ನಾಯಕನಹಟ್ಟಿ : ಪಟ್ಟಣದ ಮಯೂರ್ ಇಂಟರ್ನ್ಯಾಷನಲ್ ಶಾಲೆಯಲ್ಲಿ “ಮಯೂರ್ ಸಾಂಸ್ಕೃತಿಕ ಹಬ್ಬ 2025” ಕಾರ್ಯಕ್ರಮವನ್ನು ಮಯೂರ್ ಇಂಟರ್ನ್ಯಾಷನಲ್ ಶಾಲೆಯ ಅಧ್ಯಕ್ಷೆ ಮಧುಮತಿ ಕಾರ್ಯದರ್ಶಿ ಡಾ. ಎಂ ಮೈಲಾರಸ್ವಾಮಿ ಜ್ಯೋತಿ ಬೆಳಗಿಸುವ ಮೂಲಕ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು ಮಯೂರ್ ಸಂಸ್ಕೃತಿಕ ಹಬ್ಬ ಇದು ಒಂದು ಮಕ್ಕಳ ಹಬ್ಬ. ಮಕ್ಕಳಿಗೆ ಶಾಲೆಯಲ್ಲಿ ಆಟ ಪಾಠಗಳ ಜೊತೆಗೆ ಸಂಗೀತ ನೃತ್ಯ ಮನೋರಂಜನೆಗಳನ್ನು ಮಕ್ಕಳಿಗೆ ಒದಗಿಸಿದರೆ ಮಕ್ಕಳಲ್ಲಿ ಕಲಿಯು ಉತ್ಸಾಹ ಹೆಚ್ಚಾಗುತ್ತದೆ. ಮುಂದಿನ ದಿನಗಳಲ್ಲಿ ತನ್ನ ಇಷ್ಟದ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ಉತ್ತಮ ಸಮಾಜ ನಿರ್ಮಾಣಕ್ಕೆ ದಾರಿದೀಪವಾಗುತ್ತದೆ ಎಂದು ಹೇಳಿದರು.

ಮಕ್ಕಳ ನೃತ್ಯ ಹಾಗೂ ಹಿರಿಯ ಚಿತ್ರನಟಿ ಪ್ರೇಮ, ಚಿತ್ರನಟ ನೆನಪಿರಲಿ ಪ್ರೇಮ್, ಹಿರಿಯ ಚಿತ್ರನಟಿ ಸೋನಾಲ್ ತರುಣ್ ಸುಧೀರ್, ಬಿಗ್ ಬಾಸ್ ಖ್ಯಾತಿಯ ಹಾಗೂ ಚಿತ್ರನಟ ಧರ್ಮ ಕೀರ್ತಿರಾಜ್,ಬಿಗ್ ಬಾಸ್ ಖ್ಯಾತಿಯ ಹಾಗೂ ಚಿತ್ರನಟಿ ಅನುಷ್ಕಾ ರೈ, ಮಹಾ ನಟಿ ಕಲಾವಿದೆ ಗಗನ ಬಾರಿ, ಕಾಮಿಡಿ ಕಿಲಾಡಿ ಹಾಸ್ಯ ಕಲಾವಿದ ಗಿಲ್ಲಿ ನಟ, ಮಜಾ ಭಾರತದ ಚಂದ್ರಪ್ರಭ ತಂಡದವರಿಂದ ಕಾರ್ಯಕ್ರಮಕ್ಕೆ ಮೆರುಗು ನೀಡಿದರು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಗಳ ಆಪ್ತರ ಕಾರ್ಯದರ್ಶಿ ಡಾ. ವೆಂಕಟೇಶಯ್ಯ, ಮುಖ್ಯಮಂತ್ರಿಗಳ ಗೌರವ ವೈದ್ಯಕೀಯ ಸಲಹೆಗಾರ ಡಾ. ಎಚ್ ರವಿಕುಮಾರ್, ಮುಖ್ಯಮಂತ್ರಿಗಳ ಜಂಟಿ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ಕೆಡಿಪಿ ಸದಸ್ಯರು ಹಾಗೂ ವೀರಶೈವ ಸಮಾಜದ ತಾಲೂಕು ಅಧ್ಯಕ್ಷರಾದ ಕೆ ಸಿ ನಾಗರಾಜ್, ಶಿಕ್ಷಣ ಇಲಾಖೆ ಉಪ ನಿರ್ದೇಶಕರು ಚಿತ್ರದುರ್ಗ ಎಂ ಆರ್ ಮಂಜುನಾಥ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಪಟೇಲ್ ಜಿ.ಎಂ. ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು, ಚಳ್ಳಕೆರೆ ಕ್ಷೇತ್ರ ಶಿಕ್ಷಣಾಧಿಕಾರಿ ಕೆ ಎಸ್ ಸುರೇಶ್, ಪ.ಪಂ ಅಧ್ಯಕ್ಷ ಮಂಜುಳ ಶ್ರೀಕಾಂತ್, ಉಪಾಧ್ಯಕ್ಷರು ಸರ್ವ ಮಂಗಳ ಉಮಾಪತಿ, ಪ. ಪಂ ಮುಖ್ಯ ಅಧಿಕಾರಿ ಓ ಶ್ರೀನಿವಾಸ್, ಪ. ಪಂ ಸರ್ವ ಸದಸ್ಯರುಗಳು, ಡಿವೈಎಸ್‍ಪಿ ರಾಜಣ್ಣ, ಮೊಳಕಾಲ್ಮೂರು ಸಿಪಿಐ ವಸಂತ ಅಸೋಡೆ, ತಳಕು ಸಿಪಿಐ ಹನುಮಂತಪ್ಪ ಎಸ್ ಶೀರೆಹಳ್ಳಿ, ನಾಯಕನಹಟ್ಟಿ ಉಪನಿರೀಕ್ಷಕರು ದೇವರಾಜ್, ಪಿಎಸ್ಐ ಕೆ ಶಿವಕುಮಾರ್, ಪೋಲಿಸಿ ಬಂದಿ ವರ್ಗ, ಪೋಷಕರು ಹಾಗೂ ಸಮಸ್ತ ಹೋಬಳಿಯ ನಾಗರಿಕರು, ಶಾಲಾ ಶಿಕ್ಷಕರು, ಶಿಕ್ಷಕಿಯರು, ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!