ಚಳ್ಳಕೆರೆ :
ಫೆ.25ರಿಂದ ಶಿವರಾತ್ರಿ ಮಹೋತ್ಸವ,
ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ ಆಯೋಜನೆ
ಚಳ್ಳಕೆರೆ: ನಗರದಲ್ಲಿ ಫೆ.25 ರಿಂದ 27ರವರೆಗೆ
3 ದಿನಗಳ ಕಾಲ ಶಿವರಾತ್ರಿ ಮಹೋತ್ಸವ-ಆಧ್ಯಾತ್ಮಿಕ ಸಂಸ್ಕೃತಿ
ಉತ್ಸವ ಕಾರ್ಯಕ್ರವನ್ನು ನಗರದ ಕ್ಷೇತ್ರ ಮಾದರಿ ಸರಕಾರಿ ಶಾಲಾ
ಆವರಣದಲ್ಲಿ ನಡೆಸಲಾಗುತ್ತದೆ ಎಂದು ಪ್ರಜಾಪಿತ ಬ್ರಹ್ಮಕುಮಾರಿ
ಈಶ್ವರೀಯ ವಿಶ್ವ ವಿದ್ಯಾಲಯದ ವಿಮಲಕ್ಕೆ ತಿಳಿಸಿದ್ದಾರೆ. ನಗರದ
ಈಶ್ವರೀಯ ವಿವಿಯಲ್ಲಿ ಭಾನುವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ
ಮಾತನಾಡಿ, ಮಹಾಶಿವರಾತ್ರಿ ನಿಮಿತ್ತ ನಡೆಯುವ ಕಾರ್ಯಕ್ರಮದಲ್ಲಿ
ಫೆ.25 ರಂದು ಸಂಜೆ 6 ಗಂಟೆಗೆ ಶಿವರಾತ್ರಿ ಮಹೋತ್ಸವ-ರೈತ
ಸಶಕ್ತಿಕರಣೋತ್ಸವ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಶಾಸಕರಾದ
ಟಿ.ರಘುಮೂರ್ತಿ, ಕೃಷಿ ಜಂಟಿ ನಿರ್ದೇಶಕ ಡಾ.ಬಿ.ಮಂಜುನಾಥ್,
ಕೃಷಿ ಸಹಾಯಕ ನಿರ್ದೇಶಕ ಜೆ.ಅಶೋಕ್, ತೋಟಗಾರಿಕೆ ಹಿರಿಯ
ಸಹಾಯಕ ನಿರ್ದೇಶಕ ಆರ್.ವಿರುಪಾಕ್ಷಪ್ಪ ಭಾಗವಹಿಸುತ್ತಿರುವುದಾಗಿ
ತಿಳಿಸಿದರು.ಫೆ.26ರ ಮಹಾಶಿವರಾತ್ರಿ ದಿನದ ಅಂಗವಾಗಿ ಸಂಜೆ
6ಗಂಟೆಗೆ ಆಧ್ಯಾತ್ಮಿಕ ಸಂಸ್ಕೃತಿ ಉತ್ಸವ ನಡೆಸಲಾಗುತ್ತದೆ ಮತ್ತು
ಫೆ.27ರಂದು ಈಶ್ವರೀಯ ಅಭಿನಂದನಾ ಉತ್ಸವ ಆಚರಿಸಲಾಗುವುದು
ಎಂದು ಮಾಹಿತಿ ನೀಡಿದರು.ಮಹಾಶಿವರಾತ್ರಿ ನಿಮಿತ್ತ ಶಿವನೊಂದಿಗೆ
ಸೆಲ್ಸಿ ಪಾಯಿಂಟ್, ವಿವಿಧ ಜ್ಯೋತಿರ್ಲಿಂಗ ದರ್ಶನ, ಆಧ್ಯಾತ್ಮಿಕ
ಪ್ರದರ್ಶ, ಸ್ವ-ಪರಿವರ್ತನೆಯ ಮಂಟಪ, ಶಿವರಾತ್ರಿ ಪ್ರೊಜೆಕ್ಟರ್
ಶೋ ಹೀಗೆ ನಾನಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ
ಹಾಗೂ ಮಾ.1ರಿಂದ 10ರವರೆಗೆ ಸಹಜ ಶಿವಯೋಗ ಶಿಬಿರವನ್ನು
ಆಯೋಜಿಸಲಾಗಿದೆ ಎಂದು ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ
ಈಶ್ವರೀಯ ವಿವಿ ಬ್ರಹ್ಮಕುಮಾರಿ ಇಂದು, ಚುಡಾಮಣಿ, ಓಕಾಂರಮ್ಮ
ಇದ್ದರು.


