ಚಳ್ಳಕೆರೆ : ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿ ಹಬ್ಬವನ್ನು ಈ ಬಾರಿ ಯೋಗ ಬಂಧುಗಳು ವಿಶಿಷ್ಠ ರೀತಿಯಲ್ಲಿ 108 ಸೂರ್ಯ ನಮಸ್ಕಾರ ಮಾಡುವ ಮೂಲಕ
ಯೋಗ ಅಭ್ಯಾಸ ಮಾಡಿದ್ದಾರೆ.

ನಗರದ ರೋಟರಿ ಬಾಲ ಭವನದಲ್ಲಿ ಪ್ರತಿದಿನದಂತೆ ನೂರಾರು ಯೋಗ ಬಂಧುಗಳು ಆಯೋಜನೆಗೊಂಡು ಮಕರ ಸಂಕ್ರಾಂತಿಯ ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಹಿಂದಿನ ಕಾಲದ ಸಂಪ್ರದಾಯಿಕ ವಿಧಾನದ ಮೂಲಕ ನವಧಾನ್ಯಗಳ ಮೂಲಕ ಮಕರ ಸಂಕ್ರಾಂತಿಯನ್ನು ಸ್ವಾಗತಿಸಿದ್ದಾರೆ.

ಅದರಂತೆ ನೂರಾರು ಯೋಗ ಬಂಧುಗಳು
ಮಕರ ಸಂಕ್ರಾಂತಿ ಅಂಗವಾಗಿ 108 ಸೂರ್ಯ ನಮಸ್ಕಾರವನ್ನು ಮಾಡುವ ಮೂಲಕ ಈ ಬಾರಿ ಉತ್ತಮವಾದ ಸಂದೇಶ ಸಾರಿದ್ದೆವೆ ಎಂದು ಯೋಗದ ಮುಖ್ಯ ಶಿಕ್ಷಕರ ಮನೋಹರ ಅಣ್ಣ ಹೇಳಿದ್ದಾರೆ.

ಇದೇ ಸಂಧರ್ಭದಲ್ಲಿ ಮುಂಜಾನೆಯೇ ನೂರಾರು ಯೋಗ ಬಂಧುಗಳ ಜೊತೆಗೆ, ಮಹೇಶ್ ಅಣ್ಣ,
ಸಿಎಲ್.ತಿಪ್ಪೇಸ್ವಾಮಿ ಅಣ್ಣ, ಶಿವನಾಗಪಣ್ಣ, ಹಾಗೂ ಹಲವಾರು ಯೋಗ ಬಂಧುಗಳು ಹಾಜರಿದ್ದರು.

About The Author

Namma Challakere Local News
error: Content is protected !!