ಚಳ್ಳಕೆರೆ :
ಅಕ್ರಮ ಶೇಂದಿ ಸಾಗಾಟ ಮಾಡುತ್ತಿದ್ದ ಖಚಿತ ಮಾಹಿತಿ
ಮೇರೆಗೆ ಅಬಕಾರಿ ಪೋಲಿಸರು ದಾಳಿ ಮಾಡಿ ವಶಕ್ಕೆ
ಪಡೆದು ಪ್ರಕರಣ ದಸಖಲು ಮಾಡಿಕೊಂಡಿದ್ದಾರೆ.
ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಲ್ಲಿ ಉಪ
ಅಬಕಾರಿ ಉಪ ಅಧೀಕ್ಷಕರು ಹಿರಿಯೂರು ಉಪವಿಭಾಗ
ರವರ ನಿರ್ದೇಶನದಲ್ಲಿ ಚಳ್ಳಕೆರೆ ವಲಯ ಅಬಕಾರಿ ಉಪ
ನಿರೀಕ್ಷಕರು ಮತ್ತು ಸಿಬ್ಬಂದಿಯೊಂದಿಗೆ ಆಂಧ್ರ
ಗಡಿಭಾಗದಲ್ಲಿ ಅಬಕಾರಿ ಅಕ್ರಮಗಳನ್ನು ತಡೆಗಟ್ಟುವ
ನಿಟ್ಟಿನಲ್ಲಿ ಗಸ್ತು ನಡೆಸುತ್ತಿರುವ ಸಂದರ್ಭದಲ್ಲಿ ಆಂಧ್ರದ
ತಾಳಿಕೆರೆ ಯಿಂದ ಗೌರಸಮುದ್ರ ತುಂಬಲು ಕಡೆಗೆ ಬರುವ
ರಸ್ತೆಯಲ್ಲಿ ವಾಹನ ತಪಾಸಣೆ ಸಮಯದಲ್ಲಿ ಒಂದು
ಆಟೋರಿಕ್ಷಾ ದಲ್ಲಿ 34ಲೀಟರ್ ನಿಷೇಧಿತ ಸೇಂದಿ
ಅಕ್ರಮವಾಗಿ ಸಾಗಾಣಿಕೆ ಮಾಡುತ್ತಿದ್ದು ಕಂಡುಬಂದಿದ್ದು
ಹನುಮಂತಪ್ಪ ಹಾಗೂ ಜಾಕಿರ್ ಹುಸೇನ್ ಇಬ್ಬರ
ಆರೋಪಿಗಳನ್ನು ವಶಪಡಿಸಿಕೊಂಡಿದ್ದು
ಆಟೋ.ದ್ವಿಚಕ್ರವಾಹ ಹಾಗೂ 54 ಲೀಟರ್ ಮೌಲ್ಯ
2,25,000 ರೂ ಮೌಲ್ಯದ ನಿಷೇಧಿತ ಸೇಂದಿ
ಪಡಿಸಿಕೊಂಡು ಅಬಕಾರಿ ಕಾಯ್ದೆಯಡಿಯಲ್ಲಿ ಪ್ರಕರಣ
ದಾಖಲು ಮಾಡಿಕೊಳ್ಳಲಾಗಿದೆ.
ದಾಳಿಯಲ್ಲಿ, ಅಬಕಾರಿ ನಿರೀಕ್ಷಕ ಸಿ ನಾಗರಾಜು,
ಸಬ್ಇನ್ಸೆಕ್ಟರ್ಗಳಾದ, ರಂಗಸ್ವಾಮಿ, ತಿಪ್ಪಯ್ಯ ಹಾಗೂ
ಉಪ ವಿಭಾಗದ, ವೀರಣ್ಣ, ಸಿಬ್ಬಂದಿಗಳಾದ,
ಮುಖ್ಯಪೇದೆ ಸೋಮಶೇಖರ್, ಮಂಜುಳಾ, ದರ್ಶನ್
ಹಾಗೂ ಹೋಂ ಗಾರ್ಡ್ಸ್ ಪಾಲ್ಗೊಂಡಿರುತ್ತಾರೆ