ನಾಯಕನಹಟ್ಟಿ ಅಬ್ಬೇನಹಳ್ಳಿ ವ್ಯಾಪ್ತಿಯ ಚಿನ್ನಹಗರಿ ನದಿಯಲ್ಲಿ ಮ್ಯಾಸನಾಯಕ -ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಡಾ. ವಿರುಪಾಕ್ಷಿ ಪೂಜಾರಿಹಳ್ಳಿ.
ನಾಯಕನಹಟ್ಟಿ :: ಜ. 14. ಮ್ಯಾಸನಾಯಕರ ಸರ್ವತೋಮುಖ ಅಭಿವೃದ್ಧಿಗೆ ವಿಚಾರ- ಸಂಕೀರ್ಣಗಳು ಅತ್ಯಂತ ಪ್ರಮುಖವಾಗಿವೆ ಎಂದು ಡಾ. ವಿರುಪಾಕ್ಷಿ ಪೂಜಾರಿಹಳ್ಳಿ ಹೇಳಿದ್ದಾರೆ.
ಅವರು ಮಂಗಳವಾರ ಹೋಬಳಿಯ ಅಬ್ಬೇನಹಳ್ಳಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊರಡಿಹಳ್ಳಿ ಸಮೀಪದ ಚಿನ್ನಹಗರಿ ನದಿಯಲ್ಲಿ ಶ್ರೀ ಗಾದರಿ ಪಾಲನಾಯಕ ದೇವಸ್ಥಾನ ಅಭಿವೃದ್ಧಿ ಸಮಿತಿ( ರಿ) ಚನ್ನಬಸಯ್ಯನಹಟ್ಟಿ ಚಳ್ಳಕೆರೆ ತಾಲೂಕು, ಚಿತ್ರದುರ್ಗ ಜಿಲ್ಲೆ ಇವರ ಸಹಯೋಗದಲ್ಲಿ ಚಿನ್ನಹಗರಿ ಮಹೋತ್ಸವ ಹೊಳೆ ಪೂಜೆ ಮ್ಯಾಸನಾಯಕ ಬುಡಕಟ್ಟ ಸಂಸ್ಕೃತಿ ವಿಚಾರ ಸಂಕಿರಣ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಪ್ರಾಚೀನ ಕಾಲದಲ್ಲಿ ಚಿನ್ನಹಗರಿ ನದಿ ರೈತರಿಗೆ ಜೀವನಾಡಿ ಬುಡಕಟ್ಟು ಜನರಿಗೆ ಹವ್ಯಾಸ ಕೇಂದ್ರವಾಗಿತ್ತು ಪ್ರತಿಯೊಂದು ಸಮುದಾಯದವರು ಬಂದು ತಮ್ಮ ದೇವರ ಕಾರ್ಯಗಳನ್ನ ಇಲ್ಲಿ ನೆರವೇರಿಸುತ್ತಿದ್ದರು 1980ರ ದಶಕದಲ್ಲಿ ಈ ನದಿ ಬತ್ತಿ ಹೋದ ಕಾರಣ ದೇವರುಗಳ ಗಂಗೆ ಸ್ಥಾನಕ್ಕೆ ತುಂಬಾ ತೊಂದರೆಯಾಗುತ್ತಿತ್ತು ಟ್ಯಾಂಕರ್ ಮೂಲಕ ನೀರನ್ನು ತಂದು ಈ ನದಿಯ ಮದುವಿನಲ್ಲಿ ಪೂಜೆ ಮಾಡುತ್ತಿದ್ದರು ಚಿನ್ನ ಅಗರಿ ನದಿ, ಚಿತ್ರದುರ್ಗ ಬೆಟ್ಟದಲ್ಲಿ ಅರಿದು ಕಾತ್ರಾಳು, ಸಂಗೇನಹಳ್ಳಿ, ದೋಣಿಹಳ್ಳಿ, ಕೆರೆಯ ಮೂಲಕ ಜಿನಿಗೆ ಹಳ್ಳ ಅಥವಾ ದೊಡ್ಡಹಳ್ಳ ಪೆದ್ದವಂಕ ಚಿನ್ನ ಹಗರಿ ನದಿಯಿಂದಲೂ ಕರೆಯುತ್ತಿದ್ದರು ಸಾವಿರಾರು ವರ್ಷಗಳ ಇತಿಹಾಸವುಳ್ಳ ಚಿನ್ನ ಹಗರಿ ನದಿಯಾಗಿದೆ, ನಮ್ಮ ಮ್ಯಾಸನಾಯಕರ ಸಮಸ್ಯೆ ಸಾಕಷ್ಟಿವೆ ಅದರ ಬಗ್ಗೆ ವಿಚಾರ ಸಂಕಿರಣ ಮಾಡಲಾಗಿದೆ ಸುಮಾರು 40 ಜನ ವಿದ್ವಾಂಸರು ಅದರ ಬುಡಕಟ್ಟು ಸಂಸ್ಕೃತಿಯ ಉಳಿಸಿಕೊಂಡು ಬಂದಿರುವ ಕಿಲಾರಿ ಪೂಜಾರಿ ದಾಸಯ್ಯಗಳ ಸಮ್ಮುಖದಲ್ಲಿ ನೆರವೇರಿಸಲಾಗಿದೆ ನಮ್ಮ ಮ್ಯಾಸನಾಯಕರಿಗೆ ಉದಿ ಮತ್ತು ಪದಿ ನಾವು ದೇವಸ್ಥಾನ ಒಳಗಿದ್ದರೆ ಉದಿ ದೇವಸ್ಥಾನದಿಂದ ಹೊರಗೆ ಬಂದರೆ ಪದಿ ಆಗುತ್ತೆ ಉದಿಮತ್ತು ಪದಿ ಎರಡು ಸಂಗಮವಾಗಲು ಕಿಲಾರಿ ಪೂಜಾರಿ ದಾಸಯ್ಯಗಳ ಸಂಗಮದ ಕಾರ್ಯಕ್ರಮವಾಗಿದೆ ಎಂದರು.
