ಚಳ್ಳಕೆರೆ :
ಚಿತ್ರದುರ್ಗ: ಪ್ರಧಾನಿಯವರಿಗೆ ಎಚ್ಚರಿಕೆ ನೀಡಿದ ರೈತರು
ಶಂಭು ಗಡಿಯಲ್ಲಿ ಉಪವಾಸ ಸತ್ಯಾಗ್ರಹ ಮಾಡುತ್ತಿರುವವರ
ಬೇಡಿಕೆ ಈಡೇರಿಸಬೇಕು, ಉಪವಾಸ ಸತ್ಯಾಗ್ರಹ ನಿಲ್ಲಿಸುವಂತೆ
ಪ್ರಧಾನಿಗಳು ಹೇಳಬೇಕೆಂದು ರೈತ ಮುಖಂಡ ರೆಡ್ಡಿ ಹಳ್ಳಿ ವೀರಣ್ಣ
ಹೇಳಿದರು.
ಚಿತ್ರದುರ್ಗದಲ್ಲಿ ಮಾತನಾಡಿ, ಈ ಕೆಲಸವನ್ನು ಕೂಡಲೇ
ಪ್ರಧಾನಿಯವರು ಮಾಡಬೇಕು ಎಂದು ಎಚ್ಚರಿಕೆ ನೀಡಿದರು.
ಇದಕ್ಕೂ ಮುನ್ನ ಪ್ರವಾಸಿಮಂದಿರದಿಂದ ಪ್ರತಿಭಟನೆಯಲ್ಲಿ ಬಂದ
ರೈತರು ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿ,
ಕೇಂದ್ರದ ವಿರುದ್ಧ ಘೋಷಣೆಗಳನ್ನು ಹಾಕಿದರು.