ಸೂರ್ಯ ಪಥ ಬದಲಾಯಿಸಿದ ಹಾಗೆ ಹೊಸ ಸಂಕ್ರಮಣದಿಂದ ನಿಮ್ಮ ಬದುಕಿನ ಎಲ್ಲ ಕತ್ತಲೆಗಳು ಮತ್ತು ಕಷ್ಟಗಳು ದೂರವಾಗಲಿ ಎಂದು ಚಳ್ಳಕೆರೆ ನಿಕಟ ಪರ್ವತಹಸಿಲ್ದಾರ್ ಎನ್ ರಘುಮೂರ್ತಿ ಹೇಳಿದರು

ಅವರು ಮೊಣಕಾಲ್ಮುರು ತಾಲೂಕಿನ ಅಶೋಕ ಸಿದ್ದಾಪುರ ಗ್ರಾಮದ ಬ್ರಹ್ಮಗಿರಿ ಸಿದ್ದೇಶ್ವರ ಸ್ವಾಮಿ ಬೆಟ್ಟದ ತಪೋಭೂಮಿಯಲ್ಲಿ ಹೊಸ ಸಂಕ್ರಮಣದ ಪೂಜಾ ಕೈಂಕರ್ಯ ಗಳಲ್ಲಿ ಭಾಗಿಯಾಗಿ ಮಾತನಾಡಿ ಈ ಹೊಸ ವರ್ಷದಲ್ಲಿ ನಮ್ಮಗಳ ನಕಾರಾತ್ಮಕ ಆಲೋಚನೆಗಳು ಕೊನೆಯಾಗಿ ಬದುಕಿನಲ್ಲಿ ಸಾಮಾಜಿಕ ಪ್ರಜ್ಞೆ ಸಾಮಾಜಿಕ ಹೊಣೆಗಾರಿಕೆ ಮತ್ತು ಸಹಬಾಳ್ವೆ ಮನೆ ಮಾಡಲಿ ಎಲ್ಲಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ಚಿಂತನೆಗಳು ಶ್ರೀಮಂತವಾಗಿರುತ್ತವೋ ಅಲ್ಲಿಯ ಜನಗಳ ಉಲ್ಲಾಸ ಮತ್ತು ಆಯಸ್ಸು ವೃದ್ಧಿಯಾಗಿರುತ್ತದೆ ಪರಮಪೂಜ್ಯ ಸ್ವಾಮೀಜಿಯವರು ಈ ಸಿದ್ದೇಶ್ವರ ಮಠದಲ್ಲಿ ಐನೂರಕ್ಕೂ ಹೆಚ್ಚಿನ ಜಾನುವಾರಗಳನ್ನು ಪೋಷಣೆ ಮಾಡಿ ನಿತ್ಯ ಇಲ್ಲಿ ಬರುವಂತ ಭಕ್ತಾದಿಗಳಿಗೆ ದಾಸೋಹ ಮಾಡುತ್ತಿರುವುದು ಬಸವಣ್ಣನವರ ನಡವಳಿಕೆಯ ಪ್ರತಿರೂಪ ಇವರಿಗೆ ಇನ್ನೂ ಹೆಚ್ಚು ಹೆಚ್ಚು ಭಗವಂತನು ಈ ಕಾರ್ಯವನ್ನು ಹೆಚ್ಚು ಕಾಲ ಮಾಡಲು ಕೃಪೆ ಮತ್ತು ಅನುಗ್ರಹ ನೀಡಲೆಂದು ಪ್ರಾರ್ಥಿಸಿದರು
ರಾಂಪುರದ ಡಿಕೆಆರ್ ಗ್ರೂಪ್ನ ಮಾಲೀಕರಾದ ಮಂಜುನಾಥ್ ಮಾತನಾಡಿ ಈ ಭಾಗದ ಜನರು ಬ್ರಾಹ್ಮಗಿರಿ ಬೆಟ್ಟದ ಸಿದ್ದೇಶ್ವರ ಸ್ವಾಮಿಗೆ ನಿರಂತರವಾಗಿ ಪೂಜಾ ವಿಧಿ ವಿಧಾನಗಳಲ್ಲಿ ಭಾಗಿಯಾಗುತ್ತಾರೆ ಈ ದೇವರ ಮೇಲಿನ ನಂಬಿಕೆ ಹಾಗೂ ಭಕ್ತಿ ಇಲ್ಲಿಯ ಜನರನ್ನು ಹೃದಯ ವೈಶಾಲ್ಯತೆಯಲ್ಲಿ ಶ್ರೀಮಂತ ಗೊಳಿಸಿದೆ ಸ್ವಾಮೀಜಿಯವರ ಈ ಕಾರ್ಯ ಅದ್ವಿತಿಯವಾದಂತದ್ದು ನಾವು ವಾಸಿಸುವ ಮನೆಗಳಿಗಿಂತ ಶುದ್ಧವಾದ ಗೋಶಾಲೆಯನ್ನು ಈ ಸ್ವಾಮಿಗಳ ನಿರ್ಮಿಸುತ್ತಿದ್ದಾರೆ ನಮ್ಮಗಳ ಪ್ರದೇಶದಲ್ಲಿ ಇಂತದ್ದೊಂದು ಸತ್ಕಾರ್ಯ ನಡೆಯುತ್ತಿರುವುದು ನಮ್ಮಗಳ ಸೌಭಾಗ್ಯ ಎಂದು ಹೇಳಿದರು
ಸಿದ್ದೇಶ್ವರ ಸ್ವಾಮೀಜಿ ಅವರು ಸಕಲ ಪೂಜಾ ವಿಧಿ ವಿಧಾನಗಳ ನೇತೃತ್ವ ವಹಿಸಿ ಬಂದಂತಹ ಸಹ ಸ್ರಾರು ಭಕ್ತಾದಿಗಳಿಗೆ ದಾಸೋಹ ಮತ್ತು ಆಶೀರ್ವಚನ ನೀಡಿದರು ಈ ಸಂದರ್ಭದಲ್ಲಿ ಗುಂಡಪ್ಪ ಪ್ರಶಾಂತ್ ಮಾರಾನಾಯಕ ಮತ್ತು ಸಹಸ್ರರು ಭಕ್ತಾದಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!