ನಿವೃತ್ತ ಪಶು ವೈದ್ಯಾಧಿಕಾರಿ ಡಾ. ಜಿ.ತಿಪ್ಪೇಸ್ವಾಮಿ ಗೌಡಗೆರೆ ಮಾತನಾಡಿದರು ನಮ್ಮ ಮ್ಯಾಸ ನಾಯಕರಾ ಅನೇಕ ಸಮಸ್ಯೆಗಳು ಇವೆ ಆರ್ಥಿಕವಾಗಿ ಸಾಮಾಜಿಕವಾಗಿ ಸದೃಢರಾಗಲು ಈ ದಿನ ಚಿನ್ನಹಗರಿ ನದಿಯಲ್ಲಿ ಕಿಲಾಡಿ ಪೂಜಾರಿ ಮತ್ತು ದಾಸಯ್ಯಗಳಿಗೆ ಸನ್ಮಾನಿಸಲಾಗಿದೆ ಅದೇ ರೀತಿ ಪಿಎಚ್ಡಿ ಪದವೀಧರರಿಂದ ವಿಚಾರ ಸಂಕೀರ್ಣ ಕಾರ್ಯಕ್ರಮವನ್ನು ಮತ್ತು ವಾಲ್ಮೀಕಿ ಪ್ರಶಸ್ತಿ ಪುರಸ್ಕೃತ ಜೋಗಯ್ಯ ನನ್ನಿವಾಳ ಇವರಿಗೂ ಸಹ ಸನ್ಮಾನಿಸಲಾಯಿತು ಮುಂದಿನ ದಿನಗಳಲ್ಲಿ ಚಿತ್ರದುರ್ಗ ವಿಜಯನಗರ ಜಿಲ್ಲೆಯ ಆದ್ಯಂತ ಇಂತಹ ವಿಚಾರ ಸಂಕೀರ್ಣಗಳು ನಡೆಸಲು ತೀರ್ಮಾನಿಸಲಾಗಿದೆ ಎಂದರು.
ಇನ್ನೂ ಮದಕರಿ ವಿದ್ಯಾ ಸಂಸ್ಥೆ ಚಿತ್ರದುರ್ಗ ಅಧ್ಯಕ್ಷ ಡಾ. ಎಸ್ ಸಂದೀಪ್ ಮಾತನಾಡಿದರು ಮ್ಯಾಸ ನಾಯಕ ಸಮುದಾಯದ ಪ್ರತಿಯೊಬ್ಬರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ಕೊಡಿಸಿ ಇಂತಹ ವಿಚಾರ ಸಂಕೀರ್ಣಗಳನ್ನು ನಡೆಸಿದಾಗ ನಮ್ಮ ಸಮುದಾಯದ ಜನರಿಗೆ ಪೂರ್ವಿಕರ ಆಚಾರ ವಿಚಾರಗಳು ಮತ್ತು ಬುಡಕಟ್ಟು ಸಂಸ್ಕೃತಿಯ ಸಂಪ್ರದಾಯಗಳು ಬಗ್ಗೆ ಅರಿವು ಮೂಡಿಸಲು ಉತ್ತಮ ವೇದಿಕೆಯಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ದಿವ್ಯ ಸಾನಿಧ್ಯ ಶ್ರೀ ರೇವಣ್ಣ ಕಂಪಳದೇವರ ಪೂಜಾರಿ, ಬಿ ಗೋವಿಂದಪ್ಪ ಡಾ. ಎಸ್ ಕೆ ಯೋಗಾನಂದ ಮೊಳಕಾಲ್ಬೂರು, ಎಸ್ ಶಾಮಣ್ಣ, ಓ.ಓಬಯ್ಯ ಹಾಲಸಾಗರಹಟ್ಟಿ ರಾಂಪುರ, ಡಾ.ಬಿ. ನಾಗೇಂದ್ರಪ್ಪ, ಡಾ. ಎನ್ ವಿರೂಪಾಕ್ಷಿ ಬೋಸೆದೇವರಹಟ್ಟಿ, ಡಾ. ಟಿ .ಓಂಕಾರಪ್ಪ ಹುಲಿಕೆರೆ ಮಾರನಾಯಕ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯರು, ಡಾ. ಅನ್ನಪೂರ್ಣಮ್ಮ ಸಿ ಬಿ ಹಿರೇಹಳ್ಳಿ, ಸೇರಿದಂತೆ ಸಮಸ್ತ ಮ್ಯಾಸ ವ ನಾಯಕರಾದ ಸೊಂಡೂರು, ಕೂಡ್ಲಿಗಿ, ಮೊಳಕಾಲ್ಮುರು, ಚಳ್ಳಕೆರೆ, ನಾಯಕನಹಟ್ಟಿ, ಜಗಳೂರು, ರಾಯದುರ್ಗ, ಹೊಸಪೇಟೆ, ತಾಲ್ಲೂಕುಗಳಲ್ಲಿ ನೆಲೆಸಿರುವ ಕಿಲಾರಿ .ಪೂಜಾರಿ. ದಾಸಯ್ಯಗಳ. ಮ್ಯಾಸ ನಾಯಕರ ಗುಡಿಕಟ್ಟಿ ಗಳಿಗೆ ಸೇರಿದ ಕುಲಸಾಗರದವರು ಉಪಸ್ಥಿತರಿದ್ದರು