ಚಳ್ಳಕೆರೆ :
ಚಿತ್ರದುರ್ಗ: ಸುಣ್ಣದ ಗುಮ್ಮಿಗಳ ಸ್ಥಳಾಂತರದ ಕೆಲಸ
ಆರಂಭವಾಗಲಿದೆ
ಚಿತ್ರದುರ್ಗ ನಗರದ ಸುಣ್ಣದ ಗುಮ್ಮಿಗಳನ್ನು ಸ್ಥಳಾಂತರಗೊಳಿಸಲು
ಸ್ಥಳವನ್ನು ಗುರುತಿಸುವಂತೆ ಅಧಿಕಾರಿಗಳಿಗೆ ತಿಳಿಸಿದೆ ಎಂದು
ಶಾಸಕ ವೀರೇಂದ್ರ ಪಪ್ಪಿ ಹೇಳಿದರು.
ಚಿತ್ರದುರ್ಗದಲ್ಲಿಂದು
ಮಾಧ್ಯಮಗಳೊಂದಿಗೆ ಮಾತಾಡಿ, ಜಾಗ ಗುರುತಿಸಿದ ಮೇಲೆ
ಒಂದೆರಡು ದಿನಗಳಲ್ಲಿ ಸ್ಥಳಾಂತರದ ಕೆಲಸ ಆರಂಭವಾಗುತ್ತದೆ.
ಮೊದಲು ಏನು ಗರುತಿಸಲಾಗಿತ್ತೋ ಅದೇ ಜಾಗ ಕುಂಚಿಗನಾಳ್
ಬಳಿ ಸ್ಥಳಾಂತರಿಸಲಾಗುವುದು, ನಂತರ ಎಲ್ಲಾ ರೀತಿಯ
ಸಮಸ್ಯೆಗಳು ಬಗೆಹರಿಯಲಿದೆ ಎಂದು ಹೇಳಿದರು.