ವಿವೇಕಾನಂದರ ತತ್ವ ಸಿದ್ಧಾಂತ ಬೋಧನೆಗಳು ಸರ್ವ ಧರ್ಮಕ್ಕೂ ಪ್ರೇರಣೆ

ಬಲಿಷ್ಠ ರಾಷ್ಟ್ರ ನಿರ್ಮಿಸಲು ಯುವಜನರಿಂದ ಮಾತ್ರ ಸಾಧ್ಯ ರಾಷ್ಟ್ರೀಯ ಯುವ ದಿನಾಚರಣೆಯಲ್ಲಿ ಸುಹಾಸ್ ಅಭಿಮತ

ಚಿತ್ರದುರ್ಗ: ಭಾರತ ದೇಶದಲ್ಲಿ ಜೀವಿಸುತ್ತಿರುವ ಎಲ್ಲಾ ಸರ್ವ ಧರ್ಮದ ಜನಾಂಗದವರಿಗೂ ವಿವೇಕಾನಂದರ ತತ್ವ ಸಿದ್ಧಾಂತಗಳು ಬೋಧನೆಗಳು ಈಗಿನ ಸಮಾಜಕ್ಕೆ ಪ್ರೇರಣೆಯಾಗಿವೆ ಎಂದು ನೆಹರು ಯುವ ಕೇಂದ್ರ ಜಿಲ್ಲಾ ಯುವಜನಾಧಿಕಾರಿ ಸುಹಾಸ್ ಹೇಳಿದರು.

ನಗರದ ಅಮೃತ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜಿನಲ್ಲಿ ನೆಹರು ಯುವ ಕೇಂದ್ರ, ಮಡಿಲು ಗ್ರಾಮೀಣ ಮತ್ತು ನಗರಾಭಿವೃದ್ಧಿ ಸಂಸ್ಥೆ,ನೀಲಕಂಠಯ್ಯ ಮೆಮೋರಿಯಲ್ ಪದವಿ ಪೂರ್ವ ಕಾಲೇಜು,ಭಾರತೀಯ ರೆಡ್ ಕ್ರಾಸ್ ಸಂಸ್ಥೆ, ಅಮೃತ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜು,
ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಾಮಿ ವಿವೇಕಾನಂದರವರ 162ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು

ಸ್ವಾಮಿ ವಿವೇಕಾನಂದರು ಯಾವದೇ ಕೆಲಸವನ್ನು ಮಾಡಲು ಗುರಿ ಇಟ್ಟುಕೊಂಡು ಗುರಿ ಮುಟ್ಟುವರಿಗೂ ಬಿಡುತ್ತಿರಲಿಲ್ಲ, ಅದರಂತೆ ಯುವ ಶಕ್ತಿಗೆ ಮುಂದೆ ಗುರಿ ಹಿಂದೆ ಗುರು ಇದ್ದರೇ ಮಾತ್ರ ಸಾಧನೆ ಮಾಡಲು ಸಾಧ್ಯ ಎನ್ನುವುದನ್ನು ತಿಳಿಸಿಕೊಟ್ಟ ಮಹಾನ ಧರ್ಮ ಸಂತರು. ವಿದ್ಯಾರ್ಥಿ ಜೀವನದಲ್ಲಿ ಏನನ್ನು ಸಾಧಿಸಬೇಕೆಂದು ಅಂದುಕೊಂಡಿದ್ದೀರಿ ಅದ್ದನ್ನು ಸಾಧಿಸುವರಗೂ ಬಿಡಬೇಡಿ, ಈಗಿನ ಯುವ ಜನತೆ ದೇಶದ ಭವಿಷ್ಯದ ಮುಂದಿನ ಪ್ರಜೆಗಳು ಇದರಿಂದ ದೇಶದ ಅಭಿವೃದ್ಧಿ ನಿಮ್ಮ ಕೈಯಲ್ಲಿದೆ ಎಂದರು.

ಶಿಕ್ಷಣ ಎಂಬುವುದು ಜೀವನದ ಅಭಿವೃದ್ಧಿಗೆ ಅಲ್ಲದೇ ಸಾಮಾಜಿಕ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ. ದೇಹ ಮನಸ್ಸು ಆಧ್ಯಾತ್ಮಿಕವಾಗಿ ವಿಷದ ರೀತಿ ಕಾಣುತ್ತಿದೆ, ಇದು ಆಗಿನ ಸಮಾಜಕ್ಕಿಂತ ಈಗಿನ ಸಮಾಜಕ್ಕೆ ಹೆಚ್ಚು ಹೊಂದುತ್ತದೆ ಇದರಿಂದ ಯುವ ಜನತೆ ದೇಶದ ಅಭಿವೃದ್ಧಿ ಕಾಣಲು ಶ್ರಮಿಸ ಬೇಕಿದೆ ಎಂದರು.

