ಚಳ್ಳಕೆರೆ :
ಚಳ್ಳಕೆರೆ: ಜೂಜು ಅಡ್ಡೆ ಮೇಲೆ ದಾಳಿ 19 ಜನರ
ಬಂಧನ
ಖಚಿತ ಮಾಹಿತಿ ಮೇರೆಗೆ ಜೂಜು ಅಡ್ಡೆ ಮೇಲೆ ದಾಳಿ ನಡೆಸಿದ
ಪೊಲೀಸರು, 21,250 ನಗದನ್ನು ವಶಕ್ಕೆ ತೆಗೆದುಕೊಂಡು
19 ಜನರನ್ನು ಬಂಧಿಸಿರುವ ಘಟನೆ ಪರುಶುರಾಂಪುರದಲ್ಲಿ
ನಡೆದಿದೆ.
ಪರುಶುರಾಂಪುರದ ದೊಡ್ಡ ಚೆಲ್ಲೂರು ಅರಣ್ಯದಲ್ಲಿ
ಬುಲೆರೋ ವಾಹನದಲ್ಲಿ ಜೂಜಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ
ಪರುಶುರಾಂಪುರ ಪೊಲೀಸರು ದಾಳಿ ನಡೆಸಿದ್ದಾರೆ.
19 ಜನರನ್ನು
ಬಂಧಿಸಿದ್ದು, ಅವರನ್ನು ಆಂಧ್ರದ ಅಮರಾಪುರ ಮಂಡಲದ
ಅಗ್ರಹಾರ ಗ್ರಾಮದವರೆಂದು ಗುರುತಿಸಲಾಗಿದೆ.
ಪರುಶುರಾಂಪುರ
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.