ಚಳ್ಳಕೆರೆ :
12ನೇ ವರ್ಷದ ಶ್ರೀ ಸಾಯಿ ಗುರುಪೂರ್ಣಿಮೆ ಜಾತ್ರಾ ಮಹೋತ್ಸವಕ್ಕೆ ಪ್ರತೀ ವರ್ಷದಂತೆ ಈ ವರ್ಷವೂ ಸಹ ಚಳ್ಳಕೆರೆ ತಾಲೂಕಿನ ಪ್ರತಿ ಗ್ರಾಮಗಳನ್ನು ತಲುಪಿ ಬಾಬಾ ರವರ ಅತ್ಯಂತ ಪ್ರಿಯವಾದ “ಭಿಕ್ಷಾಟನೆ”ಯನ್ನು ಮಾಡುವುದರ ಮೂಲಕ ಭಕ್ತಾದಿಗಳು ಭಕ್ತಿಯಿಂದ ನೀಡುವ ದವಸ ಧಾನ್ಯಗಳನ್ನು ಹಾಗೂ ದೇಣಿಗೆಯನ್ನು ಸಂಗ್ರಹಿಸಿ ಬರುವ *”ಶ್ರೀ ಸಾಯಿ ರಥ” ವನ್ನು ಇಂದು ನಗರದ ಪಾವಗಡ ರಸ್ತೆಯ ಶ್ರೀ ಶಿರಡಿ ಸಾಯಿ ಬಾಬಾ ಮಂದಿರದಲ್ಲಿ “ಶ್ರೀ ವಾಲ್ಮೀಕಿ ಹರ್ಷಾನಂದ ಮಹಾಸ್ವಾಮಿಗಳು” ದಾಸನಾಯಕನಹಟ್ಟಿ ಇವರ ಸಮ್ಮುಖದಲ್ಲಿ ಚಾಲನೆ ನೀಡಲಾಯಿತು.
ಇದೇ ಸಂಧರ್ಭದಲ್ಲಿ ಶ್ರೀ ವೆಂಕಟಸಾಯಿ ಸೇವಾ ಟ್ರಸ್ಟ್ ನ ಆಡಳಿತಮಂಡಳಿ ಯ ಬಿ. ಸಿ. ವೆಂಕಟೇಶ್ ಮೂರ್ತಿ, ಬಿ. ಸಿ. ಸತೀಶ್ ಕುಮಾರ್, ಕೆ. ಎಂ. ಜಗದೀಶ್, ಕಾರ್ತಿಕ್ ಎಸ್ ಮೂರ್ತಿ, ಹೇಮಾ ರೆಡ್ಡಿ, ರಾಘವೇಂದ್ರ, ರೇಣುಕಾಸ್ವಾಮಿ, ವಿಕಾಸ್, ಸಂಜಯ್, ಪ್ರೇಮ್ ವೀರಭದ್ರಪ್ಪ, ತಿಪ್ಪೇಸ್ವಾಮಿ,ಹಾಗೂ ಸಾಯಿ ರಥ ಚಾಲಕರಾದ ಸತೀಶ್, ನಾಗರಾಜ್ ಹಾಗೂ ಸಾಯಿ ಸದ್ಭಕ್ತರುಗಳು ಇದ್ದರು

