ಚಳ್ಳಕೆರೆ :
ಬೆಳಗಾವಿ ಜಿಲ್ಲೆಯಲ್ಲಿ ಸಾರಿಗೆ ಬಸ್ ಕಂಡಕ್ಟರ್ ಮಹದೇವ್ ಉಕ್ಕೇರಿ ಎಂಬುವರ ಮೇಲೆ
ಮಹಾರಾಷ್ಟ್ರ ಮೂಲದವರು ಮರಾಠಿಯಲ್ಲಿ ಮಾತನಾಡಬೇಕೆಂದು ಹಲ್ಲೆ ಮಾಡಿರುವವರ
ವಿರುದ್ಧ ಕೂಡಲೇ ಕ್ರಮ ಕೈಗೊಳ್ಳಬೇಕು. ಬಸ್ ಕಂಡಕ್ಟರ್ ವಿರುದ್ಧ ದುರುದ್ದೇಶವಾಗಿ ದಾಖಲು
ಮಾಡಿರುವ ಪೋಸ್ಕೋ ಪ್ರಕರಣ ರದ್ದುಪಡಿಸಬೇಕು ಎಂದು ಕನ್ನಡ
ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷ ಕೊರ್ಲಕುಂಟೆ ತಿಪ್ಪೇಸ್ವಾಮಿ ಆಗ್ರಹಿಸಿದರು.
ಅವರು ನಗರದ ತಾಲ್ಲೂಕು ಕಚೇರಿಗೆ ನೂರಾರು ಕನ್ನಡ ಪರರೊಂದಿಗೆ ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದರು.
ಬೆಳಗಾವಿ ಕರ್ನಾಟಕ ರಾಜ್ಯದ ಅವಿಭಾಜ್ಯ ಅಂಗವಾಗಿದೆ. ಇಲ್ಲಿ ವಾಸವಾಗಿರುವ ಮಹಾರಾಷ್ಟ್ರ
ಮೂಲದವರು ಇಲ್ಲಿನ ಅನ್ನ, ನೀರು, ಗಾಳಿ ಬಳಕೆಯಲ್ಲಿ ಬದುಕಿನ ಆಶ್ರಯವಾಗಿ ಬದುಕುತ್ತಿದ್ದಾರೆ. ಆದರೂ,
ಪದೇಪದೇ ಕನ್ನಡಿಗರ ಮೇಲೆ ಹಲ್ಲೆ, ದೌರ್ಜನ್ಯ ಎಸಗುವ ಪುಂಡಾಟಿಕೆ ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇನ್ನೂ ಸಾಹಿತಿ ಮೈತ್ರಿ ದ್ಯಾಮಯ್ಯ ಮಾತನಾಡಿ,
ಗಡಿ ಭಾಗದಲ್ಲಿ ರೌಡಿಗಳಂತೆ ವರ್ತನೆ ಮಾಡುತ್ತಿರುವ ಮಹಾರಾಷ್ಟ್ರ ಏಕೀಕರಣ ಸಮಿತಿಯನ್ನು ರದ್ದುಪಡಿಸಬೇಕು. ಭಾಷಾ
ಸೌಹಾರ್ದತೆ ಕಾಪಾಡುವ ನಿಟ್ಟಿನಲ್ಲಿ ಕಾನೂನು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕು.
ಬಸ್ ಕಂಡಕ್ಟರ್ ಮೇಲಿನ ಹಲ್ಲೆ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದೆ ಮೌನ ವಹಿಸಿರುವ ರಾಜ್ಯದ ಗೃಹ
ಸಚಿವ ಡಾ. ಜಿ. ಪರಮೇಶ್ವರ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಬೇಕು.ಎಂದು ಒತ್ತಾಯಿಸಿದರು.
ಬೆಳಗಾವಿ ಜಿಲ್ಲೆಯಲ್ಲಿ ರಾಜಕಾರಣ ಅನುಕೂಲಕ್ಕಾಗಿ ಮಹಾರಾಷ್ಟ್ರ ಪುಂಡರ ಕೃತ್ಯಗಳ ಬಗ್ಗೆ ಮಾತನಾಡದೆ
ಇರುವ ಸಚಿವ ಸತೀಶ್ ಜಾರಕಿಹೊಳಿ ರಾಜೀನಾಮೆ ನೀಡಬೇಕು.
ಬಸ್ ಕಂಡಕ್ಟರ್ ಮೇಲೆ ಹಲ್ಲೆ ನಡೆಸಿರುವ ಮಹಾರಾಷ್ಟ್ರದವರು ಬೆಳಗಾವಿಯಲ್ಲಿ ಆಯೋಜನೆ ಮಾಡಿರುವ
ಕಾರ್ಯಕ್ರಮದಲ್ಲಿ ಭಾಗಿಯಾಗಿರುವ ಸಚಿವೆ ಲಕ್ಷ್ಮಿ ಹೆಬ್ಬಾಳ್ವ, ಕನ್ನಡಿಗರಿಗೆ ಮಾಡಿರುವ ದ್ರೋಹವಾಗಿದೆ.
ನೈತಿಕ ಹೊಣೆ ಹೊತ್ತು ರಾಜೀನಾಮೆ ಸಲ್ಲಿಸಬೇಕು. ತಮ್ಮ ರಾಜಕಾರಣಕ್ಕಾಗಿ ನಾಡಿನ ನೆಲ, ಜಲ, ಭಾಷೆ,
ಸಂಸ್ಕೃತಿ ಮೇಲಿನ ದೌರ್ಜನ್ಯಗಳ ಬಗ್ಗೆಯೂ ಮಾತನಾಡದೆ ಇರುವ ಜನಪ್ರತಿನಿಧಿಗಳಿಗೆ ನಾಡಿನ ಜನತೆ
ಪಾಠ ಕಲಿಸಬೇಕು. ಕೂಡಲೇ ಎಂಇಎಸ್ ಸಂಘಟನೆ ರದ್ದುಪಡಿಸದಿದ್ದರೆ ಸರ್ಕಾರದ ವಿರುದ್ಧ ನಿರಂತರ
ಹೋರಾಟ ಮಾಡುವುದಾಗಿ ಎಚ್ಚರಿಸುತ್ತಿದ್ದೇವೆ. ಎಂದರು.
ಇದೇ ಸಂಧರ್ಭದಲ್ಲಿ ಕನ್ನಡಪರ ಸಂಘಟಕರು ಇತರರು ಪಾಲ್ಗೊಂಡಿದ್ದರು.

