ನಾಯಕನಹಟ್ಟಿ:-ಪ್ರತಿಯೊಂದು ಆಸ್ತಿಗೂ ಇ-ಖಾತಾ ಪಡೆಯುವುದನ್ನು ಕಡ್ಡಾಯಗೊಳಿಸಲಾಗಿದೆ. ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಎಲ್ಲ ರೀತಿಯ ಕಟ್ಟಡ, ನಿವೇಶನಗಳಿಗೆ ಆಸ್ತಿ ತೆರಿಗೆ ನಿರ್ಧರಣೆಗೊಳಿಸಿ ಪಾವತಿಸಿಕೊಳ್ಳಲಾಗಿದೆ. ನಂತರ, ಆಸ್ತಿ ಮಾಲೀಕರಿಂದ ಅವಶ್ಯಕ ದಾಖಲೆಗಳನ್ನು ಪಡೆದು ಇ-ಖಾತಾ ದಾಖಲೆ ನೀಡಲಾಗುವುದು’ ಎಂದು ಪ.ಪಂ ಮುಖ್ಯಧಿಕಾರಿ ಓ.ಶ್ರೀನಿವಾಸ್ ಹೇಳಿದರು.

ನಾಯಕನಹಟ್ಟಿ ಪಟ್ಟಣ ಪಂಚಾಯತಿ ವ್ಯಾಪ್ತಿಯ ಕಾವಲುಬಸವೇಶ್ವರ ನಗರದಲ್ಲಿ ಇ- ಖಾತಾ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಸರ್ಕಾರಿ, ಅರೆಸರ್ಕಾರಿ ಹಾಗೂ ಸ್ಥಳೀಯ ಸಂಸ್ಥೆಗಳ ಒಡೆತನದಲ್ಲಿರುವ ಆಸ್ತಿಗಳನ್ನು ಹೊರತುಪಡಿಸಿ, ಇನ್ನುಳಿದ ಎಲ್ಲ ರೀತಿಯ ಆಸ್ತಿಗಳಿಗೂ ಇ-ಖಾತಾ ಕಡ್ಡಾಯ. ಕಟ್ಟಡ ಹಾಗೂ ನಿವೇಶನಗಳ ಮಾಲೀಕರು, ಆಸ್ತಿಗಳಿಗೆ ಸಂಬಂಧಪಟ್ಟಂತೆ ನೊಂದಾಯಿತ ಪತ್ರಗಳು, ಆಸ್ತಿಯ ಛಾಯಾಚಿತ್ರ, ಮಾಲೀಕರ ಭಾವಚಿತ್ರ, ಮಾಲೀಕರ ಗುರುತಿನ ಚೀಟಿ, ಪಾನ್ ಕಾರ್ಡ್, ರೇಷನ ಕಾರ್ಡ್, ನಮೂನೆ 15 (ಇಸಿ), ವಿದ್ಯುತ್ ಬಿಲ್‌, ಕಟ್ಟಡ ಪರವಾನಗಿ ಪತ್ರ, ಅನುಮೋದಿತ ನಕ್ಷೆ, , ಏಕ ನಿವೇಶನ, ಬಹುನಿವೇಶನಗಳ ತಾಂತ್ರಿಕ ಅನುಮೋದನೆ ನಕ್ಷೆ, ಸಿಟಿಎಸ್ ಉತಾರ, ಕಂದಾಯ ಪಾವತಿಸಿದ ರಶೀದಿ ಹಾಗೂ ಇತರೆ ಅವಶ್ಯಕ ದಾಖಲೆಗಳನ್ನು ಹಾಜರುಪಡಿಸಬೇಕು’ ಎಂದು ಹೇಳಿದರು.

ಇದೆ ವೇಳೆಯಲ್ಲಿ ಗ್ರಾಮಸ್ಥ ಬೋರಣ್ಣ ಮಾತನಾಡಿದರು

ಸ್ಥಳದಲ್ಲಿ ಪಟ್ಟಣ ಪಂಚಾಯತಿ ಸದಸ್ಯ ಹಾಗೂ ಸ್ಥಾಯಿ ಸಮಿತಿ ಅಧ್ಯಕ್ಷ ಕೆ.ಪಿ. ತಿಪ್ಪೇಸ್ವಾಮಿ, ಸಿಬ್ಬಂದಿಗಳಾದ ದ್ವಿತೀಯ ದರ್ಜೆ ಸಹಾಯಕ ಟಿ ತಿಪ್ಪೇಸ್ವಾಮಿ, ಗಣಕಯಂತ್ರ ನಿರ್ವಾಹಕ ಅಭಿಷೇಕ್, ದಯಾನಂದ್, ಮಧು, ಗ್ರಾಮಸ್ಥರಾದ ಬಡಗಿ ತಿಪ್ಪೇಸ್ವಾಮಿ, ಬೋರಣ್ಣ, ಆರೋಗ್ಯ ನಿರೀಕ್ಷಣಾಧಿಕಾರಿ ಮಮತಾ, ಅಂಗನವಾಡಿ ಶಿಕ್ಷಕಿ ವೀಣಾ ಸೇರಿದಂತೆ ಗ್ರಾಮಸ್ಥರು ಇದ್ದರು.

About The Author

Namma Challakere Local News
error: Content is protected !!