ಚಳ್ಳಕೆರೆ : ನಗರದ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ನಡೆದ ಭೂ ಸುರಕ್ಷಾ ಯೋಜನೆಯ ಉದ್ಘಾಟನಾ ಸಮಾರಂಭದಲ್ಲಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ
ಪಾಲ್ಗೊಂಡು ಉದ್ಘಾಟನೆ ಮಾಡಿ ಮಾತನಾಡಿದರು.
ಇನ್ನೂ ತಾಲೂಕಿನಲ್ಲಿ ಸಾರ್ವಜನಿಕರ ಅಮೂಲ್ಯವಾದ ಭೂ ದಾಖಲೆಗಳನ್ನು ಡಿಜಟಲಿಕರಣ, ತಂತ್ರಾಂಶದ ಮೂಲಕ ಬಹು ವರ್ಷಗಳ ಕಾಲ ದಾಖಲಿಸಿ ಸಾರ್ವಜನಿಕರ ಉಪಯೋಗಕ್ಕೆ ನೀಡಬಹುದಾಗಿದೆ, ಇದರಿಂದ ಸಾರ್ವಜನಿಕರಿಗೆ ಭೂ ವ್ಯಾಜ್ಯಗಳಿಂದ ಮುಕ್ತಿ ಹಾಗೂ ತಮ್ಮ ದಾಖಲೆಗಳನ್ನು ಕೃಡಿಕರಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು.
ಇನ್ನೂ ತಹಶಿಲ್ದಾರ್ ರೇಹಾನ್ ಪಾಷ ಮಾತನಾಡಿ,
ಕಂದಾಯ ಇಲಾಖೆ ಹಾಗೂ ತಾಲ್ಲೂಕು ಕಚೇರಿ ಕಂದಾಯ ಇಲಾಖೆ ಸಭಾಂಗಣದಲ್ಲಿ ಭೂ ಸುರಕ್ಷಾ ಯೋಜನೆ (ಭೂ ದಾಖಲೆಗಳ ಡಿಜಿಟಲೀಕರಣ)ಯ ವನ್ನು ಇಂದು ಶಾಸಕರ ಮೂಲಕ
ಉದ್ಘಾಟನೆ ಮಾಡಿದ್ದೆವೆ ಅದರಂತೆ ಸಾರ್ವಜನಿಕರ ಆಸ್ತಿ ಪಾಸ್ತಿ ರಕ್ಷಣೆಗೆ ಸರಕಾರ ಬದ್ದವಾಗಿದೆ ಎಂದರು.
ಈ ಸಂದರ್ಭದಲ್ಲಿ ತಾಲ್ಲೂಕು ದಂಡಾಧಿಕಾರಿ ಗಳಾದ ರೇಹಾನ್ ಪಾಷಾ, ತಾಲ್ಲೂಕು, ಹೋಬಳಿಯ ಶಿರಸ್ತೆದಾರ್, ಕಂದಾಯ ಅಧಿಕಾರಿಗಳು, ಗ್ರಾಮ ಲೆಕ್ಕಾಧಿಕಾರಿಗಳು, ಹಾಗೂ
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ, ನಗರಸಭೆ ಸದಸ್ಯರಾದ ರಮೇಶ್ ಗೌಡ, ನಾಮ ನಿರ್ದೇಶನ ಸದಸ್ಯರಾದ ಬಡಗಿ ಪಾಪಣ್ಣ, ವೀರಭದ್ರ, ಮುಖಂಡರುಗಳಾದ ಪ್ರಕಾಶ್, ರುದ್ರೇಶ್, ನಾಗಭೂಷಣ, ಗುಜ್ಜಾರಪ್ಪ, ನಾಗರಾಜ್, ಭರಮಯ್ಯ, ರವಿ, ಬೋರಣ್ಣ, ಸೈಯದ್, ಎರಬಾಲಪ್ಪ, ಗಿರಿಯಪ್ಪ, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

