ಬೋಸೆದೇವರಹಟ್ಟಿ ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ ಡಿ. ಧನಂಜಯ.
ನಾಯಕನಹಟ್ಟಿ:: ಶ್ರೀ ಶ್ರೀ ಭಗೀರಥ ಗುರುಪೀಠದ ಪುರುಷೋತ್ತಮಾನಂದಪುರಿ ಮಹಾ ಸ್ವಾಮೀಜಿಯವರ 56ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಬ್ಯಾಗ್ ವಿತರಣೆ ಮಾಡಲಾಗಿದೆ ಎಂದು ಡಿ ಧನಂಜಯ ಹೇಳಿದರು.
ಸೋಮವಾರ ಪಟ್ಟಣ ಪಂಚಾಯತಿ ವ್ಯಾಪ್ತಿಯ ಬೋಸೆದೇವರಹಟ್ಟಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಭಗೀರಥ ಗುರುಪೀಠದ ಶ್ರೀ ಶ್ರೀ ಪುರುಷೋತ್ತಮನಂದಪುರಿ ಮಹಾ ಸ್ವಾಮೀಜಿಯವರ 56ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ಬ್ಯಾಗ್ ವಿತರಣೆ ಮಾಡಿ ಮಾತನಾಡಿದ ಅವರು ಶ್ರೀ ಶ್ರೀ ಪುರುಷೋತ್ತಮನಂದಪುರಿ ಸ್ವಾಮೀಜಿಯ ತಾಯಿಯ ತವರೂರು ನಮ್ಮ ಬೋಸೆದೇವರಹಟ್ಟಿ ಗ್ರಾಮದವರು ಆದ್ದರಿಂದ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಶ್ರೀಗಳು ಪ್ರತಿ ವರ್ಷ ಅವರ ಹುಟ್ಟು ಹಬ್ಬದ ಪ್ರಯುಕ್ತ ವಿದ್ಯಾರ್ಥಿಗಳಿಗೆ ಪೆನ್ನು ಪುಸ್ತಕ ಬ್ಯಾಗು ಹೀಗೆ ಅನೇಕ ವಿಧದ ವಸ್ತುಗಳನ್ನು ಕೊಡಿಸುತ್ತಾ ಬಂದಿದ್ದಾರೆ ಆದ್ದರಿಂದ ಈ ವರ್ಷ 56ನೇ ವರ್ಷದ ಹುಟ್ಟು ಹಬ್ಬದ ಪ್ರಯುಕ್ತ ನಮ್ಮೂರಿನ ಶಾಲೆಯ ವಿದ್ಯಾರ್ಥಿಗಳಿಗೆ ಮಾಡಲಾಗಿದೆ ಎಂದರು.
ಇದೇ ವೇಳೆ ನಾಯಕನಹಟ್ಟಿ ಹೋಬಳಿ ನೀರಾವರಿ ಹಾಗೂ ಸಾಮಾಜಿಕ ಹೋರಾಟ ಸಮಿತಿಯ ಅಧ್ಯಕ್ಷ ಜಿ ಬಿ ಮುದಿಯಪ್ಪ ಮಾತನಾಡಿದ ಶ್ರೀಗಳು ಈ ದಿನ ಶಾಲೆಯ ವಿದ್ಯಾರ್ಥಿಗಳಿಗೆ ಬ್ಯಾಗ ವಿತರಣೆ ಮಾಡಿರೋದು ಸಂತಸದ ವಿಷಯ ಶ್ರೀ ಪುರುಷೋತ್ತಮಾನಂದಪುರಿ ಮಹಾಸ್ವಾಮಿಗಳು ಸಿರಿಗೆರೆ ಶ್ರೀಗಳ ಜೊತೆಗೂಡಿ ಬಯಲು ಸೀಮೆ ಬರದ ನಾಡಿಗೆ ಈ ಭಾಗದ ಭದ್ರಾ ಮೇಲ್ದಂಡೆ ಯೋಜನೆಗೆ ಧ್ವನಿ ಎತ್ತಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಪಟ್ಟಣ ಪಂಚಾಯತಿ ಸದಸ್ಯರಾದ ಪಿ.ಓಬಯ್ಯ ದಾಸ್, ಬೊಸಮ್ಮ ಮಂಜುನಾಥ್, ಊರಿನ ಗ್ರಾಮಸ್ಥರಾದ ವೈ ಮುತ್ತಪ್ಪ, ಡಿ ಬಿ. ಬೋರಯ್ಯ, ನಾಗರಾಜ್, ಶಿವಮೂರ್ತಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ಬಿ.ಜಿ. ಗೌರಮ್ಮ, ಶಿಕ್ಷಕ ಬುಡೆನ್, ಬಿ ಲೋಕೇಶ್, ಶಿಕ್ಷಕಿರಾದ ಟಿ, ಶಿವಮ್ಮ, ಜಿ ನಾಗರತ್ನ ರಾಧಾ ಮತ್ತು ಜಯಲಕ್ಷ್ಮಿ ಸೇರಿದಂತೆ ವಿದ್ಯಾರ್ಥಿ-ವಿದ್ಯಾರ್ಥಿನಿಯರು ಗ್ರಾಮಸ್ಥರು ಉಪಸ್ಥಿತರಿದ್ದರು