ಚಳ್ಳಕೆರೆ : ಪ್ರಪ್ರಥಮ ಬಾರಿಗೆ ಚಳ್ಳಕೆರೆ ನಗರದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ಸುಮಾರು 1111 ಯೋಗ ಬಂಧುಗಳೊಂದಿಗೆ ಬೃಹತ್ ವೇದಿಕೆಯ ಮೂಲಕ ಯೋಗ ದಿನಾಚರಣೆ ಆಚರಿಸಲಾಗುವುದು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ.
ರಾಜ್ಯದ ಮೈಸೂರು ನಗರದಲ್ಲಿ ನಡೆಯುವ ಯೋಗ ಪೇರೆಡ್ ಮಾದರಿಯಲ್ಲಿ ಬೃಹತ್ ವೇದಿಕೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಗುವುದು.
ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳು ಒಳಗೊಂಡ ಯೋಗ ಬಂಧುಗಳು ಹಾಗೂ ಸಾರ್ವಜನಿಕರು ಬೃಹತ್ ವೇದಿಕೆಯಲ್ಲಿ ಯೋಗ ದಿನಾಚರಣೆ ಆಚರಿಸಲಾಗುವುದು ಎಂದಿದ್ದಾರೆ.
ಅದರಂತೆ ಜೂನ್21 ನಡೆಯುವ ವಿಶ್ವಯೊಗ ದಿನಾಚರಣೆ ಪೂರ್ವ ತಯಾರಿ ಸಲುವಾಗಿ ಇಂದು ನಗರದ ಹೆಚ್‌ಪಿಪಿಸಿ ಪ್ರಥಮದರ್ಜೆ ಕಾಲೇಜ್ ಮೈದಾನದಲ್ಲಿ ಮಕ್ಕಳು ತಾಲೀಮು ನಡೆಸಿದರು.
ಈದೇ ಸಂಧರ್ಭದಲ್ಲಿ ಯೋಗ ಪ್ರಮುಖ ಶಿಕ್ಷಕ ಮನೋಹರ್ , ಗಂಗಾಧರಪ್ಪ, ಜಯರಾಂ ಬಾಬಣ್ಣ, ಜಿ.ಚಿದಾನಂದಸ್ವಾಮಿ, ಸಿಟಿ ತಿಪ್ಪೇಸ್ವಾಮಿ, ಶ್ರೀನಿವಾಸ್, ಬಸವರಾಜ್ ,ವಿಎ.ಪ್ರಕಾಶ್, ಕ್ರಿಡಾಪಟುಗಳು ಹಾಗೂ ಇತರರು ಪಾಲ್ಗೊಂಡಿದ್ದರು.