ಚಳ್ಳಕೆರೆ :
ಚಿತ್ರದುರ್ಗ: 5300ಕೋಟಿ ಬಿಡುಗಡೆ ರೈತರಿಂದ
ಒತ್ತಾಯ
ಭದ್ರಾ ಮೇಲ್ದಂಡೆ ಯೋಜನೆಗೆ 5300 ಕೋಟಿ ಹಣವನ್ನು ಕೂಡಲೇ
ಬಿಡುಗಡೆ ಮಾಡಿಸುವಂತೆ ಒತ್ತಾಯಿಸಿ, ಕೇಂದ್ರ ರೈಲ್ವೇ ಸಚಿವ
ಸೋಮಣ್ಣಗೆ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು
ಇಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಮನವಿ ನೀಡಿದರು. ಕೇಂದ್ರ
ಸರ್ಕಾರ ರಾಷ್ಟ್ರೀಯ ಯೋಜನೆಂದು ಘೋಷಿಸಿ 5300 ಕೋಟಿ
ಕೊಡುವ ಭರವಸೆ ನೀಡಿತ್ತು.
ಇದುವರೆಗೂ ಬಿಡುಗಡೆ ಮಾಡಿಲ್ಲ.
ಆದ್ದರಿಂದ ಕೂಡಲೇ ಕೇಂದ್ರದ ಮೇಲೆ ಒತ್ತಡ ತಂದು ಹಣ ಬಿಡುಗಡೆ
ಮಾಡಿಸಬೇಕೆಂದು ಒತ್ತಾಯಿಸಿದರು.