ಉಪನ್ಯಾಸಕ ವಿಜಯ್ ಕುಮಾರ್ ಮಾತನಾಡಿ ಸ್ವಾಮಿ ವಿವೇಕಾನಂದರು ಯುವಜನರಲ್ಲಿ ಆತ್ಮ ಧೈರ್ಯ ಹಾಗೂ ಇಚ್ಛಾಶಕ್ತಿ ಕೊರತೆಯನ್ನು ನೀಗಿಸಲು ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದರು.ಒಂದು ಬಲಿಷ್ಠ ರಾಷ್ಟ್ರ ನಿರ್ಮಾಣ ಮಾಡಲು ಯುವಜನರಿಂದ ಮಾತ್ರವೇ ಸಾಧ್ಯ ಎಂದು ಹೇಳಿದವರು ವಿವೇಕಾನಂದರು, ಅನ್ಯ ಧರ್ಮಗಳನ್ನು ನಿಂದಿಸದೆ, ಎಲ್ಲಾ ಧರ್ಮದ ತಿರುಳನ್ನು ಸಹಿಷ್ಣುತೆ ಯನ್ನು ಒಳಗೊಂಡಂತಹ ಧರ್ಮ, ಸಂಸ್ಕೃತಿ ಭಾರತ ದೇಶದ ಹೆಗ್ಗಳಿಕೆ ಎಂಬುದನ್ನು ಸಾಬೀತು
ಮಾಡಿದ ಮಹಾನ್ ಸಂತ ಸ್ವಾಮಿ ವಿವೇಕಾನಂದರು ಈ ಕಾರಣದಿಂದಲೇ ಇವರ ಜನ್ಮದಿನವನ್ನು ರಾಷ್ಟ್ರೀಯ ಯುವಕರ ದಿನವೆಂದು ಪ್ರತಿ ವರ್ಷವೂ ಆಚರಿಸಲಾಗುತ್ತದೆ ಎಂದರು.

ಇಡೀ ಜಗತ್ತು ಭಾರತದ ಕಡೆ ತಿರುಗಿ ನೋಡುವಂತೆ ಮಾಡಿದ ದಾರ್ಶನಿಕ ಪುರುಷ ಭಾರತದಲ್ಲಿರುವ ಜನರು ಅನಾಗರೀಕ ಎಂದು ವಿದೇಶಿಗರು ತಿಳಿದಿದ್ದರು ಆಗ ಸ್ವಾಮಿ ವಿವೇಕಾನಂದರು ಭಾರತೀಯರಿಗೆ ಮೌಲ್ಯಗಳಿವೆ, ಶ್ರೇಷ್ಠವಾದ ನಂಬಿಕೆ ಆಚರಣೆಗಳಿವೆ ಎಂದು ತೋರಿಸಿ ಕೊಟ್ಟ ದಾರ್ಶನಿಕ, ಚಿಕಾಗೊ ಸಮ್ಮೇಳನದಲ್ಲಿ ಭಾಷಣ ಮಾಡಿ ಸಹೋದರತೆಯನ್ನು ಸಾರುವಂತೆ ಮಾಡಿ 15 ರಿಂದ 35 ವರ್ಷದ ಯುವಕರು ಮನಸ್ಸು ಮಾಡಿದರೆ ಇಡೀ ವಿಶ್ವವನ್ನೇ ಗೆಲ್ಲಬಹುದು ಎಂದು ಸ್ವಾಮಿ ವಿವೇಕಾನಂದರು ಯುವ ಜನತೆಗೆ ತಿಳಿಯುವಂತೆ ಮಾಡಿದ್ದಾರೆ ಎಂದು ಹೇಳಿದರು.

ಮಡಿಲು ಸಂಸ್ಥೆಯ ಕಾರ್ಯದರ್ಶಿ ಆನಂದ್ ಮಾತನಾಡಿ ದೇಶದ ಅಭಿವೃದ್ಧಿಯಲ್ಲಿ ಯುವ ಶಕ್ತಿ ಪಾತ್ರ ಅಗಾಧವಾದದ್ದು. ಧೈರ್ಯ ಮತ್ತು ಆತ್ಮಸ್ಥೆರ್ಯದ ಸಹಕಾರವೇ ಸ್ವಾಮಿ ವಿವೇಕಾನಂದರು, ಅವರ ತತ್ವಜ್ಞಾನ, ಸಮಾಜಶಾಸ್ತ್ರ ಸೇರಿದಂತೆ ಅನೇಕ ವಿಷಯಗಳಲ್ಲಿ ಬಹುದೊಡ್ಡ ಕಣಜವೇ ಸ್ವಾಮಿ ವಿವೇಕಾನಂದರಾಗಿದ್ದರು ಸಂಪಾದಿಸಿದ್ದರು. ಈ ದೇಶದ ಪರಂಪರೆ ಮತ್ತು ಸಂಸ್ಕೃತಿಯನ್ನು ವಿದೇಶಿದಲ್ಲಿ ಪ್ರತಿಬಿಂಬಿಸಿದ ಮಹಾನ ಜ್ಞಾನಿ, ಅಂತಹ ಮಹಾನ್ ವ್ಯಕ್ತಿಯ ಆದರ್ಶಗಳನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಬೇಕು ಎಂದರು.

ಈ ಒಂದು ಸಂದರ್ಭದಲ್ಲಿ ಬಾರತೀಯ ರೆಡ್ ಕ್ರಾಸ್ ಸಂಸ್ಥೆಯ ವೀರಭದ್ರ ಸ್ವಾಮಿ, ಅರುಣ್ ಕುಮಾರ್, ಮಹಾಜರ್ ಉಲ್ಲಾ, ಅಮೃತ ಸ್ಕೂಲ್ ಆಫ್ ನರ್ಸಿಂಗ್ ಕಾಲೇಜು ಪ್ರಾಂಶುಪಾಲರಾದ ದುರುಗಪ್ಪ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಲಕ್ಷ್ಮಮ್ಮ, ಮಡಿಲು ಸಂಸ್ಥೆ ಸದಸ್ಯರಾದ ಪ್ರದೀಪ್ ದ್ಯಾಮ್ ಕುಮಾರ್, ಪ್ರವೀಣ್, ಮಹಾಂತೇಶ್, ಭರತ್, ಇತರರು ಇದ್ದರು.

About The Author

Namma Challakere Local News
error: Content is protected !!