ಚಳ್ಳಕೆರೆ : ಬಡ ಮಕ್ಕಳಿಗೆ ಜ್ಞಾನಾರ್ಜನೆ ಜೊತೆಗೆ ಊಟ ವಸತಿ ನೀಡುವ ಮೂಲಕ ಉತ್ತಮ ಶಿಕ್ಷಣ ವಂತರನ್ನಾಗಿಸುವುದು ಮುಖ್ಯ ಎಂದು ನಗರಸಭೆ ಪ್ರಬಾರ ಅಧ್ಯಕ್ಷೆ ಕವಿತಾ ಬೋರಯ್ಯ ಹೇಳಿದರು.

ಅವರು ನಗರದ ಜೀವಸ್ವಾಸ ಬಾಲಕಿಯರ ವಸತಿ ಗೃಹದಲ್ಲಿ ನೇತಾಜಿ ಸ್ನೇಹ ಬಳಗ ಮತ್ತು ಸುರಕ್ಷಾ ಪಾಲಿ ಕ್ಲಿನಿಕ್ ವತಿಯಿಂದ ರಾಹುಲ್ ಗಾಂಧಿ ಅವರ ಹುಟ್ಟು ಹಬ್ಬದ ಪ್ರಯುಕ್ತ
ಹಾಸ್ಟೆಲ್ ಮಕ್ಕಳಿಗೆ ಉಚಿತ ವೈದ್ಯಕೀಯ ತಪಾಸಣೆ ಹಾಗೂ ಕೇಕ್ ಕತ್ತರಿಸುವ ಮುಖಾಂತರ ಮತ್ತು ಸಿಹಿ ಮಕ್ಕಳಿಗೆ ನೀಡಲಾಯಿತು ಎಂದರು.

ಈ ಸಂದರ್ಭದಲ್ಲಿ ನಗರಸಭಾ ಪ್ರಭಾರ ಅಧ್ಯಕ್ಷರಾದ ಕವಿತಾ ಬೋರಯ್ಯನವರು, ಮತ್ತು ನಗರಸಭಾ ಸದಸ್ಯರಾದ ಮಂಜುಳಾ ಪ್ರಸನ್ನ ಕುಮಾರ್, ಮತ್ತು ಕೆಪಿಸಿಸಿ ಕುಶಲಕರ್ಮಿಗಳ ರಾಜ್ಯಾಧ್ಯಕ್ಷರಾದ ಆರ್. ಪ್ರಸನ್ನ ಕುಮಾರ್,
ಸರ್ಕಾರದ ನಾಮ ನಿರ್ದೇಶನ ಸದಸ್ಯರಾದ ನೇತಾಜಿ ಪ್ರಸನ್ನ, ಸುರಕ್ಷಾ ಪಾಲಿ ಕ್ಲಿನಿಕ್ ನ ವ್ಯವಸ್ಥಾಪಕರಾದ ಪರೀದ್ ಖಾನ್, ಮತ್ತು ಡಾl l ಶೇಕ್ ಹಯಾತ್ ಮತ್ತು ಹಾಸ್ಟೆಲ್ಲ ವ್ಯವಸ್ಥಾಪಕರಾದ ಗಂಗಾಧರ್ ಮತ್ತು ಶಾಂತ ಗಂಗಾಧರ್ ಮತ್ತು ವಸತಿ ಶಾಲೆಯ ಮಕ್ಕಳು ಹಾಜರಿದ್ದರು.

About The Author

Namma Challakere Local News
error: Content is protected !!