ಚಳ್ಳಕೆರೆ:
15ನೇ ಹಣಕಾಸಿನ
ವಿವಿಧ ಕಾಮಗಾರಿಗಳಲ್ಲಿ ಅಕ್ರಮ ನಡೆದಿರುವ ಬಗ್ಗೆ ತನಿಖೆ
ನಡೆಸುವಂತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ
ಸಮಿತಿ ಸದಸ್ಯರು ಹಾಗೂ ಗ್ರಾಮಸ್ಥರು ತಾಲೂಕು ಪಂಚಾಯತಿ ಕಛೇರಿ ಮುಂದೆ ಪ್ರತಿಭಟಿಸಿದರು.
ನಗರದ ಪ್ರವಾಸಿ ಮಂದಿರದಿಂದ ತಾಲೂಕು ಪಂಚಾಯಿತಿ
ಕಚೇರಿಗೆ ತಮಟೆ ವಾಧ್ಯದೊಂದಿಗೆ ಮೆರವಣಿಗೆಯಲ್ಲಿ
ಬಂದು ತಾಲೂಕು ಪಂಚಾಯಿತಿ ಇಓ ಶಶಿಧರ್ ರವರಿಗೆ
ಮನವಿ ಸಲ್ಲಿಸಿದರು.
ಈ ವೇಳೆ ಮಾತಾಡಿದ ದಲಿತ ಸಂಘರ್ಷ ಸಮಿತಿ ಸದಸ್ಯ ಟಿ.
ವಿಜಯ್ ಕುಮಾರ್ ಮಾತನಾಡಿ ಗ್ರಾಮ ಪಂಚಾಯತಿಗಳಲ್ಲಿ ಅವ್ಯವಾವಾರ , ಅಕ್ರಮ ಈಗೇ ಹಲವು ಸಮಸ್ಯೆಗಳು ಇವೆ ಇಂತಹ ಪಂಚಾಯತಿಗಳನ್ನು ತನಿಖೆಗೆ ಒಳಪಡಿಸಬೇಕು,
ಅದರಂತೆ ತಾಲೂಕಿನ ಸೋಮಗುದ್ದು ಗ್ರಾಮ ಪಂಚಾಯತಿ
ವ್ಯಾಪ್ತಿಯಲ್ಲಿ 2024 25 ನೇ ಸಾಲಿನ ಈ ಹಿಂದಿನ ಪಿಡಿಒ 15ನೇ ಹಣಕಾಸು
ಯೋಜನೆಯಲ್ಲಿ ಚರಂಡಿ ಡಕ್ ನಿರ್ಮಾಣ ಚಿಕ್ಕಮಧುರೆ
ಗ್ರಾಮದ ಎಸ್ ಸಿ ಕಾಲೋನಿಯ ಚರಂಡಿ ಕಾಮಗಾರಿ,
ಹಿರೇಮಧುರೆ ಗಂಜಿಗುಂಟೆ ಗ್ರಾಮಗಳಲ್ಲಿ ನೈರ್ಮಲ್ಯಕರಣ
ಕಾಮಗಾರಿ ,ಹೈ ಮಾಸ್ಟ್ ವಿದ್ಯುತ್ ದೀಪ ಅಳವಡಿಕೆ
ಸೇರಿದಂತೆ ಹಲವು ಅಕ್ರಮಗಳನ್ನು ಎಸಗಿರುವುದು
ಬೆಳಕಿಗೆ ಬಂದಿದ್ದು ನಕಲಿ ಬಿಲ್ಗಳನ್ನು ಸೃಷ್ಟಿಸಿ ಹಣ
ಬಿಡುಗಡೆಗೊಳಿಸಿ ಅಕ್ರಮದಲ್ಲಿ ಭಾಗಿಯಾಗಿದ್ದು ಈ ಬಗ್ಗೆ
ದಾಖಲೆಗಳನ್ನು ಸಲ್ಲಿಸುತ್ತಿದ್ದು ತಪ್ಪಿತಸ್ಥನ ವಿರುದ್ಧ
ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಬೇಕು ಎಂದು
ಒತ್ತಾಯಿಸಿದರು.
ದಲಿತ ಸಂಘರ್ಷ ಸಮಿತಿಯ ಸಂಚಾಲಕ ನಾಗಭೂಷಣ್
ಮಾತನಾಡಿ, ಎನ್ ಆರ್ ಇ ಜಿ ಯೋಜನೆಯಲ್ಲಿ ಜನರು
ಗುಳೆ ಹೋಗುವುದನ್ನು ತಪ್ಪಿಸಿ ಕೂಲಿ ಕಾರ್ಮಿಕರಿಗೆ ಕೆಲಸ
ನೀಡುವ ಯೋಜನೆಯಾಗಿದ್ದು ಆದರೆ ಜೆಸಿಬಿ ಯಂತ್ರ
ಬಳಸಿ ಕಾಮಗಾರಿಗಳನ್ನು ನಡೆಸಿ ನೆಪಕ್ಕೆ ಮಾತ್ರ ಕೂಲಿ
ಕಾರ್ಮಿಕರನ್ನು ಬಳಸಿಕೊಂಡು ಛಾಯಾಚಿತ್ರಗಳನ್ನು ತೆಗೆಸಿ
ಅಕ್ರಮವಾಗಿ ಸರ್ಕಾರದ ಹಣವನ್ನು ಲೂಟಿ
ಹೊಡೆಯುತ್ತಿದ್ದಾರೆ ಇದು ಕೇವಲ ಸೋಮಗದ್ದು ಗ್ರಾಮ
ಪಂಚಾಯಿತಿ ಮಾತ್ರವಲ್ಲದೆ ತಾಲೂಕಿನ ಹಲವು ಗ್ರಾಮ
ಪಂಚಾಯಿತಿಗಳಲ್ಲಿ ಈ ರೀತಿಯ ಕಾರ್ಯಗಳು
ನಡೆಯುತ್ತಿದ್ದು ಇದರ ಬಗ್ಗೆ ಹಲವು ಬಾರಿ ಮನವಿ
ಮಾಡಿದ್ದರು ಯಾವುದೇ ಕ್ರಮ ಕೈಗೊಂಡಿಲ್ಲ ಕೂಡಲೇ
ಇಂತಹ ಅಕ್ರಮ ಎಸಗುವ ಅಧಿಕಾರಿಗಳ ವಿರುದ್ಧ ಕಠಿಣ
ಕ್ರಮ ಕೈಗೊಂಡು ಸರ್ಕಾರದ ಹಣವನ್ನು ಮುಟ್ಟುಗಲು
ಹಾಕಿಕೊಂಡು ಗ್ರಾಮೀಣ ಪ್ರದೇಶಗಳ ಅಭಿವೃದ್ಧಿಗೆ
ಬಳಸಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿ ನಗರಸಭೆ ನಾಮ ನಿರ್ದೇಶಕ ಸದಸ್ಯ
ವೀರಭದ್ರ, ಹೊನ್ನೂರು ಸ್ವಾಮಿ, ಗ್ರಾಮಸ್ಥರಾದ ಕಲ್ಲೇಶ್,
ಆರ್ ರುದ್ರಮನಿ ,ಸಂತೋಷ್, ಮನು ನವೀನ್, ಕುಮಾರ್,
ಶಿಲ್ಪ ,ಸಹನಾ ,ಆರ್ ವೆಂಕಟೇಶ್ ,ಮಧು ಲಕ್ಷ್ಮಣ ಮಾರ
ಸೇರಿದಂತೆ ಹಲವರು ಉಪಸ್ಥಿತರಿದ್ದರು