಸಗಿ ಶಾಲೆಯಲ್ಲಿ ಅಳವಡಿಸಿಕೊಂಡಿರುವಂತಹ ಪೋಷಕರ ವಾಟ್ಸಾಪ್ ಗ್ರೂಪ್ ಹೀಗೆ ಆಧುನಿಕ ಕಾಲಘಟ್ಟದಲ್ಲಿ ಪೋಷಕರು ಪ್ರತಿ ಮನೆಯ ಅಲ್ಲಿ ಸ್ಮಾರ್ಟ್ ಮೊಬೈಲ್ ಇರುವುದರಿಂದ ಖಾಸಗಿ ಶಾಲೆಗಳು ಬಳಸಿಕೊಂಡಿರುವಂತೆ ಸರ್ಕಾರಿ ಶಾಲೆಗಳಲ್ಲಿ ಕೂಡ ತರಗತಿ ಶಿಕ್ಷಕರಿಂದ ವಾಟ್ಸಾಪ್ ಗ್ರೂಪ್ ಮಾಡಿ ಅದರಿಂದ ಪ್ರತಿನಿತ್ಯ ನಡೆಯುವಂತಹ ಕಲಿಕಾ ಬೋಧನೆಯನ್ನು ವಾಟ್ಸಾಪ್ ಗ್ರೂಪ್ ನಲ್ಲಿ ಹಾಕುವುದರಿಂದ ಹಾಯ ಮಗುವಿನ ಆ ಪೋಷಕರಿಗೆ ಮಕ್ಕಳ ಬಗ್ಗೆ ಕಾಳಜಿಯಿಂದ ನೋಡಲು ಅನುಕೂಲವಾಗುತ್ತದೆ ಈ ಯೋಜನೆ ತಾಲೂಕಿನ ಅತ್ಯಂತ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಅಳವಡಿಸಬೇಕು ಎಂದು ಸೂಚಿಸಿದರು.
ಇನ್ನೂ ಸಿಡಿಪಿಓ ರಾಜುನಾಯ್ಕ್ ಮಾತನಾಡಿ, ತಾಲೂಕಿನಲ್ಲಿ 530 ಅಂಗನವಾಡಿ ಕೇಂದ್ರಗಳು ಇದ್ದು ಅದರಲ್ಲಿ ಸ್ವಂತ ಕಟ್ಟಡದಲ್ಲಿ 44 ಸಮುದಾಯ ಕೇಂದ್ರಗಳಲ್ಲಿ 44, 54 ಬಾಡಿಗೆ ಕಟ್ಟಡಗಳಲ್ಲಿ ಕೇಂದ್ರಗಳನ್ನು ತೆರೆಯಲಾಗಿದೆ 23 ಕೇಂದ್ರಗಳಿಗೆ ನಿವೇಶನ ಕೊರತೆಯಿದ್ದು ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ, ಅಕ್ಟೋಬರ್ ಒಂದರಿಂದ ಎಲ್ ಕೆ ಜಿ ಯು ಕೆ ಜಿ ತರಗತಿಗಳನ್ನು 62 ಕೇಂದ್ರಗಳಲ್ಲಿ ಪ್ರಾರಂಭಿಸಲಾಗುವುದು ಎಂದು ಹೇಳಿದರು.
ಪ್ರಸ್ತುತ ವರ್ಷದಲ್ಲಿ ರೈತರು ಶೇಂಗಾ ಬೆಳೆಯನ್ನು ಕೈಬಿಟ್ಟು ತೊಗರಿ ಬೆಳೆಗೆ ಮಾರುಹೋಗಿದ್ದಾರೆ, ಕಡಿಮೆ ಬಂಡವಾಳ, ಕಡಿಮೆ ವೆಚ್ಚದಲ್ಲಿ ಅಧಿಕ ಲಾಭ ತೆಗೆಯುವ ನಿರೀಕ್ಷೆಯಲ್ಲಿ ತೊಗರಿ ಬೆಳೆಗೆ ಮಾರುಹೋಗಿರುವುದು ಕಂಡು ಬಂದಿದೆ ಅದರಂತೆ ಜೂನ್ ತಿಂಗಳಲ್ಲಿ ವಾಡಿಕೆ ಮಳೆ ಬಾರದೆ ಇರುವುದರಿಂದ ಪ್ರಸ್ತುತ ತಾಲೂಕಿನಲ್ಲಿ ಶೇಕಡ 10 ರಷ್ಟು ಮಾತ್ರ ಬಿತ್ತನೆಯಾಗಿದೆ.
ಇನ್ನೂ ತಾಲೂಕಿನಲ್ಲಿ ಬಿತ್ತನೆಗೆ ಭೂಮಿಯನ್ನು ರೈತರು ಅಸನುಮಾಡಿಕೊಂಡಿದ್ದು ಮುಂಬರುವ ವರ್ಣರಾಯನಿಗೆ ರೈತರು ಕಾಯುತ್ತಿದ್ದಾರೆ, ಬಿತ್ತನೆಗೆ ಈಗಾಗಲೇ ರಸಗೊಬ್ಬರ, ಬೀಜ ಎಲ್ಲವನ್ನು ತಯಾರು ಮಾಡಿಕೊಂಡಿದ್ದಾರೆ ಎಂದು ಸಭೆಗೆ ಸಹಾಯಕ ನಿರ್ದೇಶಕ ಜೆ ಅಶೋಕ್ ಮಾಹಿತಿ ನೀಡಿದ್ದಾರೆ.
ಇದೇ ಸಂಧರ್ಭದಲ್ಲಿ ತಾಲೂಕು ಪಂಚಾಯತಿ ಆಡಳಿತ ಅಧಿಕಾರಿ ಬಿ.ಮಂಜುನಾಥ್, ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಹೆಚ್.ಶಶಿಧರ್ , ನರೇಗಾ ಸಹಾಯಕ ನಿರ್ದೇಶಕ ಸಂತೋಷ, ಸಂಪತ್,
ಕೃಷಿ ಅಧಿಕಾರಿ ಅಶೋಕ, ತೋಟಗಾರಿಕೆ ಅಧಿಕಾರಿ ಕುಮಾರ್, ಸಿಡಿಪಿಓ ರಾಜುನಾಯ್ಕ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದೇವ್ಲಾನಾಯ್ಕ್, ಬೆಸ್ಕಂ ಸಹಾಯಕ ನಿರ್ದೇಶಕ ಶಿವಪ್ರಸಾದ್, ತಳಕು ಬೆಸ್ಕಾಂ ಸಹಾಯಕ ನಿರ್ದೇಶಕಿ ಮಮತಾ, ಇತರ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.


